‘ಬಿಗ್ ಬಾಸ್’ (Bigg Boss) ಮನೆಗೆ ಎಂಟ್ರಿ ಕೊಡಬೇಕು ಎಂಬುದು ಅನೇಕರ ಆಸೆ ಆಗಿರುತ್ತದೆ. ಆದರೆ, ಈ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಈ ರೀತಿಯ ಅಪರೂಪದ ಅವಕಾಶವನ್ನು ಪಡೆದುಕೊಂಡಿದ್ದಾರೆ ನವಾಜ್. ಸಿನಿಮಾ ರಿವ್ಯೂ ಮೂಲಕ ಅವರು ಎಲ್ಲರ ಗಮನ ಸೆಳೆದಿದ್ದರು. ಅವರು ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 9’ಕ್ಕೆ (BBK9) ಎಂಟ್ರಿ ಕೊಟ್ಟಿದ್ದಾರೆ. ಅವರ ಡೈಲಾಗ್ ಡೆಲಿವರಿಯಲ್ಲಿ ರೈಮಿಂಗ್ ಇರುತ್ತದೆ. ಈ ಕಾರಣಕ್ಕೆ ಅವರು ಇಷ್ಟವಾಗುತ್ತಾರೆ. ಅವರಿಗೆ ಈಗಿನ್ನೂ 19 ವರ್ಷ ಅನ್ನೋದು ವಿಶೇಷ.
‘ನನ್ನನ್ನು ಜನರು ಗುರುತಿಸುತ್ತಿದ್ದಾರೆ. ಸಾಮಾನ್ಯವಾಗಿ ಸಿನಿಮಾ ನೋಡಿ ಎಂದರೆ ಯಾರೂ ನೋಡಲ್ಲ. ಆಗ ನಾನು ಈ ಟೆಕ್ನಿಕ್ ಶುರು ಮಾಡಿದೆ. ನನ್ನಿಂದಾಗಿ ಒಂದಷ್ಟು ಮಂದಿ ಕನ್ನಡ ಸಿನಿಮಾ ನೋಡ್ತಾರೆ ಅನ್ನೋದು ಖುಷಿಯ ವಿಚಾರ. ಸುಮಾರಷ್ಟು ಜನರು ನನ್ನ ರಿವ್ಯೂ ನೋಡಿ ಬೈದರು. ನಾನು ಹುಚ್ಚಾನೇ. ಅವಾಗ ಯಾರೂ ಇರಲಿಲ್ಲ. ಈಗ ಥಿಯೇಟರ್ಗೆ ಬಂದ್ರೆ ಎಲ್ಲರೂ ನನಗೆ ಮಾತನಾಡೋಕೆ ಕೊಡ್ತಾರೆ’ ಎಂದು ಹೇಳಿಕೊಂಡಿದ್ದಾರೆ ನವಾಜ್.
‘ಕಾಮಿಡಿಯನ್ ಆಗಬೇಕು ಎಂಬುದು ನನ್ನ ಆಸೆ. ಬಿಗ್ ಬಾಸ್ ವೇದಿಕೆ ಏರಿದಾಗಲೇ ನಾನು ಗೆದ್ದೆ. ನನಗೆ ಕಸ ಗುಡಿಸೋಕೂ ಬರಲ್ಲ’ ಎಂದು ನವಾಜ್ ತಮ್ಮ ಬಗ್ಗೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಒಂದೂವರೆ ವರ್ಷದ ಮಗುವನ್ನು ಮನೆಯಲ್ಲಿ ಬಿಟ್ಟು ಬಿಗ್ ಬಾಸ್ ಮನೆಗೆ ಬಂದ ನಟಿ ಮಯೂರಿ
‘ಬಿಗ್ ಬಾಸ್ ಕನ್ನಡ ಸೀಸನ್ 9’ ಆರಂಭ ಆಗಿದೆ. ಕಿಚ್ಚ ಸುದೀಪ್ ಅವರು ಪ್ರತಿಬಾರಿಯಂತೆ ಈ ಬಾರಿಯೂ ಶೋ ನಡೆಸಿಕೊಡುತ್ತಿದ್ದಾರೆ. ಅವರು ಗ್ರ್ಯಾಂಡ್ ಆಗಿ ವೇದಿಕೆಗೆ ಎಂಟ್ರಿ ನೀಡಿದ್ದಾರೆ. ಈ ಸೀಸನ್ನಲ್ಲಿ ಹೊಸ ಸ್ಪರ್ಧಿಗಳ ಜತೆ ಹಳೆಯ ಸ್ಪರ್ಧಿಗಳೂ ಇರಲಿದ್ದಾರೆ. ಅಂದರೆ, ಈ ಮೊದಲೇ ಬಿಗ್ ಬಾಸ್ ಮನೆ ಪ್ರವೇಶಿಸಿದ್ದ ಸ್ಪರ್ಧಿಗಳು ಈ ಬಾರಿ ಇರಲಿದ್ದಾರೆ.
Published On - 7:27 pm, Sat, 24 September 22