AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಆರ್​ಪಿ ರೇಸ್​ನಲ್ಲಿ ಮತ್ತೆ ಟ್ರ್ಯಾಕ್​ಗೆ ಮರಳಿದ ‘ಭಾಗ್ಯಲಕ್ಷ್ಮೀ’; ಮೊದಲ ಸ್ಥಾನದಲ್ಲಿ ಯಾವ ಧಾರಾವಾಹಿ?

ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಟಿಆರ್​ಪಿ ವಿಚಾರದಲ್ಲಿ ಕೊಂಚ ಡಲ್​ ಆಗಿತ್ತು. ಈಗ ಧಾರಾವಾಹಿಯ ಟಿಆರ್​ಪಿ ಮತ್ತೆ ಹೆಚ್ಚಲು ಆರಂಭಿಸಿದೆ. ಸುಷ್ಮಾ ರಾವ್, ಸುದರ್ಶನ್, ಪದ್ಮಜಾ ರಾವ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ.

ಟಿಆರ್​ಪಿ ರೇಸ್​ನಲ್ಲಿ ಮತ್ತೆ ಟ್ರ್ಯಾಕ್​ಗೆ ಮರಳಿದ ‘ಭಾಗ್ಯಲಕ್ಷ್ಮೀ’; ಮೊದಲ ಸ್ಥಾನದಲ್ಲಿ ಯಾವ ಧಾರಾವಾಹಿ?
ಭಾಗ್ಯಲಕ್ಷ್ಮಿ ಧಾರಾವಾಹಿ
ರಾಜೇಶ್ ದುಗ್ಗುಮನೆ
|

Updated on: Sep 28, 2023 | 2:52 PM

Share

ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಟಿಆರ್​ಪಿ ವಿಚಾರದಲ್ಲಿ ಕೊಂಚ ಡಲ್​ ಆಗಿತ್ತು. ಈಗ ಧಾರಾವಾಹಿಯ ಟಿಆರ್​ಪಿ ಮತ್ತೆ ಹೆಚ್ಚಲು ಆರಂಭಿಸಿದೆ. ಸುಷ್ಮಾ ರಾವ್ (Sushma Rao) , ಸುದರ್ಶನ್, ಪದ್ಮಜಾ ರಾವ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ. 38ನೇ ವಾರದ ಟಿಆರ್​ಪಿಯಲ್ಲಿ ಈ ಬದಲಾವಣೆ ಆಗಿದೆ. ಹಾಗಾದರೆ, ಯಾವ ಧಾರಾವಾಹಿಗೆ ಎಷ್ಟನೇ ಸ್ಥಾನ ಎನ್ನುವ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಪುಟ್ಟಕ್ಕನ ಮಕ್ಕಳು

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಎರಡಂಕಿ ಟಿಆರ್​ಪಿ ಪಡೆದು ಮುನ್ನುಗ್ಗುತ್ತಿದೆ. ಈ ಧಾರಾವಾಹಿ ಟಿಆರ್​ಪಿ ರೇಸ್​ನಲ್ಲಿ ಮೊದಲ ಸ್ಥಾನದಲ್ಲಿದೆ. ಸಂಜನಾ ಬುರ್ಲಿ, ಉಮಾಶ್ರೀ ಮೊದಲಾದವರು ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ.

ಗಟ್ಟಿಮೇಳ

ರಕ್ಷ್ ಹಾಗೂ ನಿಶಾ ರವಿಕೃಷ್ಣ ಮುಖ್ಯಭೂಮಿಕೆಯಲ್ಲಿರುವ ‘ಗಟ್ಟಿಮೇಳ’ ಧಾರಾವಾಹಿ ಎಲ್ಲರ ಮೆಚ್ಚುಗೆ ಪಡೆದಿದೆ. ಸಾವಿರ ಎಪಿಸೋಡ್ ಕಳೆದರೂ ಒಂದೇ ರೀತಿಯ ಟಿಆರ್​ಪಿ ಕಾಯ್ದುಕೊಂಡು ಸಾಗುತ್ತಿರುವ ಹೆಚ್ಚುಗಾರಿಕೆ ಈ ಧಾರಾವಾಹಿಯದ್ದು. ಈ ಧಾರಾವಾಹಿ ಎರಡನೇ ಸ್ಥಾನದಲ್ಲಿದೆ.

ಅಮೃತಧಾರೆ

‘ಅಮೃತಧಾರೆ’ ಧಾರಾವಾಹಿಯಲ್ಲಿ ಮದುವೆ ಎಪಿಸೋಡ್​ಗಳು ಹೈಲೈಟ್ ಆಗುತ್ತಿವೆ. ಈ ಧಾರಾವಾಹಿ ಟಿಆರ್​ಪಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಅಚ್ಚರಿ ಎಂಬಂತೆ, ‘ಸೀತಾ ರಾಮ’ ಧಾರಾವಾಹಿಯನ್ನು ‘ಅಮೃತಧಾರೆ ಹಿಂದಿಕ್ಕಿದೆ.

ಸೀತಾ ರಾಮ

‘ಸೀತಾ ರಾಮ’ ಭರ್ಜರಿ ಮೆಚ್ಚುಗೆ ಪಡೆದುಕೊಂಡ ಧಾರಾವಾಹಿಗಳಲ್ಲಿ ಒಂದು. ಸೀತಾ ಪಾತ್ರದಲ್ಲಿ ವೈಷ್ಣವಿ ಗೌಡ ಹಾಗೂ ರಾಮನ ಪಾತ್ರದಲ್ಲಿ ಗಗನ್ ಚಿನ್ನಪ್ಪ ನಟಿಸುತ್ತಿದ್ದಾರೆ. ಈ ಧಾರಾವಾಹಿ ಟಿಆರ್​ಪಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ನಗರ ಭಾಗದ ಟಿಆರ್​ಪಿಯಲ್ಲಿ ಎರಡನೇ ಸ್ಥಾನದಲ್ಲಿದೆ ಅನ್ನೋದು ವಿಶೇಷ.

ಶ್ರೀರಸ್ತು ಶುಭಮಸ್ತು

‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಟಿಆರ್​ಪಿ ರೇಸ್​ನಲ್ಲಿ ಐದನೇ ಸ್ಥಾನದಲ್ಲಿದೆ. ಈ ಧಾರಾವಾಹಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಸುಧಾರಾಣಿ ಮೊದಲಾದವರು ಈ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ.

ಇದನ್ನೂ ಓದಿ: ಟಿಆರ್​ಪಿ ರೇಸ್​​ನಲ್ಲಿ ‘ಗಟ್ಟಿಮೇಳ-ಸೀತಾರಾಮ’ ಮಧ್ಯೆ ಭರ್ಜರಿ ಪೈಪೋಟಿ; ಇಲ್ಲಿದೆ ವಿವರ

‘ಭಾಗ್ಯಲಕ್ಷ್ಮಿ’

‘ಭಾಗ್ಯಲಕ್ಷ್ಮಿ’ ಧಾರಾವಾಹಿ ಟಿಆರ್​ಪಿ ಹೆಚ್ಚಿದೆ. ಈ ವಾರ ಧಾರಾವಾಹಿ ಆರನೇ ಸ್ಥಾನಕ್ಕೆ ಬಂದಿದೆ. ನಗರ ವಿಭಾಗದಲ್ಲಿ ಈ ಧಾರಾವಾಹಿ ‘ಅಮೃತಧಾರೆ’ಗೆ ಸ್ಪರ್ಧೆ ನೀಡಲು ರೆಡಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ