Seetha Raama: ರಾಮ್ ಖುಷಿಗೆ ಸಿಹಿಯೇ ಕಾರಣ ಎಂಬುದು ಭಾರ್ಗವಿಗೆ ತಿಳಿಯುತ್ತಾ? ಸ್ಪರ್ಧೆಯಲ್ಲಿ ಗೆಲ್ಲುತ್ತಾಳಾ ಸಿಹಿ?

Seetha Raama: ಸಿಹಿ ಗಣಪ ಇಲ್ಲದೇ ನಾವು ಸೋಲುತ್ತೇವೆ ಎಂದು ನೆನೆಸಿಕೊಂಡು ಸಪ್ಪಗೆ ಕೂರುತ್ತಾಳೆ. ಅಷ್ಟೇ ಹೊತ್ತಿಗೆ ಅಲ್ಲಿಗೆ ಬಂದ ರಾಮ್, ಪ್ಲಾನ್ ಮಾಡಿ ಗಣಪನನ್ನು ಕೂರಿಸಲು ಹಣ ಒಟ್ಟುಗೂಡಿಸಿ. ಗಣಪತಿಯನ್ನು ತರುತ್ತಾನೆ. ಆ ಅದ್ದೂರಿ ಮೆರವಣಿಗೆ ನೋಡಿ ಸಿಹಿಯ ಖುಷಿಗೆ ಪಾರವೇ ಇರುವುದಿಲ್ಲ. ರಾಮ್ ನಿಂದಾಗಿ, ಸ್ಪರ್ಧೆಯಲ್ಲಿ ಗೆಲ್ಲುತ್ತಾಳ ಸಿಹಿ? ಭಾರ್ಗವಿ ಕೊಟ್ಟ ಗಣಪ ಮನೆಗೆ ಬಾರದ್ದು ರಾಮನಿಂದ ಎಂಬುದು ಅವಳಿಗೆ ತಿಳಿಯುತ್ತಾ? ಕಾದು ನೋಡೋಣ.

Seetha Raama: ರಾಮ್ ಖುಷಿಗೆ ಸಿಹಿಯೇ ಕಾರಣ ಎಂಬುದು ಭಾರ್ಗವಿಗೆ ತಿಳಿಯುತ್ತಾ? ಸ್ಪರ್ಧೆಯಲ್ಲಿ ಗೆಲ್ಲುತ್ತಾಳಾ ಸಿಹಿ?
ಸೀತಾ-ರಾಮ
Edited By:

Updated on: Sep 21, 2023 | 10:47 PM

ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 50: ದುಡ್ಡನ್ನು ಮಾವ ಕಿತ್ತುಕೊಂಡು ಹೋದದ್ದಕ್ಕೆ ಬೇಸರ ಪಟ್ಟುಕೊಂಡ ಸಿಹಿಯನ್ನು ವಠಾರದ ಮಕ್ಕಳೆಲ್ಲಾ ಬಂದು ಸಮಾಧಾನ ಮಾಡುತ್ತಾರೆ. ಜೊತೆಗೆ ಮಣ್ಣಿನ ಗಣಪತಿಯನ್ನು ಎಲ್ಲರೂ ಒಟ್ಟಿಗೆ ಸೇರಿ ಮಾಡೋಣ ಎನ್ನುತ್ತಾರೆ. ಹಾಗೆಯೇ ವಠಾರದವರೆಲ್ಲಾ ಒಟ್ಟು ಗೂಡಿ ತಮ್ಮ ತಮ್ಮ ಕೈಲಾದಷ್ಟು ಗಣಪತಿ ಮಾಡುತ್ತಾರೆ. ಇನ್ನು ಸಿಹಿ ಕೂಡ ರಾಮನಿಗೆ ಗಣಪತಿ ತರುವುದು ಬೇಡ ನಾವೇ ಗಣಪತಿ ಮಾಡುತ್ತೇವೆ ಎಂದು ಸೀತಮ್ಮ ಒತ್ತಾಯ ಮಾಡಿದ್ದಕ್ಕೆ ಹೇಳುತ್ತಾಳೆ. ಆದರೆ ಅವಳ ಮಾತನ್ನು ಒಪ್ಪದ ರಾಮ್ ಅವಳಿಗೆ ಖುಷಿ ಪಡಿಸಲು ನಿರ್ಧಾರ ಮಾಡುತ್ತಾನೆ. ಅದಕ್ಕೆ ಅಶೋಕ್ ಕೂಡ ಕೈ ಜೋಡಿಸುತ್ತಾನೆ.

ಇನ್ನು ಖುಷಿ ತನ್ನ ಎಲ್ಲ ಆಸೆಗಳನ್ನು ಪೂರೈಸಲು ಗಣೇಶನ ಬಳಿ ಬೇಡಿಕೆ ಇಡುತ್ತಾಳೆ. ಹೆಲಿಕಾಪ್ಟರ್ ನಲ್ಲಿ ಹೋಗುವಂತೆ ಮಾಡು ಅದಕ್ಕಾಗಿ ದಿನಪೂರ್ತಿ ಉಪವಾಸ ಮಾಡುತ್ತೇನೆ ಎಂದು ಬೇಡಿಕೊಳ್ಳುತ್ತಾಳೆ. ರಾಮ್ ಮನೆಯಲ್ಲಿ ಕೂಡ ಹಬ್ಬದ ಕಳೆ ಗಟ್ಟಿರುತ್ತದೆ. ಹಬ್ಬಕ್ಕೆ ಗಣಪನನ್ನು ತರಲು ಹೋದ ರಾಮ್ ಮತ್ತು ಅಶೋಕ್ ತಮ್ಮ ಮನೆಗೆ ತರಬೇಕಾದ ಗಣಪನನ್ನು ಸಿಹಿ ಮನೆಗೆ ಕಳುಹಿಸುತ್ತಾನೆ. ಮನೆಯಿಂದ ಖುಷಿ ಖುಷಿಯಲ್ಲಿ ಹೊರಟ ರಾಮ್ ನನ್ನು ನೋಡಿದ ಭಾರ್ಗವಿ ಅದಕ್ಕೆ ಕಾರಣ ತಿಳಿಯಲು ಹಪಹಪಿಸುತ್ತಾಳೆ.

ಇದನ್ನೂ ಓದಿ:‘ಸೀತಾ ರಾಮ’ ಮಾತ್ರವಲ್ಲ ತೆಲುಗಿನ ಈ ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ ಗಗನ್ ಚಿನ್ನಪ್ಪ

ಹೊಸ ಬಟ್ಟೆ ಹಾಕಿ ರೆಡಿ ಆದ ಸಿಹಿ ಗಣಪ ಇಲ್ಲದೇ ನಾವು ಸೋಲುತ್ತೇವೆ ಎಂದು ನೆನೆಸಿಕೊಂಡು ಸಪ್ಪಗೆ ಕೂರುತ್ತಾಳೆ. ಅಷ್ಟೇ ಹೊತ್ತಿಗೆ ಅಲ್ಲಿಗೆ ಬಂದ ರಾಮ್, ಪ್ಲಾನ್ ಮಾಡಿ ಗಣಪನನ್ನು ಕೂರಿಸಲು ಹಣ ಒಟ್ಟುಗೂಡಿಸಿ. ಗಣಪತಿಯನ್ನು ತರುತ್ತಾನೆ. ಆ ಅದ್ದೂರಿ ಮೆರವಣಿಗೆ ನೋಡಿ ಸಿಹಿಯ ಖುಷಿಗೆ ಪಾರವೇ ಇರುವುದಿಲ್ಲ. ರಾಮ್ ನಿಂದಾಗಿ ಸ್ಪರ್ಧೆಯಲ್ಲಿ ಗೆಲ್ಲುತ್ತಾಳ ಸಿಹಿ? ಭಾರ್ಗವಿ ಕೊಟ್ಟ ಗಣಪ ಮನೆಗೆ ಬಾರದ್ದು ರಾಮನಿಂದ ಎಂಬುದು ಅವಳಿಗೆ ತಿಳಿಯುತ್ತಾ? ಕಾದು ನೋಡೋಣ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ