ಸಿಹಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾನಾ ರಾಮ್? ವಠಾರದಲ್ಲಿ ಗಣೇಶನ ಹಬ್ಬ ನಡೆಯುತ್ತಾ?

Seetha Raama:ನನ್ನ ಬದುಕಿನ ಮುಖ್ಯವಾದ ವ್ಯಕ್ತಿಗಳಲ್ಲಿ ಸಿಹಿಯೂ ಒಬ್ಬಳು ಎನ್ನುತ್ತಾನೆ ರಾಮ್. ನನ್ನಿಂದ ಅವಳನ್ನು ದೂರ ಮಾಡಬೇಡಿ ಎಂದು ಸೀತಾ ಬಳಿ ಕೈ ಮುಗಿದು ಬೇಡಿಕೊಳ್ಳುತ್ತಾನೆ. ಸಿಹಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾನಾ ರಾಮ್? ಕಾದು ನೋಡೋಣ.

ಸಿಹಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾನಾ ರಾಮ್? ವಠಾರದಲ್ಲಿ ಗಣೇಶನ ಹಬ್ಬ ನಡೆಯುತ್ತಾ?
ಸೀತಾ-ರಾಮ
Edited By:

Updated on: Sep 20, 2023 | 11:48 PM

ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 49: ಸಿಹಿಗೆ ತಮ್ಮ ವಠಾರದಲ್ಲಿ ಗಣೇಶನನ್ನು ಕೂರಿಸುವ ಸಂಭ್ರಮ. ಮಕ್ಕಳೆಲ್ಲಾ ಸೇರಿ ಅಲ್ಪ ಸ್ವಲ್ಪ ದುಡ್ಡು ಒಟ್ಟುಗೂಡಿಸಿ, ಹೆಚ್ಚು ಬೇಕಿರುವ ದುಡ್ಡಿಗೆ ಏನು ಮಾಡುವುದು ಎಂದು ಚಿಂತೆ ಮಾಡುತ್ತಾರೆ. ಅಷ್ಟೇ ಹೊತ್ತಿಗೆ ಸಿಹಿ ತಾನು ನನ್ನ ಗೆಳೆಯನನ್ನು ಕೇಳುವೆ ಎನ್ನುತ್ತಾಳೆ. ಇನ್ನು ಸೀತಾ ಮನೆಗೆ ಬಂದ ಅವಳ ಅಣ್ಣ, ಹಣ ಕೇಳುತ್ತಾನೆ. ಇಲ್ಲ ಎಂದರೂ ಕೇಳದೆ ಇರುವಷ್ಟು ಹಣವನ್ನು ಕಿತ್ತುಕೊಂಡು ಹೋಗುತ್ತಾನೆ.

ಇತ್ತ ಸಿಹಿ, ರಾಮನಿಗೆ ಗಣಪನನ್ನು ಕೂರಿಸಲು ಹಣ ಕೊಡು ಎಂದು ಫೋನ್ ಮಾಡಿ ಕೇಳುತ್ತಾಳೆ. ಅಷ್ಟರಲ್ಲಿ ಅಲ್ಲಿಗೂ ಬಂದ ಸೀತಾಳ ಅಣ್ಣ ಅವಳು ಮನೆ ಮನೆ ತಿರುಗಿ ಒಟ್ಟು ಮಾಡಿಟ್ಟ ಹಣವನ್ನೂ ಹಿಂದೂ ಮುಂದೂ ನೋಡದೆಯೇ ಕಿತ್ತು ಹೋಗುತ್ತಾನೆ. ಇದೆಲ್ಲವನ್ನು ಫೋನ್ ನಲ್ಲಿ ನೋಡುತ್ತಿದ್ದ ರಾಮ್ ಅವಳ ಮನೆಗೆ ಬರುತ್ತಾನೆ. ಕೋಪದಲ್ಲಿಯೇ ಜೋರಾಗಿ ಅಳುತ್ತಾ ಮನೆಗೆ ಬಂದ ಸಿಹಿ ಸೀತಮ್ಮನ ಬಳಿ ಮಾವ ಮಾಡಿದ ಕೆಲಸವನ್ನು ಹೇಳುತ್ತಾಳೆ. ಎಲ್ಲರೂ ನಂಗೆ ಮೋಸ ಮಾಡುತ್ತಾರೆ ಎಂದು ಬೇಸರ ಪಟ್ಟುಕೊಳ್ಳುತ್ತಾಳೆ. ಅವಳನ್ನು ಸಮಾಧಾನ ಮಾಡಿದ ರಾಮ್ ತಾನು ಗಣೇಶನನ್ನು ತರುವುದಾಗಿ ಸಿಹಿಗೆ ಪ್ರಾಮೀಸ್ ಮಾಡುತ್ತಾನೆ. ಅದನ್ನು ನೋಡಿದ ಸೀತಾ ಮಕ್ಕಳಿಗೆ ಹಾಗೆಲ್ಲಾ ಆಣೆ – ಪ್ರಮಾಣ ಮಾಡಿ ಕಲಿಸಬೇಡಿ ಎನ್ನುತ್ತಾಳೆ. ಅದಕ್ಕೆ ರಾಮ್ ನನ್ನ ಬದುಕಿನ ಮುಖ್ಯವಾದ ವ್ಯಕ್ತಿಗಳಲ್ಲಿ ಸಿಹಿಯೂ ಒಬ್ಬಳು. ನನ್ನಿಂದ ಅವಳನ್ನು ದೂರ ಮಾಡಬೇಡಿ ಎಂದು ಸೀತಾ ಬಳಿ ಕೈ ಮುಗಿದು ಬೇಡಿಕೊಳ್ಳುತ್ತಾನೆ. ಸಿಹಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾನಾ ರಾಮ್? ಕಾದು ನೋಡೋಣ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ