ಬಿಗ್ ಬಾಸ್ ಮನೆಯಲ್ಲಿ ನಿಷ್ಪ್ರಯೋಜಕ ವ್ಯಕ್ತಿ ಯಾರು? ಕೇಳಿಬಂತು ಐಶ್ವರ್ಯಾ, ಮಾನಸಾ ಹೆಸರು

ಬಿಗ್ ಬಾಸ್​ ಮನೆಗೆ ಟ್ವಿಸ್ಟ್ ನೀಡಲು ರಾಧಾ ಹಿರೇಗೌಡರ್​ ಅವರು ಬಂದಿದ್ದಾರೆ. ಎಲ್ಲ ಸದಸ್ಯರನ್ನು ಒಂದು ಕಡೆ ಸೇರಿಸಿ ಅವರು ಕೆಲವು ವಿಷಯಗಳನ್ನು ಚರ್ಚೆ ಮಾಡಿದ್ದಾರೆ. ಈ ಮನೆಯ ನಿಷ್ಪ್ರಯೋಜಕ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಉತ್ತರ ಪಡೆಯುವ ಪ್ರಯತ್ನ ಮಾಡಿದ್ದಾರೆ. ಈ ವಾದದಲ್ಲಿ ಎಲ್ಲ ಸದಸ್ಯರು ಭಾಗಿ ಆಗಿದ್ದಾರೆ. ಆಗ ಮಾನಸಾ ಮತ್ತು ಐಶ್ವರ್ಯಾ ಅವರ ಹೆಸರು ಬಂತು.

ಬಿಗ್ ಬಾಸ್ ಮನೆಯಲ್ಲಿ ನಿಷ್ಪ್ರಯೋಜಕ ವ್ಯಕ್ತಿ ಯಾರು? ಕೇಳಿಬಂತು ಐಶ್ವರ್ಯಾ, ಮಾನಸಾ ಹೆಸರು
ಐಶ್ವರ್ಯಾ, ಮಾಸನಾ
Follow us
ಮದನ್​ ಕುಮಾರ್​
|

Updated on: Oct 25, 2024 | 10:26 PM

‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ಎರಡು ತಂಡ ಮಾಡಲಾಗಿದೆ. ಎರಡು ರಾಜಕೀಯ ಪಕ್ಷಗಳ ಥೀಮ್​ನಲ್ಲಿ ಪೈಪೋಟಿ ನಡೆಯುತ್ತಿದೆ. ಈ ನಡುವೆ ಅತಿಥಿಯಾಗಿ ಸುದ್ದಿ ವಾಚಕಿ, ಹಿರಿಯ ಪತ್ರಕರ್ತೆ ರಾಧಾ ಹಿರೇಗೌಡರ್ ಅವರು ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ. ಅವರು ಎರಡೂ ತಂಡಗಳನ್ನು ಕೂರಿಸಿಕೊಂಡು ಒಂದು ವಿಷಯದ ಇತ್ಯರ್ಥ ಮಾಡಿದ್ದಾರೆ. ‘ಈ ಮನೆಯಲ್ಲಿನ ಎರಡೂ ತಂಡಗಳಲ್ಲಿ ಇರುವ ನಿಷ್ಪ್ರಯೋಜಕ ವ್ಯಕ್ತಿ ಯಾರು’ ಎಂದು ಬಿಗ್ ಬಾಸ್ ಕೇಳಿದ ಪ್ರಶ್ನೆಗೆ ಮನೆಯ ಸದಸ್ಯರು ವಾದ-ಪ್ರತಿವಾದ ಮಾಡಿದ್ದಾರೆ. ಈ ಚರ್ಚೆಯನ್ನು ರಾಧಾ ಹಿರೇಗೌಡರ್​ ಅವರು ನಡೆಸಿಕೊಟ್ಟಿದ್ದಾರೆ.

ಬಿಗ್ ಬಾಸ್​ ಮನೆಯ ನಿಷ್ಪ್ರಯೋಜಕ ವ್ಯಕ್ತಿ ಮಾನಸಾ ಎಂದು ಉಗ್ರಂ ಮಂಜು ಅವರು ಹೇಳಿದ್ದಾರೆ. ಅದಕ್ಕೆ ಅವರು ಹಲವು ಕಾರಣಗಳನ್ನು ನೀಡಿದ್ದಾರೆ. ‘ಹೆಣ್ಣಿನ ಬಗ್ಗೆ ಮಾನಸಾ ಈಗತಾನೇ ಕೆಟ್ಟದಾಗಿ ಮಾತಾಡಿದರು. ಎಷ್ಟೋ ಬಾರಿ ಮನೆಯ ನಿಯಮವನ್ನು ಅವರು ಮುರಿದಿದ್ದಾರೆ. ಇದರಿಂದ ಮನೆಯಲ್ಲಿ ತೊಂದರೆ ಆಗಿದೆ. ಹೇಳಿದ್ದನ್ನು ಅವರು ಕೇಳಿಸಿಕೊಳ್ಳಲ್ಲ. ರಂಜಿತ್ ಮನೆಯಿಂದ ಔಟ್ ಹೋದಾಗ ಮಾನಸಾ ಬಹಳ ಅತ್ತರು. ಆದರೆ ಸಮಾಧಾನ ಮಾಡಲು ಹೋದಾಗ, ಈ ರೀತಿ ಅತ್ತಾಗಲೇ ನಾವು ಹೆಚ್ಚಾಗಿ ಕಾಣಿಸಿಕೊಳ್ಳೋದು ಅಂತ ಹೇಳಿದರು’ ಎಂದು ಮಾನಸಾ ಮೇಲೆ ಉಗ್ರಂ ಮಂಜು ಅವರು ಆರೋಪಗಳ ಮಳೆ ಸುರಿಸಿದರು.

ರಂಜಿತ್ ಎಲಿಮಿನೇಷನ್​ ವಿಚಾರದಲ್ಲಿ ತಾವು ಅತ್ತಿದ್ದು ನಾಟಕ ಎಂದು ಬಿಗ್ ಬಾಸ್​ ಮನೆಯ ಸದಸ್ಯರು ಹೇಳಿದ್ದಕ್ಕೆ ಮಾನಸಾ ಅವರಿಗೆ ಬೇಸರ ಆಯಿತು. ‘ಈ ರೀತಿ ಅತ್ತರೆ ನಾವು ಹೆಚ್ಚಾಗಿ ಕಾಣಿಸಿಕೊಳ್ತೀವಿ’ ಎಂಬ ಮಾತನ್ನು ತಾನು ಹೇಳಿಯೇ ಇಲ್ಲ ಎಂದು ಮಾನಸಾ ವಾದಿಸಿದರು. ಆದರೆ ಗೌತಮಿ ಜಾದವ್​ ಕೂಡ ‘ಮಾನಸಾ ಆ ರೀತಿ ಹೇಳಿದ್ದು ನಿಜ’ ಎಂದು ಸಾಕ್ಷಿ ನೀಡಿದರು. ಇದರಿಂದ ಬೇಸರ ಮಾಡಿಕೊಂಡ ಮಾನಸಾ ಅವರು ಎಮೋಷನಲ್ ಆದರು.

ಇದನ್ನೂ ಓದಿ: ನೀವು ಹೊರಗಡೆ ಚೆನ್ನಾಗಿ ಕಾಣಿಸಲ್ಲ: ಮಾನಸಾಗೆ ನೇರವಾಗಿ ಹೇಳಿದ ಐಶ್ವರ್ಯಾ

ಮತ್ತೊಂದು ಪಕ್ಷದಿಂದ ವಾದ ಮಂಡಿಸಲು ಬಂದ ಮಾಸನಾ ಅವರು ‘ಈ ಮನೆಯ ನಿಷ್ಪ್ರಯೋಜಕ ವ್ಯಕ್ತಿ ಐಶ್ವರ್ಯಾ’ ಎಂದು ಹೇಳಿದರು. ಅದಕ್ಕೆ ಕಾರಣವನ್ನೂ ಕೂಡ ನೀಡಿದರು. ‘ಅವರು ಎಲ್ಲಿ ಇರ್ತಾರೆ ಅಂತನೇ ಗೊತ್ತಿಲ್ಲ. ಬರೀ ಮೇಕಪ್ ಮಾಡಿಕೊಂಡು ರೂಮ್​ನಲ್ಲೇ ಇರ್ತಾರೆ’ ಎಂದರು ಮಾನಸಾ. ಆದರೆ ಮಾನಸಾ ಹೇಳಿದ್ದನ್ನು ಐಶ್ವರ್ಯಾ ಅವರು ಒಪ್ಪಿಕೊಳ್ಲಲೇ ಇಲ್ಲ. ಹಾಗಾಗಿ ಅವರು ಅಳಲು ಆರಂಭಿಸಿದರು. ‘ನಾನು ಪಾತ್ರ ತೊಳೆಯೋದ್ರಿಂದ ಹಿಡಿದ ಅಡುಗೆ ಮಾಡುವ ತನಕ ಎಲ್ಲವನ್ನೂ ಮಾಡಿದ್ದೇನೆ. ಕ್ಯಾಪ್ಟನ್ ಆಗೋಕು ಮುಂಚೆ ಎರಡು ದಿನ ಅಡುಗೆ ಮಾಡಿದ್ದೇನೆ’ ಎಂದು ತಮ್ಮನ್ನು ಐಶ್ವರ್ಯಾ ಸಮರ್ಥಿಸಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ