‘ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 36: ಸೀತಾ, ಸಿಹಿ ಜೊತೆ ತಿರುಗಾಡಿ, ಹೊಟ್ಟೆ ತುಂಬಾ ತಿಂದು ಬಂದ ರಾಮನಿಗೆ ಮನೆಯವರೆಲ್ಲಾ ಸೇರಿ ಊಟ ಮಾಡುವಂತೆ ಬಲವಂತ ಮಾಡುತ್ತಾರೆ. ಆದರೆ ರಾಮನಿಗೆ ಗಂಟಲಿನಲ್ಲಿ ಒಂದು ತುತ್ತು ಕೂಡ ತಿನ್ನಲು ಸಾಧ್ಯವಿಲ್ಲ ಎನ್ನಿಸಿ, ಅವನ ಚಿಕ್ಕಿ ಭಾರ್ಗವಿ ಹೇಳಿದ ಮಾತನ್ನೂ ಧಿಕ್ಕರಿಸಿ ಹೊರಡುತ್ತಾನೆ. ಸೀತಾಳ ಮೆಸೇಜ್ ನೋಡಿ ಅವಳಿಗೆ ಕಾಲ್ ಮಾಡುತ್ತಾನೆ. ಸೀತಾ ಮನೆ ಬಾಡಿಗೆಯ ಬಗ್ಗೆ ವಿಚಾರಿಸುತ್ತಾಳೆ. ಆದರೆ ಅದರ ಬಗ್ಗೆ ಏನೂ ಅರಿಯದ ರಾಮ್ ಅಶೋಕ್ ಬಳಿ, ವಿಚಾರಿಸಿ ಹೇಳುತ್ತಾನೆ. ಮನೆ ಮಾರಾಟ ಮಾಡುವುದು ರಾಮ್ಗೆ ಇಷ್ಟವಿಲ್ಲವಾದ್ದರಿಂದ, ಸೀತಾಳಿಗೆ ನೀವು ಮನೆ ಮಾರಾಟ ಮಾಡುವುದು ಬೇಡ ಎಂದು ಹೇಳುತ್ತಾನೆ.
ಇನ್ನು ಅಶೋಕ್ ಮತ್ತು ರಾಮನ ತಾತ ಸೂರ್ಯ ಪ್ರಕಾಶ ಇಬ್ಬರೂ ಸೇರಿ ಶ್ರೀರಾಮನಿಗೆ ಸೀತೆಯನ್ನು ಹುಡುಕುವ ನಿರ್ಧಾರ ಮಾಡುತ್ತಾರೆ. ಅದಕ್ಕೆ ಅಶೋಕ್ ಸ್ವಲ್ಪ ದಿನ ಕಾಯೋಣ ಎನ್ನುತ್ತಾನೆ. ಇನ್ನು ರುದ್ರ ಪ್ರತಾಪನ ಕುತಂತ್ರದಿಂದ ಸೀತಾಳ ಮನೆ ಬಾಗಿಲಿಗೆ ರಿಮೈಂಡರ್ ನೋಟಿಸ್ ಬರುತ್ತದೆ. ಎಲ್ಲ ತಾನೇ ಸರಿ ಮಾಡುವ ಹಾಗೇ ಅವಳಿಗೆ ಭರವಸೆಯನ್ನೂ ನೀಡುತ್ತಾನೆ.
ಇದನ್ನೂ ಓದಿ: ಕೃಷ್ಣಾಷ್ಟಮಿ ಪ್ರಯುಕ್ತ ಮಹಾ ಸಂಚಿಕೆಗಳೊಂದಿಗೆ ಬಂದ ಜೀ ಕನ್ನಡ ವಾಹಿನಿ
ಇನ್ನು ರಾಮ್ ತಾತನ ಬಳಿ ಅಡ್ವಾನ್ಸ್ ಸಂಬಳ ಕೊಡಿಸುವ ವಿಷಯವನ್ನು ಮಾತನಾಡುತ್ತಾನೆ. ಇದಕ್ಕೆ ತಾತನ ಒಪ್ಪಿಗೆಯೂ ದೊರೆಯುತ್ತದೆ. ಆದರೆ ಸೀತಾ ಮಾತ್ರ, ಅನೇಕ ಕಡೆ ಮನೆ ಬಾಡಿಗೆಗೆ ವಿಚಾರಿಸುತ್ತಾಳೆ. ಇದಕ್ಕೆಲ್ಲಾ ರಾಮನದು ಒಂದೇ ಮಾತು, ಸ್ವಲ್ಪ ದೀನ ಕಾಯಿರಿ, ಎಲ್ಲ ಒಳ್ಳೆಯದಾಗುತ್ತದೆ ಎಂಬುದು. ಆದರೆ ಅಂತಿಮವಾಗಿ ಸೀತಾಳ ನಿರ್ಧಾರವೇನು? ಕಾದು ನೋಡೋಣ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:25 am, Tue, 5 September 23