AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama Serial: ಸಿಹಿಯ ಕರೆಗೆ ಓಗುಟ್ಟು, ಹಬ್ಬದೂಟ ಮಾಡಲು ಬರುತ್ತಾನಾ ಶ್ರೀರಾಮ?

Seetha Raama Serial: ಸಿಹಿ ತನ್ನ ಫ್ರೆಂಡ್ ಊಟಕ್ಕೆ ಬರುತ್ತಾನೆ ಎಂದು ಯಾರಿಗೂ ಊಟ ಮಾಡಲು ಕೊಡದೆ ಕಾಯುತ್ತಿರುತ್ತಾಳೆ. ಆದರೆ ಮನೆಯಲ್ಲಿಯೇ ಹೊಟ್ಟೆಯಲ್ಲಿ ಜಾಗವಿಲ್ಲದಷ್ಟು ತಿಂದ ರಾಮನಿಗೆ, ಸಿಹಿಯ ಮನೆಯಲ್ಲಿ ಊಟ ಸೇರುತ್ತಾ? ಸಿಹಿಯ ಯಾವ ಮಾತನ್ನೂ ತಳ್ಳಿ ಹಾಕದ ರಾಮ್, ಸಿಹಿಯ ಕರೆಗೆ ಓಗುಟ್ಟು, ಹಬ್ಬದೂಟ ಮಾಡಲು ಬರುತ್ತಾನಾ... ಕಾದು ನೋಡೋಣ.

Seetha Raama Serial: ಸಿಹಿಯ ಕರೆಗೆ ಓಗುಟ್ಟು, ಹಬ್ಬದೂಟ ಮಾಡಲು ಬರುತ್ತಾನಾ ಶ್ರೀರಾಮ?
ಸೀತಾ ರಾಮ
ಪ್ರೀತಿ ಭಟ್​, ಗುಣವಂತೆ
| Updated By: ಮಂಜುನಾಥ ಸಿ.|

Updated on: Aug 26, 2023 | 8:27 AM

Share

ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 30: ಸೀತಾಳನ್ನು ಗಂಡ ಇಲ್ಲದವಳು ಎಂದಿದ್ದಕ್ಕೆ ಸಿಹಿಯ ಅಜ್ಜಿ ಅವರಿಗೆ ಸರಿಯಾದ ಬುದ್ದಿ ಮಾತು ಹೇಳುತ್ತಾಳೆ. ತಾನೇ ಸಿಹಿ ಮತ್ತು ಸೀತಾ, ಇಬ್ಬರಿಗೂ ಕುಂಕುಮ ಕೊಟ್ಟು ಆಶೀರ್ವಾದ ಮಾಡುತ್ತಾಳೆ. ಸೀತಮ್ಮ ದೇವರಿಗೆ ನಮಸ್ಕಾರ ಮಾಡು ಎಂದು ಸಿಹಿಗೆ ಹೇಳಿದರೆ ಅವಳು ಅಮ್ಮನ ಕಾಲಿಗೆ ಬಿದ್ದು ಆಶೀರ್ವಾದ ತೆಗೆದುಕೊಳ್ಳುತ್ತಾಳೆ.

ಇನ್ನು ರಾಮನ ಮನೆಯಲ್ಲಿಯೂ ವರಮಹಾಲಕ್ಷ್ಮೀ ಹಬ್ಬದ ಸಂದರ್ಭ. ಎಲ್ಲರೂ ಖುಷಿ ಖುಷಿಯಲ್ಲಿ ರಾಮನ ಇರುವಿಕೆಯನ್ನು ಸಂಭ್ರಮಿಸುತ್ತಾರೆ. ಮುಂದಿನ ಹಬ್ಬಕ್ಕೆ ರಾಮನ ಪಕ್ಕದಲ್ಲಿ ಸೊಸೆ ಇರಬೇಕು ಎಂದು ಭಾರ್ಗವಿ ದೇವರಲ್ಲಿ ಕೇಳಿಕೊಂಡಿದ್ಧಿನಿ ಎನ್ನುತ್ತಾಳೆ. ರಾಮೇಶ್ವರಕ್ಕೆ ಹೋದರೂ ಶನೇಶ್ವರನ ಕಾಟ ತಪ್ಪಲಿಲ್ಲ ಎನ್ನುವ ಹಾಗೆ ರಾಮ ಎಲ್ಲೇ ಹೋದರೂ ಮದುವೆ ವಿಷಯ ಮಾತ್ರ ಅವನನ್ನು ಬಿಡುವುದಿಲ್ಲ. ಪೂಜೆ ಮುಗಿಸಿ ಎಲ್ಲರೂ ಒಟ್ಟಿಗೆ ಊಟ ಮಾಡಬೇಕೆನ್ನುವ ತಾತನ ಹಂಬಲ ಆರಂಭವಾಗುವುದರಲ್ಲಿಯೇ ಮೊಟಕುಗೊಳ್ಳುತ್ತದೆ. ಎಷ್ಟೇ ದುಡ್ಡಿದ್ದರೂ ಸಂತೋಷ ಕೊಂಡುಕೊಳ್ಳಲು ಸಾಧ್ಯವಿಲ್ಲ ಎನ್ನುವುದು ತಾತನ ಅಭಿಪ್ರಾಯ. ಇನ್ನು ಎಲ್ಲರೂ ಒಂದೊಂದು ಕಾರಣ ಕೊಟ್ಟು ಊಟ ಬಿಟ್ಟು ಎದ್ದು ನಡೆಯುತ್ತಾರೆ. ಕೊನೆಗೆ ಇರುವುದು ರಾಮ, ಅಶೋಕ್ ಮತ್ತು ತಾತ. ಮೂವರಿಗೂ ಭಾರ್ಗವಿ ತಾನೇ ಊಟ ಬಡಿಸುತ್ತಾಳೆ. ಹೊಟ್ಟೆ ಬಿರಿಯುವಷ್ಟು ಊಟ ಮಾಡಿದ ರಾಮನಿಗೆ, ಸಿಹಿಯೂ ಊಟಕ್ಕೆ ಮನೆಗೆ ಕರೆದಿರುವುದು ನೆನಪಾಗುತ್ತದೆ.

ಇನ್ನು ಸಿಹಿ ತನ್ನ ಫ್ರೆಂಡ್ ಕೂಡ ಊಟಕ್ಕೆ ಬರುತ್ತಾನೆ ಎಂದು ಯಾರಿಗೂ ಊಟ ಮಾಡಲು ಕೊಡದೆ ಕಾಯುತ್ತಿರುತ್ತಾಳೆ. ಅವನಿಗೆ ನೆನಪು ಮಾಡುವುದಕ್ಕಾಗಿ ಫೋನ್ ಕೂಡ ಮಾಡುತ್ತಾಳೆ. ಮನೆಯಲ್ಲಿಯೇ ಹೊಟ್ಟೆಯಲ್ಲಿ ಜಾಗವಿಲ್ಲದಷ್ಟು ತಿಂದ ರಾಮನಿಗೆ, ಸಿಹಿಯ ಮನೆಯಲ್ಲಿ ಊಟ ಸೇರುತ್ತಾ? ಸಿಹಿಯ ಯಾವ ಮಾತನ್ನೂ ತಳ್ಳಿ ಹಾಕದ ರಾಮ್, ಸಿಹಿಯ ಕರೆಗೆ ಓಗುಟ್ಟು, ಹಬ್ಬದೂಟ ಮಾಡಲು ಬರುತ್ತಾನಾ… ಕಾದು ನೋಡೋಣ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ