AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಗಾದಿಗೆ ಕಲರ್ಸ್​ ಕನ್ನಡದಲ್ಲಿ ‘ಸವಿರುಚಿ’ ಮತ್ತೆ ಶುರು; ಬರ್ತಾರೆ ಬೆಳ್ಳುಳ್ಳಿ ಕಬಾಬ್​ ಚಂದ್ರು

ಕರ್ನಾಟಕದ ಬೇರೆ ಬೇರೆ ಊರುಗಳ ಪಾಕಪ್ರವೀಣರು ‘ಸವಿರುಚಿ’ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಜಾಹ್ನವಿ ಅವರು ನಿರೂಪಣೆ ಮಾಡಲಿದ್ದಾರೆ. ಅಡುಗೆ ಮಾಡುವುದಷ್ಟೇ ಅಲ್ಲದೇ, ಆಹಾರದ ಪೌಷ್ಟಿಕತೆಯ ಕುರಿತು ತಜ್ಞರ ಅಭಿಪ್ರಾಯ ಕೂಡ ಈ ಶೋನಲ್ಲಿ ಇರಲಿದೆ. ಯುಗಾದಿ ಪ್ರಯುಕ್ತ ‘ಸವಿರುಚಿ’ ಕಾರ್ಯಕ್ರಮದ ಹೊಸ ಸೀಸನ್​ ಆರಂಭ ಆಗಲಿದೆ.

ಯುಗಾದಿಗೆ ಕಲರ್ಸ್​ ಕನ್ನಡದಲ್ಲಿ ‘ಸವಿರುಚಿ’ ಮತ್ತೆ ಶುರು; ಬರ್ತಾರೆ ಬೆಳ್ಳುಳ್ಳಿ ಕಬಾಬ್​ ಚಂದ್ರು
ಸವಿರುಚಿ
ಮದನ್​ ಕುಮಾರ್​
|

Updated on: Mar 25, 2024 | 9:22 PM

Share

ಕನ್ನಡದ ಕಿರುತೆರೆಯ ಪ್ರೇಕ್ಷಕರಿಗೆ ಬಗೆಬಗೆಯ ಮನರಂಜನೆ ನೀಡಿರುವ ‘ಕಲರ್ಸ್​ ಕನ್ನಡ’ ವಾಹಿನಿ ಈಗ ಮತ್ತೆ ‘ಸವಿರುಚಿ’ (Saviruchi) ಕಾರ್ಯಕ್ರಮವನ್ನು ಆರಂಭಿಸಲು ಮುಂದಾಗಿದೆ. ಈ ಜನಪ್ರಿಯ ಅಡುಗೆ ಕಾರ್ಯಕ್ರಮಕ್ಕೆ ದೊಡ್ಡ ಪ್ರೇಕ್ಷಕವರ್ಗವಿದೆ. ಈ ವರ್ಷದ ಯುಗಾದಿ (Udagi 2024) ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುವ ರೀತಿಯಲ್ಲಿ ‘ಸವಿರುಚಿ’ ಕಾರ್ಯಕ್ರಮದ ಹೊಸ ಎಪಿಸೋಡ್​ಗಳು ಬಿತ್ತರ ಆಗಲಿವೆ ಎಂದು ಕಲರ್ಸ್​ ಕನ್ನಡ (Colors Kannada) ವಾಹಿನಿ ತಿಳಿಸಿದೆ. ಈ ಶೋನಲ್ಲಿ ‘ಬೆಳ್ಳುಳ್ಳಿ ಕಬಾಬ್​’ ಖ್ಯಾತಿಯ ಚಂದ್ರು ಕೂಡ ಇರಲಿದ್ದಾರೆ ಎಂಬುದು ವಿಶೇಷ. ಈ ಶೋ ಯಾವಾಗ ಪ್ರಸಾರ ಆಗಲಿದೆ? ಏನೆಲ್ಲ ಹೊಸತನ ಇರಲಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ..

‘ಸವಿರುಚಿ’ ಕಾರ್ಯಕ್ರಮ ಏಪ್ರಿಲ್ 9ರಿಂದ ಪ್ರಸಾರ ಆರಂಭಿಸಲಿದೆ. ಈ ಹೊಸ ಆವೃತ್ತಿಯನ್ನು ವೀಕ್ಷಕರು ಸೋಮವಾರದಿಂದ ಶನಿವಾರದ ತನಕ ಪ್ರತಿ ಮಧ್ಯಾಹ್ನ 12 ಗಂಟೆಗೆ ವೀಕ್ಷಿಸಬಹುದು. ಈ ಬಾರಿ ಒಂದಷ್ಟು ಹೊಸ ಅಂಶಗಳು ಇರಲಿವೆ ಎನ್ನುವ ಮೂಲಕ ನಿರೀಕ್ಷೆ ಹೆಚ್ಚಿಸಲಾಗಿದೆ. ಕರ್ನಾಟಕದ ವಿವಿಧ ಭಾಗಗಳಿಂದ ಬರುವ ಪಾಕಪ್ರವೀಣರು ಈ ಶೋನಲ್ಲಿ ಭಾಗವಹಿಸುತ್ತಾರೆ. ‘ಸವಿರುಚಿ’ ಕಾರ್ಯಕ್ರಮದಲ್ಲಿ ಕೇವಲ ಅಡುಗೆ ಮಾಡುವುದು ಮಾತ್ರವಲ್ಲದೇ ಆಹಾರದ ಪೌಷ್ಟಿಕತೆ ಬಗ್ಗೆ ತಜ್ಞರ ಅಭಿಪ್ರಾಯ ಕೂಡ ಇರಲಿದೆ. ಈ ಎಲ್ಲ ಕಾರಣಗಳಿಂದಾಗಿ ‘ಸವಿರುಚಿ’ ಶೋ ವಿಶೇಷ ಎನಿಸಿಕೊಳ್ಳಲಿದೆ.

ರಾಜ್ಯದ ಹಲವು ಪ್ರದೇಶಗಳಿಗೆ ತೆರಳಿ ಆಯಾ ಭಾಗದ ಸಾಂಪ್ರದಾಯಿಕ ಖಾದ್ಯಗಳನ್ನು ವೀಕ್ಷಕರಿಗೆ ಪರಿಚಯಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಈ ಕಾರಣದಿಂದ ‘ಸವಿರುಚಿ’ ಕಾರ್ಯಕ್ರಮವು ವೀಕ್ಷಕರಿಗೆ ಇಷ್ಟ ಆಗಲಿದೆ. ಯುಗಾದಿ ಹಬ್ಬದ ದಿನವೇ ನೂತನ ಸೀಸನ್ ಆರಂಭ ಆಗಲಿದೆ.‘ಕಲರ್ಸ್ ಕನ್ನಡ’ ವಾಹಿನಿಯ ಬಿಸ್ನೆಸ್​ ಹೆಡ್ ಪ್ರಶಾಂತ್ ನಾಯಕ್ ಅವರು ಈ ಶೋ ಬಗ್ಗೆ ಮಾತನಾಡಿದ್ದಾರೆ. ‘ಹಬ್ಬ ಎಂದರೆ ಫ್ಯಾಮಿಲಿಯ ಎಲ್ಲರೂ ಜೊತೆಯಾಗಿ ಸೇರಿ ರುಚಿರುಚಿಯಾದ ಅಡುಗೆಯನ್ನು ಸವಿಯುವುದು. ಈ ಬಾರಿ ಯುಗಾದಿ ಹಬ್ಬದ ಸಂಭ್ರಮವನ್ನು ಸವಿರುಚಿ ಹೊಸ ಸೀಸನ್ ಮತ್ತಷ್ಟು ರಸವತ್ತಾಗಿಸುತ್ತದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಟಿಆರ್​ಪಿ ರೇಸ್​ನಲ್ಲಿ ಈ ಧಾರಾವಾಹಿಗಳ ಮಧ್ಯೆ ಇದೆ ಭರ್ಜರಿ ಸ್ಪರ್ಧೆ; ಇಲ್ಲಿದೆ ಟಾಪ್​ ಐದು ಸೀರಿಯಲ್

‘ನಮ್ಮ ವಾಹಿನಿಯ ವೀಕ್ಷಕರೆಲ್ಲರೂ ನಮ್ಮ ಕುಟುಂಬದವರಿದ್ದಂತೆ. ಅವರಿಗೆಲ್ಲ ಯುಗಾದಿ ಹಬ್ಬದ ಶುಭ ಹಾರೈಸುತ್ತಾ ಉಡುಗೊರೆಯಾಗಿ ‘ಸವಿರುಚಿ’ ಹೊಸ ಆವೃತ್ತಿಯನ್ನು ನೀಡುತ್ತಿದ್ದೇವೆ’ ಎಂದು ಪ್ರಶಾಂತ್​ ನಾಯಕ್​ ಹೇಳಿದ್ದಾರೆ. ಜನಪ್ರಿಯ ‘ನನ್ನಮ್ಮ ಸೂಪರ್ ಸ್ಟಾರ್’ ಶೋ ಖ್ಯಾತಿಯ ಜಾಹ್ನವಿ ಅವರು ಸವಿರುಚಿ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಬೆಳ್ಳುಳ್ಳಿ ಕಬಾಬ್ ವಿಡಿಯೋ ಮೂಲಕ ಸಖತ್​ ವೈರಲ್​ ಆಗಿರುವ ಚಂದ್ರು ಅವರು ಸಹ ಈ ಶೋನಲ್ಲಿ ಇರುವುದರಿಂದ ಮನರಂಜನೆ ಹೆಚ್ಚಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್​
ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್​
ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು
ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು
ಕೈಕೊಟ್ಟ ಕೇಂದ್ರದ ವಾಹನ್-4: ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳ ಪರದಾಟ
ಕೈಕೊಟ್ಟ ಕೇಂದ್ರದ ವಾಹನ್-4: ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳ ಪರದಾಟ
ಕಾಡಾನೆ ಓಡಿಸಲೂ ಬಂತು AI ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ ಗೊತ್ತಾ?
ಕಾಡಾನೆ ಓಡಿಸಲೂ ಬಂತು AI ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ ಗೊತ್ತಾ?
GBA ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ವಿರುದ್ಧ ಸಿಡಿದೆದ್ದ ನೌಕರರು
GBA ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ವಿರುದ್ಧ ಸಿಡಿದೆದ್ದ ನೌಕರರು
ಜ್ಯುವೆಲ್ಲರಿ ಅಂಗಡಿಗೆ ಕನ್ನ: ಸಿಸಿಟಿವಿಯ ಡಿವಿಆರ್ ಕದ್ದೊಯ್ದ ಖದೀಮರು
ಜ್ಯುವೆಲ್ಲರಿ ಅಂಗಡಿಗೆ ಕನ್ನ: ಸಿಸಿಟಿವಿಯ ಡಿವಿಆರ್ ಕದ್ದೊಯ್ದ ಖದೀಮರು
ಮದ್ವೆಯಾದ ಹತ್ತೇ ದಿನದಲ್ಲಿ ನವವಿವಾಹಿತ ಜೈಲು ಪಾಲು!
ಮದ್ವೆಯಾದ ಹತ್ತೇ ದಿನದಲ್ಲಿ ನವವಿವಾಹಿತ ಜೈಲು ಪಾಲು!
ಅಲೋಕ್ ಕುಮಾರ್ ವಿಶೇಷ ಕಾರ್ಯಾಚರಣೆ:ಮಂಗಳೂರು ಜೈಲು ಪರಿಶೀಲನೆ
ಅಲೋಕ್ ಕುಮಾರ್ ವಿಶೇಷ ಕಾರ್ಯಾಚರಣೆ:ಮಂಗಳೂರು ಜೈಲು ಪರಿಶೀಲನೆ
ವಾಹನ ಸವಾರರೇ ಎಚ್ಚರ ಎಚ್ಚರ: ಬೆಂಗಳೂರಲ್ಲಿ ಪಂಕ್ಚರ್ ಮಾಫಿಯಾ ಮತ್ತೆ ಸಕ್ರಿಯ
ವಾಹನ ಸವಾರರೇ ಎಚ್ಚರ ಎಚ್ಚರ: ಬೆಂಗಳೂರಲ್ಲಿ ಪಂಕ್ಚರ್ ಮಾಫಿಯಾ ಮತ್ತೆ ಸಕ್ರಿಯ