‘ತಾನ್ಯಾ ಮಿತ್ತಲ್ ಬಾಯಿಂದ ಕೆಟ್ಟ ಶಬ್ದ ಬಂದಿಲ್ಲ, ರಾಮ, ರಾಮ ಮಾತ್ರ ಹೇಳ್ತಾರೆ’; ಸಲ್ಲು ಪ್ರಶಂಸೆ

ಸಲ್ಮಾನ್ ಖಾನ್ ‘ಬಿಗ್ ಬಾಸ್ ಹಿಂದಿ 19’ರಲ್ಲಿ ತಾನ್ಯಾ ಮಿತ್ತಲ್ ನಡೆಗೆ ಮೆಚ್ಚುಗೆ ಸೂಚಿಸಿದ್ದಾರೆ. ತಾನ್ಯಾ ಎಂದಿಗೂ ಕೆಟ್ಟ ಪದ ಬಳಸದಿರುವುದಕ್ಕೆ ಶ್ಲಾಘಿಸಿದ್ದಾರೆ. ಆದರೆ, ತಾನ್ಯಾ ವಿರುದ್ಧ ವಂಚನೆ ಆರೋಪವಿದ್ದು, ಕೇಸ್ ದಾಖಲಾಗಿದೆ. ಬಿಗ್ ಬಾಸ್ ಮನೆಯಲ್ಲೇ ಅವರನ್ನು ಬಂಧಿಸುವ ಸಾಧ್ಯತೆ ಕುರಿತು ಚರ್ಚೆ ನಡೆದಿದೆ.

‘ತಾನ್ಯಾ ಮಿತ್ತಲ್ ಬಾಯಿಂದ ಕೆಟ್ಟ ಶಬ್ದ ಬಂದಿಲ್ಲ, ರಾಮ, ರಾಮ ಮಾತ್ರ ಹೇಳ್ತಾರೆ’; ಸಲ್ಲು ಪ್ರಶಂಸೆ
ತಾನ್ಯಾ
Edited By:

Updated on: Oct 18, 2025 | 7:48 AM

ಸಲ್ಮಾನ್ ಖಾನ್ ಅವರು ‘ಬಿಗ್ ಬಾಸ್ ಹಿಂದಿ ಸೀಸನ್ 19’ ನಡೆಸಿಕೊಡುತ್ತಾ ಇದ್ದಾರೆ. ಅವರಿಂದ ಶೋಗೆ ಹೊಸ ಕಳೆ ಬಂದಿದೆ ಎಂದರೂ ತಪ್ಪಾಗಲಾರದು. ಅವರು ಸ್ಪರ್ಧಿಗಳನ್ನು ಹೊಗಳೋದಾಗಲಿ, ಅವರ ಬಗ್ಗೆ ಕೂಲ್ ಆಗಿ ಮಾತನಾಡೋದಾಗಲಿ ಕಡಿಮೆ. ಈಗ ತಾನ್ಯಾ ಮಿತ್ತಲ್ ಬಗ್ಗೆ ಸಲ್ಮಾನ್ ಖಾನ್ ಅವರು ಪ್ರಶಂಸೆ ಹೊರಹಾಕಿದ್ದಾರೆ. ಅವರ ಬಾಯಿಂದ ಯಾವುದೇ ಕೆಟ್ಟ ಪದ ಬಳಕೆ ಆಗಿಲ್ಲ ಎಂದು ಹೆಮ್ಮೆ ಹೊರಹಾಕಿದ್ದಾರೆ. ಈ ಹೊಗಳಿಕೆಯಿಂದ ತಾನ್ಯ ಕೂಡ ಖುಷಿ ಆದರು.

ತಾನ್ಯಾ ಮಿತ್ತಲ್ ಅವರು ಬಿಗ್ ಬಾಸ್​ಗೆ ಬಂದಾಗಿನಿಂದಲೂ ಗಮನ ಸೆಳೆಯುತ್ತಿದ್ದಾರೆ. ಅವರು ತಮ್ಮ ಹೆಸರಲ್ಲಿ ಸಾಕಷ್ಟು ಕಂಪನಿ ಇದೆ, ಕೋಟ್ಯಾಂತರ ರೂಪಾಯಿ ಆಸ್ತಿ ಇದೆ ಎಂದೆಲ್ಲ ಹೇಳಿಕೊಂಡಿದ್ದಾರೆ. ಇದನ್ನು ಕೆಲವರು ನಂಬಿದ್ದಾರೆ. ಬಿಗ್ ಬಾಸ್ ಮನೆಯಲ್ಲೇ ಕೆಲವರು ಇದರ ಬಗ್ಗೆ ಅನುಮಾನ ಹೊರಹಾಕಿದ್ದಾರೆ. ಈಗ ತಾನ್ಯಾ ಬಗ್ಗೆ ಸಲ್ಮಾನ್ ಖಾನ್ ಮೆಚ್ಚುಗೆಯ ಮಾತುಗಳನ್ನು ಆಡಿದರು.

ಇದನ್ನೂ ಓದಿ
ಒಂದೇ ದಿನ ಒಟಿಟಿಗೆ ಕಾಲಿಟ್ಟ ಕನ್ನಡದ ಎರಡು ಹಿಟ್ ಚಿತ್ರಗಳು; ಮಿಸ್ ಮಾಡಬೇಡಿ
ಅಶ್ವಿನಿಯ ಚಮಚ ಆದ ಜಾನ್ವಿ; ಹೇಳಿದಂತೆ ಕುಣೀತಾರೆ ತಕತೈ, ತಕತೈ
ರಕ್ಷಿತಾ ಗುಂಡಿಗೆ ಮೆಚ್ಚಲೇಬೇಕು; ಅಶ್ವಿನಿ-ಜಾನ್ವಿ ಕೂಗಾಡಿದರೂ ಜಗಲ್ಲೂ ಇಲ್ಲ
ಆಲಿಯಾ ಹೊಸ ಮನೆಯಲ್ಲಿ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಗಣಪತಿ ಮೂರ್ತಿ

‘ನೀಲಂ ಹಾಗೂ ತಾನ್ಯಾ ಕೆಟ್ಟ ಶಬ್ದ ಬಂದಿಲ್ಲ. ತಾನ್ಯಾ ವಿರುದ್ಧ ಯಾರಾದರೂ ಜಗಳ ಮಾಡಿದರೆ ಅವರು ರಾಮ್​, ರಾಮ್​ ರಾಮ್ ಎನ್ನುತ್ತಾರೆ. ಶಕ್ತಿ ಸಿಗಲಿ ಎಂದು ಅವರು ಆ ರೀತಿ ಮಾಡುತ್ತಾರೆ’ ಎಂದು ಸಲ್ಮಾನ್ ಖಾನ್ ಅವರು ಮೆಚ್ಚುಗೆ ಸೂಚಿಸಿದರು.  ಸಲ್ಮಾನ್ ಖಾನ್ ಅವರ ಮಾತನ್ನು ಅನೇಕರು ಒಪ್ಪಿಕೊಂಡಿದ್ದಾರೆ. ತಾನ್ಯಾ ಅವರು ಬ್ಯೂಟಿ ಹಾಗೂ ಬ್ರಿಲಿಯನ್ಸಿ ಒಟ್ಟಿಗೆ ಇದೆ ಎಂದು ಅನೇಕರು ಹೇಳಿದ್ದು ಇದೆ.

ಇದನ್ನೂ ಓದಿ: ಬಿಗ್ ಬಾಸ್​ ಮನೆಯಲ್ಲಿದ್ದ ತಾನ್ಯಾ ಮಿತ್ತಲ್ ಶೀಘ್ರವೇ ಅರೆಸ್ಟ್?

ತಾನ್ಯಾ ಅವರು ವಿವಾದಗಳ ಮೂಲಕವೂ ಸುದ್ದಿಯಲ್ಲಿದ್ದಾರೆ. ಅವರು ಅನೇಕ ಸುಳ್ಳುಗಳನ್ನು ಹೇಳಿದ್ದಾರೆ ಮತ್ತು ತಮಗೆ ಮೋಸ ಮಾಡಿದ್ದಾರೆ ಎಂದು ವ್ಯಕ್ತಿಯೋರ್ವ ದೂರು ನೀಡಿದ್ದಾನೆ. ಹೀಗಾಗಿ, ಅವರ ವಿರುದ್ಧ ಕೇಸ್ ದಾಖಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಅವರನ್ನು ಬಂಧಿಸಿ ಕರೆದುಕೊಂಡು ಹೋಗಲಾಗುತ್ತದೆಯೇ ಎಂಬ ಪ್ರಶ್ನೆಯೂ ಮೂಡಿದೆ. ಅವರು ಫಿನಾಲೆವರೆಗೂ ಇರುತ್ತಾರೆ ಎಂಬುದು ಅನೇಕರ ಅಭಿಪ್ರಾಯ. ಈ ವಿಚಾರ ವೀಕೆಂಡ್​ನಲ್ಲಿ ಚರ್ಚೆ ಆಗುತ್ತದೆಯಾ ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.