Seetha Raama Serial: ಸಿಹಿಯ ಆಸೆಗೆ ತಣ್ಣೀರೆರಚಿದ ಸೀತಾ, ಮಗಳ ಮುನಿಸಿಗೆ ಕಾರಣವಾಗುತ್ತಾಳಾ?

Seetha Raama Serial: ಹೆಲಿಕೊಪ್ಟರ್ ಹಾರಾಡಲು ರೆಡಿ ಇದ್ದರೂ ಸೀತಾ ಮಾತ್ರ ಜಪ್ಪಯ್ಯ ಎಂದರೂ ಓಕೆ ಎನ್ನುವುದಿಲ್ಲ. ಸಿಹಿ ಮತ್ತು ರಾಮ್ ನಾನಾ ರೀತಿ ಪ್ಲಾನ್ ಮಾಡಿದರೂ ಸೀತಾ ಮುಂದೆ ಏನು ಉಪಯೋಗಕ್ಕೆ ಬರುವುದಿಲ್ಲ. ರಾಮ್ ಹೇಳಿದ ಸುಳ್ಳನ್ನು ಕೂಡ ಸೀತಾ ಒಪ್ಪುವುದಿಲ್ಲ. ಬದಲಾಗಿ ರಾಮನಿಗೆ ನನ್ನ ಮಗಳಿಗೆ ಹೀಗೆಲ್ಲಾ ಪ್ರಾಮಿಸ್ ಮಾಡಬೇಡಿ ಎನ್ನುತ್ತಾಳೆ. ಹಾಗಾದರೆ ಮುಂದೇನಾಗಬಹುದು?

Seetha Raama Serial: ಸಿಹಿಯ ಆಸೆಗೆ ತಣ್ಣೀರೆರಚಿದ ಸೀತಾ, ಮಗಳ ಮುನಿಸಿಗೆ ಕಾರಣವಾಗುತ್ತಾಳಾ?
ಸೀತಾ ರಾಮ
Edited By:

Updated on: Aug 22, 2023 | 10:38 PM

ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 27: ಸಿಹಿಯ ಅಜ್ಜಿ, ತಾತನ ಮನೆಯಲ್ಲಿ ವಾಷಿಂಗ್ ಮಿಷನ್ ಪೂಜೆ ಸರಾಗವಾಗಿ ನಡೆಯುತ್ತದೆ. ಆದರೆ ಸಿಹಿ, ರಾಮ್ ಹೆಲಿಕೊಪ್ಟರ್ ನಲ್ಲಿ ಹೋಗಲು ಮಾತ್ರ ಸೀತಾ ಒಪ್ಪಿಗೆ ನೀಡುವುದಿಲ್ಲ. ಅವಳ ಮಾತು ಅಂತಿಮವಾದ್ದರಿಂದ ಸಿಹಿಗೂ, ರಾಮನಿಗೂ ಏನು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಸೀತಾ ಮಾತ್ರ ಅವರಿಬ್ಬರ ಯಾವ ಮಾತಿಗೂ ಒಪ್ಪಿಗೆ ನೀಡುವುದಿಲ್ಲ. ಇದೆಲ್ಲದರ ಮಧ್ಯೆ ರಾಮ್ ಟಿಫನ್ ಬಾಕ್ಸ್ ತರದೆ ಇದ್ದ ವಿಚಾರವೂ ಬರುತ್ತದೆ. ಆಗ ರಾಮ್ ನಾನು ಅಂಗಡಿ ಅಂಗಡಿ ಸುತ್ತಿ ತಂದಿರುವ ಬಾಕ್ಸ್ ತಗೋಳಿ ಅಂದಾಗ ಸೀತಾ ರಾಮನ ಬಳಿ ಕ್ಷಮೆ ಕೇಳಿ ಅದು ನನ್ನ ಅಮ್ಮ ನನಗೆ ನೀಡಿದ್ದು ಹಾಗಾಗಿ ಅದೇ ನನಗೆ ಬೇಕು ಎನ್ನುತ್ತಾಳೆ. ಸೀತಾ ಯಾಕೆ ಆ ಬಾಕ್ಸ್ ಮೇಲೆ ಕಾಳಜಿ ತೋರುತ್ತಿದ್ದರು ಎಂಬುದು ರಾಮನಿಗೆ ಅರ್ಥವಾಗುತ್ತದೆ. ಕೆಲವೊಂದು ವಸ್ತುಗಳು ಬರೀ ವಸ್ತುಗಳಾಗಿರಲ್ಲ ಅದಕ್ಕೆ ನಾವು ಜೀವ ತುಂಬಿರುತ್ತಿವಲ್ಲ ಹಾಗೇ ಇದು.

ರಾಮನಿಗೆ ಸಹಾಯ ಮಾಡಲು ಬಂದಿದ್ದ ಅಶೋಕನಿಗೆ, ಸೀತಾಳ ಗೆಳತಿ ಗಂಟು ಬೀಳುತ್ತಾಳೆ. ಚಹಾ ಹೇಗೆ ಕುಡಿಯಬೇಕು ಎನ್ನುವುದನ್ನು ಹೇಳಿ ಕೊಡುತ್ತಾಳೆ. ಹೇಗೋ ಅವಳಿನಿಂದ ತಪ್ಪಿಸಿಕೊಂಡು ಹೋಗುತ್ತಾನೆ. ರಾಮನಿಗೆ ಫೋನ್ ಮಾಡಿದರೆ ಅವನು ಹೇಳುವ ಕಥೆ, ಅಶೋಕ್ ನನ್ನು ಹೈರಾಣಗೊಳಿಸುತ್ತದೆ.

ಇದನ್ನೂ ಓದಿ:ಎರಡನೇ ಸ್ಥಾನಕ್ಕೆ ಜಿಗಿದ ‘ಸೀತಾ ರಾಮ’; ಟಿಆರ್​ಪಿ ರೇಸ್​ನಲ್ಲಿ ಯಾವ ಧಾರಾವಾಹಿಗೆ ಯಾವ ಸ್ಥಾನ? ಇಲ್ಲಿದೆ ವಿವರ

ಹೆಲಿಕೊಪ್ಟರ್ ಹಾರಾಡಲು ರೆಡಿ ಇದ್ದರೂ ಸೀತಾ ಮಾತ್ರ ಜಪ್ಪಯ್ಯ ಎಂದರೂ ಓಕೆ ಎನ್ನುವುದಿಲ್ಲ. ಸಿಹಿ ಮತ್ತು ರಾಮ್ ನಾನಾ ರೀತಿ ಪ್ಲಾನ್ ಮಾಡಿದರೂ ಸೀತಾ ಮುಂದೆ ಏನು ಉಪಯೋಗಕ್ಕೆ ಬರುವುದಿಲ್ಲ. ರಾಮ್ ಹೇಳಿದ ಸುಳ್ಳನ್ನು ಕೂಡ ಸೀತಾ ಒಪ್ಪುವುದಿಲ್ಲ. ಬದಲಾಗಿ ರಾಮನಿಗೆ ನನ್ನ ಮಗಳಿಗೆ ಹೀಗೆಲ್ಲಾ ಪ್ರಾಮಿಸ್ ಮಾಡಬೇಡಿ ಎನ್ನುತ್ತಾಳೆ. ಹಾಗಾದರೆ ಮುಂದೇನಾಗಬಹುದು?