Seetha Raama: ಭಾರ್ಗವಿ ಮಾಡಿದ ಕುತಂತ್ರ ರಾಮ್ ಅರಿವಿಗೆ ಬರುತ್ತಾ? ಅಶೋಕ್ ಮುಂದೇನು ಮಾಡುತ್ತಾನೆ?

| Updated By: ಮಂಜುನಾಥ ಸಿ.

Updated on: Sep 27, 2023 | 10:00 PM

Seetha Raama: ದುಡ್ಡು ಸಿಕ್ಕಿರುವ ಖುಷಿಗೆ ಸೀತಾ ದೇವಸ್ಥಾನಕ್ಕೆ ಬಂದಿದ್ದಾಳೆ ಎಂದು ತಿಳಿದ ರಾಮ್ ಗೆ ಸೀತಾಳ ಮಾತು ಅಚ್ಚರಿ ಮೂಡಿಸುತ್ತದೆ. ಏನು ಗೊತ್ತಿಲ್ಲದ ರಾಮ್ ಗೆ ಸೀತಾ ಏಕೆ ಅಲ್ಲಿ ಬಂದಿದ್ದಾಳೆ ಎಂಬುದು ತಿಳಿದಿರುವುದಿಲ್ಲ. ಮುಂದೇನಾಗಬಹುದು ಚಿಕ್ಕಮ್ಮ ಮಾಡಿದ ಕುತಂತ್ರ ರಾಮ್ ಗೆ ತಿಳಿಯುತ್ತಾ? ರಾಮನನ್ನು ಕ್ಷಮಿಸುತ್ತಾಳಾ ಸೀತಾ? ಕಾದು ನೋಡೋಣ.

Seetha Raama: ಭಾರ್ಗವಿ ಮಾಡಿದ ಕುತಂತ್ರ ರಾಮ್ ಅರಿವಿಗೆ ಬರುತ್ತಾ? ಅಶೋಕ್ ಮುಂದೇನು ಮಾಡುತ್ತಾನೆ?
ಗಗನ್​ ಚಿನ್ನಪ್ಪ, ವೈಷ್ಣವಿ ಗೌಡ
Follow us on

ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 54: ರಾಮನನ್ನು ದೇವಸ್ಥಾನಕ್ಕೆ ಕಳುಹಿಸಿ ಆಫೀಸ್ ಗೆ ಬಂದ ಭಾರ್ಗವಿ ಅಶೋಕ್ ನನ್ನು ಅವಮಾನಿಸಿದ್ದಲ್ಲದೇ, ಸೀತಾಳನ್ನು ಕರೆದು ಅಡ್ವಾನ್ಸ್ ಸ್ಯಾಲರಿ ವಿಷಯವಾಗಿ ಹೀಯಾಳಿಸುತ್ತಾಳೆ. ನಿಮಗೆ ಮಾತ್ರ ಹಣ ಕೊಟ್ಟರೆ ಬೇರೆಯವರು ಕೇಳುತ್ತಾರೆ ಆಗ ಏನು ಮಾಡಬೇಕು ಎಂದು ಕೇಳುತ್ತಾಳೆ. ತನಗೆ ರಾಮ್ ಹೇಳಿದ್ದು ಎಂದು ಸೀತಾ ಹೇಳಿದರೂ ಕೂಡ ಅದನ್ನು ಲೆಕ್ಕಿಸದ ಭಾರ್ಗವಿ ಅವಳನ್ನು ಅವಮಾನಿಸುತ್ತಾಳೆ. ಇನ್ನು ರಾಮ್ ಎಲ್ಲಿಗೆ ಹೋಗಿರಬಹುದು ಎಂದು ಅರಿಯದ ಅಶೋಕ್, ಸೂರ್ಯ ಪ್ರಕಾಶ್ ಗೆ ಕಾಲ್ ಮಾಡಿ ಕೇಳುತ್ತಾನೆ. ಅವನು ದೇವಸ್ಥಾನಕ್ಕೆ ಹೋಗಿರುವುದನ್ನು ಸೂರಿಯಿಂದ ಕೇಳಿ ತಿಳಿದುಕೊಳ್ಳುತ್ತಾನೆ.

ಇದನ್ನೂ ಓದಿ:‘ಸೀತಾ ರಾಮ’ ಮಾತ್ರವಲ್ಲ ತೆಲುಗಿನ ಈ ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ ಗಗನ್ ಚಿನ್ನಪ್ಪ

ಇನ್ನು ಪ್ರೀಯಾ, ಅಶೋಕ್ ನನ್ನು ಮಾತನಾಡಿಸುತ್ತಾಳೆ. ಅವಳಿಂದ ಸೀತಾ ಎಲ್ಲಿಗೆ ಹೋದಳು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾನೆ. ಆದರೆ ಅವಳಿಗೂ ಗೊತ್ತಿಲ್ಲದ್ದನ್ನು ತಿಳಿದು ಸುಮ್ಮನಾಗುತ್ತಾನೆ. ಆದರೆ ಭಾರ್ಗವಿ, ಸೀತಾಳನ್ನು ಕ್ಯಾಬಿನ್ ಗೆ ಕರೆದಿದ್ದಳು ಎಂಬುದು ಅವನಿಗೆ ತಿಳಿಯುತ್ತದೆ. ಇನ್ನು ದೇವಸ್ಥಾನಕ್ಕೆ ಬಂದ ರಾಮ್ ಅಮ್ಮನ ಹೆಸರಿನಲ್ಲಿ ಅರ್ಚನೆ ಮಾಡಿಸಿ ಹೊರಡುತ್ತಾನೆ. ಬೇಸರ ಮಾಡಿಕೊಂಡು ಆಫೀಸ್ ನಿಂದ ಹೊರಟು ಬಂದ ಸೀತಾ ಕೂಡ ದೇವಸ್ಥಾನಕ್ಕೆ ಬರುತ್ತಾಳೆ. ದುಡ್ಡು ಸಿಕ್ಕಿರುವ ಖುಷಿಗೆ ಸೀತಾ ದೇವಸ್ಥಾನಕ್ಕೆ ಬಂದಿದ್ದಾಳೆ ಎಂದು ತಿಳಿದ ರಾಮ್ ಗೆ ಸೀತಾಳ ಮಾತು ಅಚ್ಚರಿ ಮೂಡಿಸುತ್ತದೆ. ಏನು ಗೊತ್ತಿಲ್ಲದ ರಾಮ್ ಗೆ ಸೀತಾ ಏಕೆ ಅಲ್ಲಿ ಬಂದಿದ್ದಾಳೆ ಎಂಬುದು ತಿಳಿದಿರುವುದಿಲ್ಲ. ಮುಂದೇನಾಗಬಹುದು ಚಿಕ್ಕಮ್ಮ ಮಾಡಿದ ಕುತಂತ್ರ ರಾಮ್ ಗೆ ತಿಳಿಯುತ್ತಾ? ರಾಮನನ್ನು ಕ್ಷಮಿಸುತ್ತಾಳಾ ಸೀತಾ? ಕಾದು ನೋಡೋಣ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ