Seetha Raama Serial: ರಾಮ ಮತ್ತು ಸೀತಾಳ ಗೆಳೆತನ ಭಾರ್ಗವಿ ಕಣ್ಣಿಗೆ ಬೀಳುತ್ತಾ? ಸಿಹಿಯ ಹೆಲಿಕಾಪ್ಟರ್ ಏರುವ ಕನಸು ನನಸಾಗುತ್ತಾ?

Seetha Raama Serial: ರಾಮ್ ಮಲೇಷ್ಯಾಗೆ ಹೋಗುತ್ತಾನೆ ಎಂದುಕೊಂಡಿದ್ದ ಭಾರ್ಗವಿಗೆ ಮಾವನ ಮಾತು ಕೇಳಿ ಬರಸಿಡಿಲು ಬಡಿದಂತಾಗುತ್ತದೆ. ಹಾಗಾದರೆ ರಾಮ ಎಲ್ಲಿಗೆ ಹೋಗುತ್ತಾನೆ ಎಂಬುದನ್ನು ಭಾರ್ಗವಿ ಕಂಡು ಹಿಡಿಯುತ್ತಾಳಾ? ರಾಮ ಮತ್ತು ಸೀತಾಳ ಗೆಳೆತನ ಭಾರ್ಗವಿ ಕಣ್ಣಿಗೆ ಬೀಳುತ್ತಾ? ಕಾದು ನೋಡಬೇಕಾಗಿದೆ.

Seetha Raama Serial: ರಾಮ ಮತ್ತು ಸೀತಾಳ ಗೆಳೆತನ ಭಾರ್ಗವಿ ಕಣ್ಣಿಗೆ ಬೀಳುತ್ತಾ? ಸಿಹಿಯ ಹೆಲಿಕಾಪ್ಟರ್ ಏರುವ ಕನಸು ನನಸಾಗುತ್ತಾ?
ವೈಷ್ಣವಿ ಗೌಡ
Edited By:

Updated on: Aug 21, 2023 | 10:47 PM

‘ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 26: ರಾಮ ಬಂದೆ ಬರುತ್ತಾನೆ ಎಂದು ಕಾದು ಕುಳಿತ ಸಿಹಿಗೆ ಲಾಯರ್ ಮನೆಗೆ ಬಂದಿರುವುದು ಕೋಪ ತರಿಸುತ್ತದೆ. ಆದರೆ ಸೀತಾಳಿಗೆ ಮನೆಯ ವಿಚಾರವಾಗಿ ಅವರು ಏನು ಹೇಳಬಹುದು ಎಂಬ ಆತಂಕ ಆರಂಭವಾಗುತ್ತದೆ. ಅದೇ ವೇಳೆಗೆ ಅವಳ ಅತ್ತಿಗೆ ಸುಲೋಚನಾ ಫೋನ್ ಮಾಡಿ ನಿಮ್ಮ ಮನೆಯ ವಿಚಾರವಾಗಿ ಲಾಯರ್ ನಿಮ್ಮ ಅಣ್ಣನ ಬಳಿ ಮಾತನಾಡುತ್ತಿದ್ದರು ನಿಮ್ಮ ಮನೆಗೆ ಬರಬಹುದು ಎನ್ನುತ್ತಾಳೆ. ಸೀತಾ ಈಗಾಗಲೇ ಅವರು ಬಂದಿದ್ದಾರೆ ಎಂದು ಹೇಳುತ್ತಾಳೆ. ಇನ್ನು ರುದ್ರ ಪ್ರತಾಪ ಬಂದಿರುವ ಉದ್ದೇಶವನ್ನು ಸರಿಯಾಗಿ ಉಪಯೋಗಿಸಿಕೊಂಡು ಸೀತಾಳಿಗೆ ಮನೆ ವಿಚಾರವಾಗಿ ಭಯ ಹುಟ್ಟಿಸುತ್ತಾನೆ.

ಅಶೋಕ್​ನಿಗೆ ಹೆಲಿಕಾಪ್ಟರ್​ನಲ್ಲಿ ಹೋಗುವುದಕ್ಕೆ ಎಲ್ಲ ಸಿದ್ಧತೆ ಮಾಡುವುದಕ್ಕೆ ಹೇಳಿದ ರಾಮ್ ಸಿಹಿ ಬಳಿ ಬರುತ್ತಾನೆ. ಇನ್ನು ಸಿಹಿ ಅವನಿಗಾಗಿ ಕಾದು ಕಾದು ಇನ್ನೇನು ಬರುವುದಿಲ್ಲ ಎಂದುಕೊಂಡು ಹೋಗುವಾಗ ರಾಮ್ ಪ್ರತ್ಯಕ್ಷವಾಗುತ್ತಾನೆ. ಅವನನ್ನು ನೋಡಿದ ಸಿಹಿಯ ಖುಷಿಗೆ ಪಾರವೇ ಇರುವುದಿಲ್ಲ. ಸೀತಮ್ಮ ಬೆಳಗ್ಗಿನಿಂದ ಕೇಳುತ್ತಿದ್ದ ಪ್ರಶ್ನೆಗೆ ಉತ್ತರವೂ ಸಿಗುತ್ತದೆ. ಇನ್ನು ಸಿಹಿಯ ಅಜ್ಜಿ, ತಾತನ ವಾಷಿಂಗ್ ಮಿಷಿನ್ ಪೂಜೆಗೆ ರಾಮನೂ ಅಥಿತಿಯಾಗುತ್ತಾನೆ.

ಇದನ್ನೂ ಓದಿ: Seetha Raama Serial: ಸೀತಾಳ ಕೋಪ ರಾಮನನ್ನು ಮತ್ತೆ ಮಲೇಷ್ಯಾಗೆ ಹೋಗುವಂತೆ ಮಾಡುತ್ತಾ?

ಇನ್ನು ಭಾರ್ಗವಿಗೆ ರಾಮ್ ಮಲೇಷ್ಯಾಗೆ ಯಾವಾಗ ಹೋಗುತ್ತಾನೆ ಎಂಬುದೇ ಚಿಂತೆ. ಹಾಗಾಗಿ ಮಾವನ ಬಳಿ ಬಂದು ರಾಮ್ ಎಲ್ಲಿಗೆ ಹೋಗಿದ್ದಾನೆ ಎಂಬುದನ್ನು ವಿಚಾರಿಸುತ್ತಾಳೆ. ಆಗ ತಾತ ತನ್ನ ಸೊಸೆಗೆ ರಾಮ್ ಯಾರನ್ನೋ ಪ್ರೀತಿಸುತ್ತಿದ್ದಾನೆ ಎನಿಸುತ್ತಿದೆ ಎನ್ನುತ್ತಾರೆ. ಭಾರ್ಗವಿ ಅವರ ಮುಂದೆ ಖುಷಿಯಾದಂತೆ ನಟಿಸುತ್ತಾಳೆ. ಆದರೆ ರಾಮ್ ಮಲೇಷ್ಯಾಗೆ ಹೋಗುತ್ತಾನೆ ಎಂದುಕೊಂಡಿದ್ದವಳಿಗೆ ಮಾವನ ಮಾತು ಕೇಳಿ ಬರಸಿಡಿಲು ಬಡಿದಂತಾಗುತ್ತದೆ. ಹಾಗಾದರೆ ರಾಮ ಎಲ್ಲಿಗೆ ಹೋಗುತ್ತಾನೆ ಎಂಬುದನ್ನು ಭಾರ್ಗವಿ ಕಂಡು ಹಿಡಿಯುತ್ತಾಳಾ? ಇದೆಲ್ಲದರ ಮಧ್ಯೆ ಸಿಹಿಯ ಹೆಲಿಕಾಪ್ಟರ್ ಏರುವ ಕನಸು ನನಸಾಗುತ್ತಾ? ಕಾದು ನೋಡಬೇಕಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.