Seetha Raama Serial: ಸಿಹಿ ಮನೆಯ ಬಾಗಿಲು ತೆರೆದು ಬಲಗಾಲಿಟ್ಟ ರಾಮ; ಮೂಡಿದ ಸೀತಾ ಬಗ್ಗೆ ತಿಳಿದುಕೊಳ್ಳುವ ಕುತೂಹಲ

ಸೀತಾರಾಮ ಧಾರಾವಾಹಿ: ಸಿಹಿಯ ಕೋರಿಕೆಯ ಮೆರೆಗೆ ಮನೆಗೆ ಬಂದಿರುವ ರಾಮನಿಗೆ ಸೀತಾ ಮನೆ ಬಾಗಿಲಿಗೆ ಅಂಟಿಸಿದ್ದ ನೋಟಿಸ್ ಕಣ್ಣಿಗೆ ಬಿದ್ದಿದೆ. ಇಡೀ ಮನೆ ತುಂಬಾ ಸಿಹಿ-ಸೀತಾ ಬಿಟ್ಟು ಬೇರೆ ಯಾರದ್ದು ಫೋಟೋ ಇಲ್ಲದಿರುವುದನ್ನು ಗಮನಿಸಿದ ರಾಮ್ ಮನದಲ್ಲಿ ಹಲವಾರು ಪ್ರಶ್ನೆ ಹುಟ್ಟಿಕೊಂಡಿದೆ.  

Seetha Raama Serial: ಸಿಹಿ ಮನೆಯ ಬಾಗಿಲು ತೆರೆದು ಬಲಗಾಲಿಟ್ಟ ರಾಮ; ಮೂಡಿದ ಸೀತಾ ಬಗ್ಗೆ ತಿಳಿದುಕೊಳ್ಳುವ ಕುತೂಹಲ
ಸಿಹಿ-ಸೀತಾ-ರಾಮ್
Edited By:

Updated on: Aug 04, 2023 | 8:58 AM

‘ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ  14: ಆಫೀಸ್​​ನಲ್ಲಿ ತಾತ ಮತ್ತು ಅಶೋಕ್ ಮಾಡುವ ತರ್ಲೆ ತಡೆಯೋದಕ್ಕೆ ಆಗದೇ ಇರುವ ರಾಮ್ ಬಚ್ಚಿಟ್ಟುಕೊಳ್ಳುತ್ತಾನೆ. ಇದನ್ನು ನೋಡಿ ಅವರಿಬ್ಬರೂ ಮಜಾ ತೆಗೆದುಕೊಳ್ಳುತ್ತಾರೆ. ಆದರೆ ಇದನ್ನೆಲ್ಲಾ ನೋಡುತ್ತಿದ್ದ ಸೀತಾಳಿಗೆ ಏನು ನಡೆಯುತ್ತಿದೆ ಎಂಬುದೇ ತಿಳಿಯದಿರುವ ಪರಿಸ್ಥಿತಿ. ಇನ್ನು ಆಫೀಸ್​ನಲ್ಲಿ ನಡೆದ ಸ್ಪೆಷಲ್ ಪಾರ್ಟಿಗೂ ಹೋಗದೇ ಇರುವ ಸೀತಾ ಹಾಗೂ ರಾಮ್ (Ram) ಮನೆ ದಾರಿ ಹಿಡಿದಿದ್ದಾರೆ.

ರಾಮ್​ಗೆ ಆಹ್ವಾನ ಕೊಟ್ಟ ಸಿಹಿ

ಮನೆಯಲ್ಲಿ ಪಾನಿ ಪುರಿ ಪಾರ್ಟಿ ಅರೇಂಜ್ ಮಾಡಿರುವ ಸಿಹಿಗೆ ರಾಮ್​ನನ್ನು ಕರೆಯೋ ಆಸೆ. ಫೋನ್ ಮಾಡಿ ಅವನನ್ನು ಮನೆಗೆ ಕರೆಯುತ್ತಾಳೆ. ಇನ್ನು ಅವಳ ಕರೆಗೆ ಶಾಂತಮ್ಮನ ವಠಾರಕ್ಕೆ ಕಾಲಿಟ್ಟಿದ್ದಾನೆ ರಾಮ್. ಆದರೆ ತನ್ನ ಸ್ವಾರ್ಥಕ್ಕಾಗಿ ಮನೆಗೆ ನೋಟಿಸ್ ಕಳಿಸಿರುವ ಲಾಯರ್ ರುದ್ರ ಪ್ರತಾಪನ ಸಂಚು ರಾಮನ ಕಣ್ಣಿಗೆ ಬಿದ್ದಿದೆ. ಸೀತಾ ವಿರುದ್ಧವಾಗಿ ನಡೆಯುತ್ತಿರುವ ಪಿತೂರಿ ತಡೆಯಲು ರಾಮ್ ಸಹಾಯ ಮಾಡುವ ಆಲೋಚನೆ ಮಾಡಿಕೊಂಡಂತಿದೆ.

ರಾಮ್​​ಗೆ ಆಶ್ವರ್ಯಗಳ ಸಂತೆ

ಸೀತಾ ಮನೆಗೆ ಮೊದಲ ಬಾರಿಗೆ ಬಂದಿರುವ ರಾಮ್​ನನ್ನು ಸೀತಾ ಆಶ್ಚರ್ಯ, ಖುಷಿ ಎಲ್ಲದರ ಜೊತೆಗೆ ಬರಮಾಡಿಕೊಂಡಿದ್ದಾಳೆ. ಇನ್ನು ಸಿಹಿ ತನ್ನ ಗೆಳೆಯನನ್ನು ನೋಡಿ ಸಂತೋಷದಲ್ಲಿ ಕಳೆದುಹೋಗಿದ್ದಾಳೆ. ಇನ್ನು ರಾಮ್, ಸೀತಾ ಅಪ್ಪ ಅಮ್ಮನ ಹಾಗೆ ಪ್ರೀತಿ ತೋರಿಸುವ ತಾತ ಅಜ್ಜಿಯನ್ನು ಮಾತನಾಡಿಸಿದ್ದಾನೆ. ತನ್ನ ಸ್ವಂತ ಮಗಳಲ್ಲದಿದ್ದರೂ ಸೀತಾಳಿಗೆ  ಅವರು ತೋರುವ ಕಾಳಜಿ, ಪ್ರೀತಿ ಎಲ್ಲರನ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಪೂಜಾ ಲೋಕೇಶ್ ಸಂದರ್ಶನ: ‘ಸೀತಾ ರಾಮ’ ಧಾರಾವಾಹಿಯ ವಿಲನ್ ಪಾತ್ರದ ಬಗ್ಗೆ ಮಾತನಾಡಿದ ನಟಿ

ಇನ್ನು ಮನೆಯ್ಲಲಿ ಕೇವಲ ಸೀತಾ ಮತ್ತು ಸಿಹಿ ಫೋಟೋಗಳನ್ನು ಮಾತ್ರ ನೋಡಿದ ರಾಮ್, ಸೀತಾ ಬಳಿ, ಯಾಕೆ ಈ ಮನೆಯಲ್ಲಿ ನಿಮ್ಮಿಬ್ಬರದ್ದು ಮಾತ್ರ ಫೋಟೋ ಇದೆ ಎಂದು ಪ್ರಶ್ನಿಸಿದ್ದಾನೆ. ಹಾಗಾದರೆ ಇದಕ್ಕೆ ಸೀತಾ ಕೊಡುವ ಉತ್ತರವೇನು? ಸಿಹಿ ಮತ್ತು ಸೀತಾಳ ಜಗತ್ತಿನಲ್ಲಿ ಹಿಂದೆ ನಡೆದಿದ್ದೇನು? ಈ ಪ್ರಶ್ನೆಗೆಲ್ಲಾ ಉತ್ತರ ಸಿಗಬಹುದಾ? ಕಾದು  ನೋಡಬೇಕಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:37 am, Fri, 4 August 23