ಸಮಂತಾ ಅಕ್ಕಿನೇನಿ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ನಾಗ ಚೈತನ್ಯ ಜತೆ ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಹೊರ ಬಿದ್ದಾಗಿನಿಂದಲೇ ಅವರ ಬಗ್ಗೆ ಸಾಕಷ್ಟು ವಿಚಾರಗಳು ಚರ್ಚೆಗೆ ಬಂದಿವೆ. ಇನ್ನು, ಅವರು ವಿಚ್ಛೇದನ ಪಡೆದ ನಂತರದಲ್ಲಿ ಅವರ ಬಗ್ಗೆ ಹುಟ್ಟಿಕೊಂಡ ವದಂತಿ ಒಂದೆರಡಲ್ಲ. ಸಮಂತಾ ಅವರಿಗೆ ಅಕ್ಕಿನೇನಿ ಕುಟುಂಬ 200 ಕೋಟಿ ಜೀವನಾಂಶ ನೀಡೋಕೆ ಮುಂದಾಗಿದೆ, ಆದರೆ ಸಮಂತಾ ಇದನ್ನು ತಿರಸ್ಕರಿಸಿದ್ದಾರೆ ಎಂಬಿತ್ಯಾದಿ ಸುದ್ದಿ ಹರಿದಾಡಿತ್ತು. ಈಗ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ಸುದ್ದಿ ಆಗೋಕೆ ಕಿರುತೆರೆ ಕಾರಣ.
ಜೆಮಿನಿ ಟಿವಿಯಲ್ಲಿ ‘ಎವರು ಮೀಲೊ ಕೋಟಿಶ್ವರುಲು’ ಶೋ ಪ್ರಸಾರವಾಗುತ್ತಿದೆ. ‘ಕೌನ್ ಬನೇಗಾ ಕರೋಡ್ಪತಿಯ’ ತೆಲುಗು ವರ್ಷನ್ ಇದು. ಇದನ್ನು ಖ್ಯಾತ ನಟ ಜ್ಯೂ.ಎನ್ಟಿಆರ್ ನಡೆಸಿಕೊಡುತ್ತಿದ್ದಾರೆ. ಈ ಶೋಗೆ ಸಮಂತಾ ಅವರು ಅತಿಥಿಯಾಗಿ ಆಗಮಿಸಿದ್ದಾರೆ. ಈ ಶೋನ ಪ್ರೋಮೋವನ್ನು ಜೆಮಿನಿ ಟಿವಿ ಹಂಚಿಕೊಂಡಿದೆ.
ಸಮಂತಾ ಅವರು ಹಾಟ್ ಸೀಟ್ನಲ್ಲಿ ಕೂತಿದ್ದಾರೆ. ‘ಇದರಲ್ಲಿ ಕೂರೋಕೆ ತುಂಬಾನೇ ಭಯವಾಗುತ್ತಿದೆ. ನನಗೆ ಹಣವೇ ಬೇಡ’ ಎಂದಿದ್ದಾರೆ ಸಮಂತಾ. ಈ ವೇಳೆ ಜ್ಯೂ.ಎನ್ಟಿಆರ್ ಹಣ ಬೇಡವೇ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಸಮಂತಾ, ಹಣ ಬೇಕು ಎನ್ನುವ ಉತ್ತರ ನೀಡಿದ್ದಾರೆ.
#Samantha – #Ntr #EvaruMeeloKoteesawarulu Dussehra special episode. pic.twitter.com/LqWkL9LORC
— Siddhu Manchikanti (@SiDManchikanti) October 10, 2021
ಸಮಂತಾ ವಿಚ್ಛೇದನ ಪಡೆದ ನಂತರ ಒಂದು ಬ್ರೇಕ್ ಪಡೆದುಕೊಂಡಿದ್ದರು. ಆದರೆ, ಈಗ ಅವರು ಮತ್ತೆ ಕೆಲಸಕ್ಕೆ ಮರಳಿದ್ದಾರೆ. ಈ ಕಾರಣಕ್ಕೆ ಅವರು ಇತ್ತೀಚೆಗೆ ಜಾಹೀರಾತಿನ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದರು. ಇದರ ಜತೆಗೆ ಅವರು ಹೊಸ ಸಿನಿಮಾದ ಕಥೆ ಕೂಡ ಕೇಳುತ್ತಿದ್ದಾರೆ. ಇನ್ನು, ಅವರು ಹೈದರಾಬಾದ್ನಲ್ಲಿ ಉಳಿಯುತ್ತಾರೋ ಅಥವಾ ಇಲ್ಲವೋ ಎನ್ನುವ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಸಮಂತಾ ಶೀಘ್ರವೇ ಮುಂಬೈಗೆ ತೆರಳಲಿದ್ದಾರೆ ಎನ್ನಲಾಗಿದೆ. ಆದರೆ, ಸಮಂತಾ ಅವರು ಹೈದರಾಬಾದ್ ಬಿಟ್ಟು ಎಲ್ಲೂ ತೆರಳುವುದಿಲ್ಲ ಎಂದು ಹೇಳಿದ್ದಾರೆ. ಆದಾಗ್ಯೂ ಇದನ್ನು ನಂಬೋಕೆ ಅನೇಕರು ರೆಡಿ ಇಲ್ಲ.
ಇದನ್ನೂ ಓದಿ: ಅಬಾರ್ಷನ್, ಅಫೇರ್ ವದಂತಿ ವಿಚಾರದಲ್ಲಿ ಮೌನ ಮುರಿದ ಸಮಂತಾ
‘ತಾಯಿ ಆಗಲು ಬಯಸಿದ್ರು ಸಮಂತಾ, ಆದರೆ..’; ನಾಗ ಚೈತನ್ಯ ಜತೆಗಿನ ಡಿವೋರ್ಸ್ ಬಳಿಕ ನಿರ್ಮಾಪಕಿ ಅಚ್ಚರಿ ಹೇಳಿಕೆ
Published On - 6:42 pm, Sun, 10 October 21