Seetha Raama Serial: ಸೀತಾಳ ಕೋಪ ರಾಮನನ್ನು ಮತ್ತೆ ಮಲೇಷ್ಯಾಗೆ ಹೋಗುವಂತೆ ಮಾಡುತ್ತಾ?

Seetha Raama Serial: ಸೀತಾ ಕೋಪ ಮಾಡಿಕೊಂಡು ಬೈದಿದ್ದು, ರಾಮನಿಗೆ ಬೇಸರ ತರಿಸಿ ಮತ್ತೆ ಮಲೇಷ್ಯಾಗೆ ಹೋಗಬೇಕೆಂಬುದನ್ನು ನೆನಪಿಸಿದೆ. ಹಾಗಾದರೆ ಅವನ ನಿರ್ಧಾರ ಬಲವಾಗುತ್ತಾ? ರಾಮನ ತಾತ ಸೂರ್ಯ ಪ್ರಕಾಶ್ ದೇಸಾಯಿ ಇದಕ್ಕೆ ಒಪ್ಪಿಗೆ ಸೂಚಿಸುತ್ತಾರಾ? ಭಾರ್ಗವಿಯಾ ಪ್ರತಿಕ್ರಿಯೆ ಹೇಗಿರಬಹುದು? ಕಾದು ನೋಡೋಣ.

Seetha Raama Serial: ಸೀತಾಳ ಕೋಪ ರಾಮನನ್ನು ಮತ್ತೆ ಮಲೇಷ್ಯಾಗೆ ಹೋಗುವಂತೆ ಮಾಡುತ್ತಾ?
ಸೀತಾ ರಾಮ
Follow us
ಪ್ರೀತಿ ಭಟ್​, ಗುಣವಂತೆ
| Updated By: ಮಂಜುನಾಥ ಸಿ.

Updated on: Aug 17, 2023 | 10:47 PM

ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 24: ಸಿಹಿ ಮತ್ತು ಶ್ರೇಯಸ್ ಜಗಳವಾಡಿಕೊಂಡಿದ್ದಕ್ಕೆ ಸೀತಾ ತನ್ನ ಮಗಳು ಆತ ಆಡುವುದಕ್ಕೆ ಹೋಗುವುದನ್ನು ತಡೆದಿರುತ್ತಾಳೆ. ಅದಕ್ಕಾಗಿಯೇ ಸಿಹಿ ತನ್ನ ಕೆಲಸ ತಾನೇ ಮಾಡಿಕೊಳ್ಳುವ ಮೂಲಕ ಸೀತಾಳ ಮನಗೆದ್ದು ತನಗೂ ಜವಾಬ್ದಾರಿ ಇದೆ ಎಂದು ಹೇಳುತ್ತಾಳೆ. ತನ್ನ ಮಗಳಿಗಿರುವ ಜವಾಬ್ದಾರಿ ರಾಮನಿಗಿಲ್ಲ ಎಂದು ಸೀತಾ ಹೇಳುತ್ತಾಳೆ. ಅಷ್ಟೇ ಹೊತ್ತಿಗೆ ರಾಮನಿಗೆ ಸಿಹಿ ಫೋನ್ ಮಾಡಿ ಟಿಫನ್ ಬಗ್ಗೆ ಕೇಳುತ್ತಾಳೆ. ಜೊತೆಗೆ, ಸೀತಮ್ಮ ತುಂಬಾ ಜೋರು ಅಂತ ಅವನಿಗೂ ಭಯ ಹುಟ್ಟಿಸುತ್ತಾಳೆ. ಅದೇ ಹೆದರಿಕೆಗೆ ರಾಮ್ ಲಂಚ್ ಬಾಕ್ಸ್ ಹುಡುಕಲು ಅಣಿ ಇಡುತ್ತಾನೆ. ಆದರೆ ತಾತನ ಬಳಿ ಸಿಕ್ಕಿ ಹಾಕಿಕೊಂಡು ಅವರು ತಮಾಷೆ ಮಾಡಿದರೂ ಏನು ಹೇಳಲಾಗದೇ ಹೊಸ ಟಿಫನ್ ಖರೀದಿ ಮಾಡಲು ಹೊರಡುತ್ತಾನೆ. ಅಶೋಕ್ ಅದನ್ನು ನೋಡಿ ಕಂಗಾಲಾಗುತ್ತಾನೆ. ಅಷ್ಟು ದೊಡ್ಡ ಬಿಸಿನೆಸ್ ಮ್ಯಾನ್ ಟಿಫನ್ ಬಾಕ್ಸ್ ಹುಡುಕಿಕೊಂಡು ಬೀದಿ ಬೀದಿ ಅಂಗಡಿಗಳಿಗೆ ಹೋಗುತ್ತಿರುವುದು ಅವನಿಗೆ ಆಶ್ಚರ್ಯ ತರಿಸುತ್ತದೆ. ಅಷ್ಟೆಲ್ಲಾ ಹುಡುಕಾಡಿ ಕೊನೆಗೂ ಸಮುದ್ರದಲ್ಲಿ ಸೂಜಿ ಹುಡುಕಿದ ಹಾಗೇ ಟಿಫನ್ ಬಾಕ್ಸ್ ಹುಡುಕುತ್ತಾರೆ.

ಇಷ್ಟೆಲ್ಲಾ ಮಾಡಿದರೂ ಸೀತಾ ಮಾತ್ರ ಆ ಟಿಫನ್ ಬಾಕ್ಸ್ ತೆಗೆದುಕೊಳ್ಳಲು ಒಪ್ಪುವುದಿಲ್ಲ. ಬದಲಾಗಿ ನಂಗೆ ನನ್ನ ಬಾಕ್ಸ್ ತಂದುಕೊಂಡಿ ಎಂದು ಕೇಳುತ್ತಾಳೆ. ಅದಕ್ಕೂ ಮಿಗಿಲಾಗಿ ಪ್ರತಿಯೊಂದು ವಸ್ತುಗಳ ಹಿಂದೆ ಅದರದ್ದೇ ಆದ ಭಾವನೆಗಳಿರುತ್ತವೆ. ಅದು ನಿಮಗೆ ಅರ್ಥವಾಗುವುದಿಲ್ಲ ಎಂದು ಚೆನ್ನಾಗಿ ಬೈಯುತ್ತಾಳೆ. ಅದು ರಾಮನಿಗೆ ತುಂಬಾ ನೋವುಂಟು ಮಾಡುತ್ತದೆ. ಸೀತಾ ರಾಮನಿಗೆ ಹೇಳಿದ ಮಾತು ಕೇಳಿದ ಪ್ರೀಯಾ ಕೂಡ ಅಶೋಕ್ ಬಳಿ ಇದ್ದ ಟಿಫನ್ ಬಾಕ್ಸ್ ಅನ್ನು ತಂದು ಕೊಡುತ್ತಾಳೆ. ರಾಮ್ ಮುಖ ಬಾಡಿಸಿಕೊಂಡು ಕುಳಿತಿದ್ದ ನೋಡಿದ ಅಶೋಕ್ ಹೊರಗಡೆ ಕರೆದುಕೊಂಡು ಹೋಗಿ ಏನಾಯಿತು ಎಂದು ಕೇಳುತ್ತಾನೆ. ಆಗ ರಾಮ್ ನಾವು ಮಲೇಷ್ಯಾಗೆ ಹೋಗೋಣ ಎನುತ್ತಾನೆ. ಅವನನ್ನು ಸಮಾಧಾನ ಮಾಡಿದ ಅಶೋಕ್ ಅವನನ್ನು ತಡೆಯುತ್ತಾನೆ. ಆದರೆ ಆ ನಿರ್ಧಾರ ಯಶಸ್ವಿಯಾಗಬಹುದಾ?

ಇದನ್ನೂ ಓದಿ:ಹೊರಬಿತ್ತು ಧಾರಾವಾಹಿ ಟಿಆರ್​ಪಿ ಲಿಸ್ಟ್​; ‘ಗಟ್ಟಿಮೇಳ’-‘ಸೀತಾ ರಾಮ’ ಮಧ್ಯೆ ಭರ್ಜರಿ ಸ್ಪರ್ಧೆ

ರುದ್ರ ಪ್ರತಾಪನ ಬಳಿ ದುಡ್ಡು ಕೇಳಲು ಸೀತಾಳ ಅತ್ತಿಗೆ ಸುಲೋಚನಾ ಬರುತ್ತಾಳೆ. ಆದರೆ ಅದಕ್ಕೆ ನಿರಾಕರಿಸಿದ ರುದ್ರ ಕೆಲಸ ಮಾಡಿದರೆ ಮಾತ್ರ ದುಡ್ಡು ಎನ್ನುತ್ತಾನೆ. ಇನ್ನು ಆಫೀಸ್ನಲ್ಲಿ ಕುಳಿತ ಸೀತಾಳಿಗೆ ರಾಮನನ್ನು ಬಾಸ್ ಯಾಕೆ ಕರೆದರೂ ಎಂಬುದೇ ಚಿಂತೆಯಾಗುತ್ತದೆ. ಏನಾದರೂ ತಾನು ಬೈದಿದ್ದಕ್ಕೆ ಅವನನ್ನು ಕರೆದುಬಿಟ್ಟಿದ್ದಾರಾ? ನಾನು ಬಾಕ್ಸ್ ಕೇಳಿದಕ್ಕೆ ರಾಮ್ ಬೇಜಾರು ಮಾಡಿಕೊಂಡಿರಬಹುದಾ? ಎಂದು ಯೋಚನೆ ಮಾಡುತ್ತಾಳೆ. ಹಾಗಾದರೆ ರಾಮ್ ಮುಂದಿನ ನಡೆಯೇನು? ಮಲೇಷ್ಯಾಗೆ ಹೋಗುವ ಅವನ ನಿರ್ಧಾರ ಬಲವಾಗುತ್ತಾ? ಸೀತಾಳ ಟಿಫನ್ ಬಾಕ್ಸ್ ಸಿಗುತ್ತಾ? ಕಾದು ನೋಡೋಣ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು