‘ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 66: ಸುಳ್ಳು ಹೇಳಬಾರದು ಎಂದು ಮಗಳಿಗೆ ಹೇಳಿ ಕೊಡುವ ಸೀತಾ, ರಾಮನನ್ನು ಉದಾಹರಣೆಯಾಗಿ ತೆಗೆದುಕೊಳ್ಳುತ್ತಾಳೆ. ನಿಜವಾಗಿಯೂ ರಾಮ್ ಮುಚ್ಚಿಟ್ಟಿರುವ ಸತ್ಯ ತಿಳಿದರೆ ಏನಾಗಬಹುದು? ಆದರೆ ಆ ಸಂದರ್ಭಕ್ಕೆ ಅದಾವುದೂ ಗೊತ್ತಿಲ್ಲದ ಸೀತಾ ತನ್ನ ಮಗಳಿಗೂ ಅವನಂತೆ ಆಗು ಎನ್ನುತ್ತಾಳೆ. ಇನ್ನು ರುದ್ರ ಪ್ರತಾಪ್, ಸೀತಾಳ ಆಫೀಸ್ನಲ್ಲಿ ಬ್ಯಾಂಕ್ನವರು ಬಂದ ವಿಷಯವನ್ನು ಶಾಂತಾ ಮತ್ತು ಮೂರ್ತಿಯನ್ನು ಭೇಟಿಯಾಗಿ ಅವರ ಬಳಿ ಹೇಳುತ್ತಾನೆ, ಅವರ ಮನಸ್ಸಿಗೆ ತನಗೆ ಬೇಕಾದ ವಿಷಯಗಳನ್ನು ತುಂಬಿ ಅವರ ಬಳಿ ತಾನು ಸೀತಾಳಿಗೆ ತಕ್ಕ ವರ ಎಂದು ಬಿಂಬಿಸುತ್ತಾನೆ.
ಇನ್ನು ಸೀತಾಳಿಗೋಸ್ಕರ ಸ್ವಲ್ಪ ದುಡ್ಡು ತೆಗೆದುಕೊಂಡು ಹೊರಟ ರಾಮ್, ಅಶೋಕ್ ಸಲಹೆ ಕೇಳುತ್ತಾನೆ. ಆದರೂ ಏನು ಸರಿ ಹೋಗದ ಕಾರಣ ಸೀತಾಳಿಗೆ ಹೇಗಾದರೂ ಮಾಡಿ ದುಡ್ಡು ಕೊಡಲು ನಿರ್ಧಾರ ಮಾಡುತ್ತಾನೆ. ಅದೇ ನೆಪ ಹೇಳಿ ಅವರನ್ನು ಕರೆದುಕೊಂಡು ಹೋಗಿ ಹಣ ನೀಡುತ್ತಾನೆ. ಆದರೆ ಅದನ್ನು ಅಷ್ಟೇ ಪ್ರೀತಿಯಿಂದ ಸೀತಾ ಬೇಡ ಎಂದಾಗ ಬೇಸರವಾಗುವುದರ ಜೊತೆಗೆ ತನ್ನಿಂದ ಏನು ಮಾಡಲು ಸಾಧ್ಯವಾಗುವುದಿಲ್ಲ ಎಂದು ಹತಾಶೆ ಪಡುತ್ತಾನೆ.
ಇದನ್ನೂ ಓದಿ: Seetha Raama: ಅಶೋಕ್ ಕೈಯಲ್ಲಿ ಸಿಕ್ಕಿಬೀಳುತ್ತಾಳಾ ಆಫೀಸ್ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದ್ದ ಭಾರ್ಗವಿ?
ಆ ದುಡ್ಡನ್ನು ನೀವೇ ಉಪಯೋಗಿಸಿ ಎಂದು ಸಲಹೆ ನೀಡಿದ ಸೀತಾ, ಹಿಂದೆ ಆದ ಪ್ರೀತಿಯೇ, ಮುಂದೆ ನಿಮಗೆ ಸ್ಫೂರ್ತಿಯಾಗಬೇಕು ಎನ್ನುತ್ತಾಳೆ. ‘ಪ್ರೀತಿ ಆಗಿದೆ ಅಂತ ಗೊತ್ತಿಲ್ಲದೇ ಆಗೋದೇ ಪ್ರೀತಿ’ ಎಂಬ ಮಾತಿನಿಂದ ರಾಮನ ಮನಸ್ಸನ್ನು ಗೆಲ್ಲುತ್ತಾಳೆ. ಅದೇ ಖುಷಿಯಲ್ಲಿ ರಾಮ್ ಅವಳನ್ನು ಕಿಚಾಯಿಸುತ್ತಾನೆ. ಅದಕ್ಕೆ ಅವಳು ಕೂಡ ಅವನಿಗೆ ಪ್ರತ್ಯುತ್ತರ ಕೊಟ್ಟು ಹಣವನ್ನು ಪ್ರೀತಿಯಿಂದ ತಿರಸ್ಕರಿಸಿ ನಡೆಯುತ್ತಾಳೆ. ಅವನು ಅಂದು ಕೊಂಡಂತೆ ಆಗದಿದ್ದರೂ ಸೀತಾಳ ಮಾತು ಅವನನ್ನು ಕರಗಿಸುತ್ತದೆ. ಮುಂದೇನಾಗಬಹುದು? ರಾಮನಿಗೆ ಗೊತ್ತಿಲ್ಲದೇ, ಸೀತಾಳ ಮೇಲೆ ಪ್ರೇಮ ಹುಟ್ಟುತ್ತಾ? ಕಾದು ನೋಡೋಣ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ