AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama Serial: ಸೀತಾ, ಸಿಹಿ ಇಬ್ಬರೇ ಇದ್ದ ಜೀವನದಲ್ಲಿ ರಾಮನ ಆಗಮನವಾಗುತ್ತಾ?

Seetha Raama Serial: ಬದುಕಿನಲ್ಲಿ ನಡೆದ ಕಹಿ ಘಟನೆಗಳನ್ನು ಮರೆತು ಸೀತಾ ಬದುಕಿನಲ್ಲಿ ಮುಂದುವರಿಯಲಿ ಎಂಬುದು ಪ್ರೀಯಾಳ ಆಸೆ. ಆದರೆ ಸೀತಾಳ ನಿರ್ಧಾರ ಮಾತ್ರ ಎಂದಿಗೂ ಬದಲಾಗದು. ಅವರಿಬ್ಬರ ಪ್ರಪಂಚದಲ್ಲಿ ರಾಮನ ಆಗಮನವಾಗುತ್ತಾ?...

Seetha Raama Serial: ಸೀತಾ, ಸಿಹಿ ಇಬ್ಬರೇ ಇದ್ದ ಜೀವನದಲ್ಲಿ ರಾಮನ ಆಗಮನವಾಗುತ್ತಾ?
ಸೀತಾ ರಾಮ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Aug 23, 2023 | 10:05 PM

Share

ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 28: ಹೆಲಿಕೊಪ್ಟರ್ ನಲ್ಲಿ ಹೋಗುವುದನ್ನು ತಡೆದ ಸೀತಾ, ರಾಮ್ ಮತ್ತು ಸಿಹಿಗೆ ಮನೆ ಕೆಲಸ ಮಾಡಲು ಹೇಳುತ್ತಾಳೆ. ಏನು ಅರಿಯದ ರಾಮ್ ಮೊದಲ ಬಾರಿಗೆ ಲುಂಗಿ ತೊಟ್ಟು ಕಸ ಗುಡಿಸುತ್ತಾನೆ. ಇಬ್ಬರೂ ಕಷ್ಟ ಪಟ್ಟು ಹಾಗೋ ಹೀಗೋ ಮನೆ ಸ್ವಚ್ಛ ಮಾಡುತ್ತಾರೆ. ಸೀತಾ ಕೂಡ ಚೇಷ್ಟೆ ಮಾಡಿಕೊಂಡು ರಾಮನನ್ನು ಕಿಚಾಯಿಸಿ ಖುಷಿ ಪಡುತ್ತಾಳೆ. ಇದನ್ನು ನೋಡಿದ ಸಿಹಿ, ತನ್ನ ಅಮ್ಮನನ್ನು ನಗಿಸಿದ್ದಕ್ಕಾಗಿ ರಾಮನಿಗೆ ಧನ್ಯವಾದ ಹೇಳುತ್ತಾಳೆ. ಇನ್ನೂ ರಾಮ್ ಕೂಡ ಮನೆ ಕಡೆ ಹೊರಡುತ್ತಾನೆ. ಲಾಯರ್ ವಿಚಾರವಾಗಿ ಸೀತಾಳನ್ನು ಕೇಳಿದರೂ ಸಿಹಿ ಇರುವ ಕಾರಣ ಯಾವ ವಿಚಾರವನ್ನೂ ಹೇಳುವುದಿಲ್ಲ.

ಮಲೇಷ್ಯಾಗೆ ಹೋಗುವ ಪ್ಲಾನ್ ರದ್ದು ಇನ್ನು ಅಶೋಕ್ ಬಳಿ ರಾಮ್ ಸೀತಾಳ ಗುಣಗಾನ ಮಾಡುತ್ತಾನೆ. ಅವಳ ನಡೆ ನುಡಿ ಮೆಚ್ಚಿಕೊಳ್ಳುತ್ತಾನೆ. ಜೊತೆಗೆ ಅಡ್ವಾನ್ಸ್ ಸ್ಯಾಲರಿ ಕೊಡಿಸುವ ವಿಚಾರವಾಗಿಯೂ ಮಾತನಾಡುತ್ತಾನೆ. ಅವನಿಗೆ ಸೀತಾ ಅದೇ ಮನೆಯಲ್ಲಿಯೇ ವಾಸಿಸಬೇಕು, ಸಿಹಿ ಅದೇ ಮನೆಯಲ್ಲಿಯೇ ತನ್ನ ಬಾಲ್ಯವನ್ನು ಕಳೆಯಬೇಕು ಎನ್ನುವ ಹಂಬಲ ಹಾಗಾಗಿ ಸೀತಾಳಿಗೆ ಸಹಾಯ ಮಾಡುವುದು ಅವನ ಮುಖ್ಯ ಉದ್ದೇಶ. ಅದಕ್ಕೆ ಅಶೋಕ್ ಕೂಡ ಸಾತ್ ನೀಡುತ್ತಾನೆ. ಇದೆಲ್ಲದರ ಜೊತೆ ರಾಮ್ ಮಲೇಷ್ಯಾಗೆ ಹೋಗುವ ಪ್ಲಾನ್ ಅನ್ನು ರದ್ದುಗೊಳಿಸುತ್ತಾನೆ.

ಇನ್ನು ಸೀತಾಳ ಗೆಳತಿ ಪ್ರೀಯಾ ತನಗೆ ಅಶೋಕ್ ಮೇಲಿರುವ ಪ್ರೀತಿಯನ್ನು ಅವಳ ಬಳಿ ಹಂಚಿಕೊಳ್ಳುತ್ತಾಳೆ. ಆದರೆ ಸೀತಾಳದ್ದು ಮಾತ್ರ ಒಂದೇ ಉತ್ತರ “ಬೆಲೆಬಾಳುತ್ತೆ ಎಂದು ಚಿನ್ನದ ಸೂಜಿಯನ್ನು ಚುಚ್ಚಿಕೊಳ್ಳಕಾಗುತ್ತಾ?”. ಆದರೆ ಪ್ರೀಯಾಳದ್ದು ಮಾತ್ರ ಕೋಟ್ಯಾಧಿಪತಿ ಅಶೋಕ್ ನನ್ನು ಮದುವೆಯಾಗುವ ಹಂಬಲ. ಅದನ್ನೇ ಸೀತಾಗೂ ಹೇಳುತ್ತಾಳೆ. ಆದರೆ ಅದನ್ನೆಲ್ಲಾ ಕೇಳುವ ಮನಸ್ಥಿತಿ ಸೀತಾಳದ್ದಲ್ಲ. ಬದುಕಿನಲ್ಲಿ ನಡೆದ ಕಹಿ ಘಟನೆಗಳನ್ನು ಮರೆತು ಸೀತಾ ಬದುಕಿನಲ್ಲಿ ಮುಂದುವರಿಯಲಿ ಎಂಬುದು ಪ್ರೀಯಾಳ ಆಸೆ. ಆದರೆ ಸೀತಾಳ ನಿರ್ಧಾರ ಮಾತ್ರ ಎಂದಿಗೂ ಬದಲಾಗದು. ಅವರಿಬ್ಬರ ಪ್ರಪಂಚದಲ್ಲಿ ರಾಮನ ಆಗಮನವಾಗುತ್ತಾ?… ಕಾದು ನೋಡೋಣ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More