ಭಾರ್ಗವಿ ಕತ್ತಿಗೆ ಚಾಕು ಇಡುತ್ತಿದ್ದಂತೆ ಸೀತಾ ಬಾಳಲ್ಲಿ ಮತ್ತೆ ಬಂದ ಸಿಹಿ: ಕಳ್ಳರಿಗೆ ಇದೆ ಮಾರಿಹಬ್ಬ
Seetha Raama serial: ಸೀತಾ ರಾಮ ಧಾರಾವಾಹಿ ಕನ್ನಡದ ಜನಪ್ರಿಯ ಧಾರಾವಾಹಿ. ‘ಸೀತಾ ರಾಮ’ ಧಾರಾವಾಹಿ ಇಷ್ಟು ದಿನ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತಿತ್ತು. ಈಗ ಆ ಸಮಯ ಬದಲಾವಣೆ ಆಗಿದ್ದು, ಸಂಜೆ 5.30ಕ್ಕೆ ಪ್ರಸಾರ ಕಾಣುತ್ತಿದೆ. ಹೀಗಾಗಿ, ದೊಡ್ಡ ಟ್ವಿಸ್ಟ್ ಕೊಟ್ಟು ಪ್ರೇಕ್ಷಕರನ್ನು ಸೆಳೆದುಕೊಳ್ಳುವ ಅನಿವಾರ್ಯತೆ ಇದೆ. ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆಯೇ ಸೀತಾ ರಾಮ ಧಾರಾವಾಹಿ.

‘ಸೀತಾ ರಾಮ’ ಧಾರಾವಾಹಿಯಲ್ಲಿ ಪ್ರಮುಖ ತಿರುವು ಬಂದಿದೆ. ಸೀತಾ ಬಾಳಲ್ಲಿ ಮತ್ತೆ ಸಿಹಿಯ ಎಂಟ್ರಿ ಆಗಿದೆ. ಇದನ್ನು ನೋಡಿ ಭಾರ್ಗವಿ ಹಾಗೂ ಅವಳ ಪತಿ ಶಾಕ್ನಲ್ಲಿ ಮುಳುಗಿ ಹೋಗಿದ್ದಾರೆ. ಈ ಕಳ್ಳರಿಗೆ ಮುಂದೆ ಮಾರಿ ಹಬ್ಬ ಇರುವುದು ಗ್ಯಾರಂಟಿ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರೋ ಪ್ರೋಮೋ ಗಮನ ಸೆಳೆಯುತ್ತಿದೆ. ಈ ಪ್ರೋಮೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತಿದೆ.
‘ಸೀತಾ ರಾಮ’ ಧಾರಾವಾಹಿಯಲ್ಲಿ ಭಾರ್ಗವಿ (ಪೂಜಾ ಲೋಕೇಶ್) ವಿಲನ್. ಭಾರ್ಗವಿ ಪ್ಲ್ಯಾನ್ ಮಾಡಿ ಸಿಹಿಯನ್ನು ಹತ್ಯೆ ಮಾಡಿಸಿದ್ದಳು. ಆ ಬಳಿಕ ಸೀತಾಗೆ ನಿಧಾನವಾಗಿ ಹುಚ್ಚು ಹಿಡಿಯುತ್ತಾ ಇತ್ತು. ಆಕೆಯನ್ನು ಆಸ್ಪತ್ರೆಗೆ ಸೇರಿಸುವ ಕೆಲಸವೂ ಆಗುವುದರಲ್ಲಿ ಇತ್ತು. ಪದೇ ಪದೇ ಭಾರ್ಗವಿಯು ಸೀತಾಳನ್ನು ಕೆಣಕಲು ಆರಂಭಿಸಿದ್ದಳು. ಈ ಕಾರಣದಿಂದಲೇ ಸೀತಾ ಸಿಟ್ಟಾದಳು.
ಭಾರ್ಗವಿಯು ಸಿಹಿಯ ಬಗ್ಗೆ ಹೇಳಿದ ಮಾತು ಸೀತಾಳಿಗೆ ಸಿಟ್ಟು ತರಿಸಿದೆ. ಈ ಕಾರಣದಿಂದಲೇ ಸೀತಾ ಭಾರ್ಗವಿಯ ಕತ್ತಿಗೆ ಚಾಕು ಇಟ್ಟಿದ್ದಾಳೆ. ಹೀಗಾಗಿ, ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಪ್ಲ್ಯಾನ್ ನಡೆಯಿತು. ಆ ಸಮಯಕ್ಕೆ ಸರಿಯಾಗಿ ಸಿಹಿಯ ಎಂಟ್ರಿ ಆಗಿದೆ. ಸುಬ್ಬಿಯನ್ನು, ಸಿಹಿಯ ಗೆಟಪ್ನಲ್ಲಿ ಕರೆದುಕೊಂಡು ಬರಲಾಗಿದೆ.
View this post on Instagram
ಸಿಹಿ ಸತ್ತಿದ್ದು, ಅವಳ ಅಂತ್ಯ ಸಂಸ್ಕಾರವನ್ನು ಮಾಡಿದ್ದು ಭಾರ್ಗವಿ ಕಣ್ಣಾರೆ ನೋಡಿದ್ದಾಳೆ. ಸೀತಾಗೆ ಹುಚ್ಚು ಹೆಚ್ಚಾಗಿದೆ ಆಕೆಯನ್ನು ಆಸ್ಪತ್ರೆಗೆ ಸೇರಿಸಬೇಕು ಎನ್ನುವಾಗ ಸಿಹಿ ಬಂದಿದ್ದು ಆಕೆಗೆ ಶಾಕಿಂಗ್ ಆಗಿದೆ. ಮುಂದೇನು ಮಾಡಬೇಕು ಎಂಬುದು ಆಕೆಗೂ ತಿಳಿಯದಂತೆ ಆಗಿದೆ. ‘ಮುಂದೆ ಮಾರಿ ಹಬ್ಬ ಗ್ಯಾರಂಟಿ’ ಎಂದು ಅನೇಕರು ಮಾತನಾಡಿಕೊಂಡಿದ್ದಾರೆ.
ಇದನ್ನೂ ಓದಿ:ಸೀತಾಗೆ ಸಿಹಿ ಸಿಗೋ ಮೊದಲೇ ಬದಲಾಯಿತು ‘ಸೀತಾ ರಾಮ’ ಪ್ರಸಾರ ಸಮಯ: ವೀಕ್ಷಕರ ಅಸಮಾಧಾನ
ಸಿಹಿಯನ್ನು ಅತಿಯಾಗಿ ಪ್ರೀತಿಸಿದ್ದಳು ಸೀತಾ. ಆದರೆ, ಸಿಹಿ ಇಲ್ಲದ ಕಾರಣ ಗೊಂಬೆಯನ್ನೇ ಸಿಹಿ ಎಂದು ಸೀತಾ ಅಂದುಕೊಳ್ಳುವಮಟ್ಟಕ್ಕೆ ಬಂದಿದ್ದಳು. ಅಷ್ಟರಮಟ್ಟಿಗೆ ಆಕೆಗೆ ಹುಚ್ಚು ಹಿಡಿಯುವಂತೆ ಮಾಡಿದ್ದರು. ಈಗ ಎಲ್ಲವೂ ಬದಲಾಗುವ ಹಂತದಲ್ಲಿ ಇದೆ.
‘ಸೀತಾ ರಾಮ’ ಧಾರಾವಾಹಿ ಇಷ್ಟು ದಿನ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತಿತ್ತು. ಈಗ ಆ ಸಮಯ ಬದಲಾವಣೆ ಆಗಿದ್ದು, ಸಂಜೆ 5.30ಕ್ಕೆ ಪ್ರಸಾರ ಕಾಣುತ್ತಿದೆ. ಹೀಗಾಗಿ, ದೊಡ್ಡ ಟ್ವಿಸ್ಟ್ ಕೊಟ್ಟು ಪ್ರೇಕ್ಷಕರನ್ನು ಸೆಳೆದುಕೊಳ್ಳುವ ಅನಿವಾರ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:33 pm, Tue, 11 February 25