‘ಪುಟ್ಟಕ್ಕ’ನ ಮಗಳು ಸ್ನೇಹಾ ಅಂತ್ಯ ಸಂಸ್ಕಾರ; ಕಣ್ಣೀರು ಹಾಕಿದ ವೀಕ್ಷಕರು
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಸ್ನೇಹಾ (ಸಂಜನಾ ಬುರ್ಲಿ) ಅವರ ಅನಿರೀಕ್ಷಿತ ಮರಣವು ವೀಕ್ಷಕರನ್ನು ಆಘಾತಕ್ಕೀಡು ಮಾಡಿದೆ. ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಸ್ನೇಹಾ ಅವರ ಸಾವು ಧಾರಾವಾಹಿಯ ಮುಂದಿನ ಭಾಗಗಳ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದು ಕುತೂಹಲಕರವಾಗಿದೆ. ವೀಕ್ಷಕರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಧಾರಾವಾಹಿಯ ನಿರ್ದೇಶಕರ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಯಾರೂ ಊಹಿಸದ ಟ್ವಿಸ್ಟ್ ಬಂದುಬಿಟ್ಟಿದೆ. ಪುಟ್ಟಕ್ಕನ ಮಗಳು ಸ್ನೇಹಾ (ಸಂಜನಾ ಬುರ್ಲಿ) ನಿಧನ ಹೊಂದಿದ್ದಾಳೆ. ಈ ಬೆಳವಣಿಗೆಯಿಂದ ಧಾರಾವಾಹಿಯ ನಿರ್ದೇಶಕರ ಮೇಲೆ ವೀಕ್ಷಕರಿಗೆ ಸಿಟ್ಟು ಬರುವಂತೆ ಆಗಿದೆ. ಸದ್ಯ ಈ ಟ್ವಿಸ್ಟ್ನ ಯಾರೂ ಒಪ್ಪಿಕೊಳ್ಳುತ್ತಿಲ್ಲ. ಸದ್ಯ ಜೀ ಕನ್ನಡ ಬಿಡುಗಡೆ ಮಾಡಿರೋ ಪ್ರೋಮೋ ನೋಡಿ ಎಲ್ಲರೂ ಭಾವುಕರಾಗಿದ್ದಾರೆ.
ಸ್ನೇಹಾ ಡಿಸಿ ಆಗಬೇಕು ಎಂದು ಕನಸು ಕಂಡವಳು. ಆ ಕನಸನ್ನು ಈಡೇರಿಸಿಕೊಂಡಳು. ಡಿಸಿ ಆದ ವಿಚಾರ ಎಲ್ಲರಿಗೂ ಖುಷಿ ನೀಡಿತ್ತು. ಆದರೆ, ಈ ಖುಷಿ ಹೆಚ್ಚು ದಿನ ಉಳಿದಿಲ್ಲ. ಸ್ನೇಹಾ ಕಾರು ಅಪಘಾತದಲ್ಲಿ ನಿಧನ ಹೊಂದಿದ್ದಾಳೆ. ಈ ರೀತಿ ಅಪಘಾತ ಆಗೋದು ನಂತರ ಬದುಕಿ ಬರೋದೆಲ್ಲ ಧಾರಾವಾಹಿಯಲ್ಲಿ ಸಾಮಾನ್ಯ. ‘ಪುಟ್ಟಕನ್ನ ಮಕ್ಕಳು’ ಧಾರಾವಾಹಿಯಲ್ಲೂ ಹಾಗೆಯೇ ಆಗಬಹುದು ಎಂದು ವೀಕ್ಷಕರು ಊಹಿಸಿದ್ದರು. ಆದರೆ, ಊಹೆ ತಪ್ಪಾಗಿದೆ.
ಅಪಘಾತದ ಬಳಿಕ ಅಂಬುಲೆನ್ಸ್ಗಾಗಿ ಕಂಠಿ ಹುಡುಕಾಡಿದ್ದ. ಆದರೆ, ಅಂಬುಲೆನ್ಸ್ ಸಿಗಲೇ ಇಲ್ಲ. ಕೊನೆಗೆ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಸ್ನೇಹಾ ನಿಧನ ಹೊಂದಿದ್ದಾಳೆ. ‘ಚಿಕಿತ್ಸೆ ಫಲಕಾರಿ ಆಗಿಲ್ಲ’ ಎಂದು ವೈದ್ಯರು ಹೇಳಿದರು. ಇದನ್ನು ಕೇಳಿ ಕಂಠಿ ಅರಗಿಸಿಕೊಳ್ಳೋಕೆ ಆಗಿಲ್ಲ. ವೀಕ್ಷಕರಿಗೂ ಹಾಗೆಯೇ ಆಗಿದೆ.
View this post on Instagram
ಇದನ್ನೂ ಓದಿ: ‘ಪುಟ್ಟಕ್ಕನ ಮಕ್ಕಳು’: ಅಪಘಾತದಲ್ಲಿ ಸ್ನೇಹಾ ಮರಣ; ಕೊನೆ ಆಯಿತು ಸಂಜನಾ ಬುರ್ಲಿ ಪಾತ್ರ
‘ಆರಿಹೋಗಿದೆ ಪುಟ್ಟಕ್ಕನ ಮನೆಯ ಬೆಳಕು. ಮುದ್ದಿನ ಮಡದಿ ಸ್ನೇಹಾಗೆ ಕಂಠಿಯ ಕಣ್ಣೀರ ವಿದಾಯ’ ಎಂದು ಪ್ರೋಮೋ ಹಂಚಿಕೊಳ್ಳಲಾಗಿದೆ. ‘ಈ ಧಾರವಾಹಿ ಅಲ್ಲಿ ಸ್ನೇಹನೆ ಮುಖ್ಯ ಪಾತ್ರದಲ್ಲಿ ಇದ್ದಿದ್ದು. ಈಗ ಅವಳೇ ಇಲ್ಲ ಅಂದಮೇಲೆ ಈ ಧಾರಾವಾಹಿ ಯಾಕೆ ನೋಡಬೇಕು. ನಾವು ಇನ್ನೂ ಮುಂದೆ ನೋಡಲ್ಲ’ ಎಂದು ಕಮೆಂಟ್ ಮಾಡಿದ್ದಾರೆ. ‘ಮುಂದೆ ಸೀರಿಯಲ್ ಆಸಕ್ತಿದಾಯಕವಾಗಿ ಇರೋದಿಲ್ಲ. ಸ್ನೇಹ ಕ್ಯಾರೆಕ್ಟರ್ ಇಲ್ಲ ಅಂದರೆ ಜನ ಸೀರಿಯಲ್ ನೋಡುದು ಕಡಿಮೆ ಮಾಡುತ್ತಾರೆ. ಹಾಗಾಗಿ ಸೀರಿಯಲ್ ಎಂಡಿಂಗ್ ಮಾಡೋದು ಬೆಟರ್ ಅನಿಸುತ್ತದೆ’ ಎಂದು ಕೆಲವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:29 pm, Sat, 26 October 24