Seetha Raama Serial: ರಾಮ್ ಮಾಡುವ ಸಹಾಯ ಸೀತಾಳ ಬದುಕನ್ನೇ ಬದಲಿಸುತ್ತಾ? ರುದ್ರ ಪ್ರತಾಪನ ಪ್ಲಾನ್ ವರ್ಕ್ ಆಗುತ್ತಾ?

ಸೀತಾರಾಮ ಧಾರಾವಾಹಿ: ಒಬ್ಬಂಟಿಯಾಗಿದ್ದ ರಾಮನಿಗೆ ಆ ಪುಟ್ಟ ಮಗು, ಆ ಪುಟ್ಟ ಮನೆ, ಅವರ ಪ್ರೀತಿ ನೋಡಿ ಜೀವನದ ಅರ್ಥವೇ ಬೇರೆ ಆಗಿದೆ. ಇದನ್ನೆಲ್ಲಾ ನೋಡಿದ ಮೇಲೆ ಹೇಗಾದರೂ ಸೀತಾಳಿಗೆ ಸಹಾಯ ಮಾಡಬೇಕೆಂಬ ಹಂಬಲ ಮೂಡಿದೆ.

Seetha Raama Serial: ರಾಮ್ ಮಾಡುವ ಸಹಾಯ ಸೀತಾಳ ಬದುಕನ್ನೇ ಬದಲಿಸುತ್ತಾ? ರುದ್ರ ಪ್ರತಾಪನ ಪ್ಲಾನ್ ವರ್ಕ್ ಆಗುತ್ತಾ?
ವೈಷ್ಣವಿ ಗೌಡ
Follow us
ಪ್ರೀತಿ ಭಟ್​, ಗುಣವಂತೆ
| Updated By: ಮದನ್​ ಕುಮಾರ್​

Updated on: Aug 05, 2023 | 7:19 AM

‘ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 15: ಮನೆಗೆ ಬಂದ ರಾಮನಿಗೆ ಸೀತಾಳ ಕಷ್ಟ ಅರ್ಥವಾಗಿದೆ. ಆದರೆ ಮನೆಗೆ ನೋಟಿಸ್ ಬಂದಿರುವ ವಿಷಯ ಹೇಳುವುದಕ್ಕೂ ಕಷ್ಟವಾಗುತ್ತದೆ. ಇನ್ನು ಸೀತಾ ಆಫೀಸ್ ನಲ್ಲಿ ಬಂದಿರುವ ದುಡ್ಡಿನಲ್ಲಿ ಸಿಹಿ ಅಜ್ಜಿ ತಾತನಿಗೆ ವಾಷಿಂಗ್ ಮಿಶನ್ ಕೊಡಿಸುತ್ತಾಳೆ. ಆದರೆ ಆ ಖುಷಿ ಅನುಭವಿಸುವ ಮೊದಲೇ ನೋಟಿಸ್ ವಿಷಯ ತಿಳಿದು ಸಂಕಟ ಪಟ್ಟುಕೊಳ್ಳುತ್ತಾಳೆ. ರಾಮ್​ಗೆ ಆ ಸ್ಥಿತಿಯಲ್ಲಿ ಏನು ಮಾಡಬೇಕೆಂಬುದು ತಿಳಿಯದೇ ಕಸಿವಿಸಿಗೊಳ್ಳುತ್ತಾನೆ. ಇನ್ನು ಸೀತಾಳಿಗೆ ಮಗಳಿಗೆ ಈ ವಿಷಯ ಗೊತ್ತಾದರೇ ಎಂಬ ಭಯವೂ ಶುರುವಾಗುತ್ತದೆ. ಅಷ್ಟು ಹೊತ್ತಿಗೆ ಇಬ್ಬರೂ ಸಿಹಿ ಬಿಡಿಸಿದ್ದ ಅರಮನೆಯ ಡ್ರಾಯಿಂಗ್ ನೋಡಿ ಅದನ್ನೇ ಬಾಗಿಲ ಮೇಲಿದ್ದ ನೋಟಿಸ್ ಮೇಲೆ ಅಂಟಿಸುವ ಕೆಲಸ ಮಾಡುತ್ತಾರೆ. ಆದರೆ ಸತ್ಯ ಎಷ್ಟು ದಿನ ಮುಚ್ಚಿಡಲು ಸಾಧ್ಯ ಅಲ್ಲವಾ?

ಇನ್ನು ಅತ್ತಿಗೆಗೆ ನೋಟಿಸ್ ವಿಷಯವಾಗಿ ಸೀತಾ ಯಾಕೆ ಫೋನ್ ಮಾಡಿಲ್ಲ ಎಂಬ ಚಿಂತೆ ಶುರುವಾಗುತ್ತೆ. ಎಲ್ಲಿಯಾದರೂ ಮಾಡಿದ್ದರೇ ರುದ್ರ ಪ್ರತಾಪ ತುಂಬಾ ಒಳ್ಳೆಯ ಲಾಯರ್ ಅವನ ಬಳಿ ಹೇಳಿ ಸೀತಾ ಮತ್ತು ಲಾಯರ್ ಮಾತುಕತೆ ಮುಂದುವರೆಸುವ ಪ್ಲಾನ್ ಅವಳದ್ದು ಆದರೆ ಅದಕ್ಕೆ ಅವಕಾಶ ಕೊಡದ ಸೀತಾ ನೋಟಿಸ್ ವಿಷಯವನ್ನು ಎಲ್ಲರಿಂದಲೂ ಮುಚ್ಚಿಡುತ್ತಾಳೆ.

ಇದನ್ನೂ ಓದಿ: ಪೂಜಾ ಲೋಕೇಶ್ ಸಂದರ್ಶನ: ‘ಸೀತಾ ರಾಮ’ ಧಾರಾವಾಹಿಯ ವಿಲನ್ ಪಾತ್ರದ ಬಗ್ಗೆ ಮಾತನಾಡಿದ ನಟಿ

ಆಟಿಕೆಗಳೇ ಸಿಹಿಯ ಅರಮನೆ

ಸೀತಾ ಮನೆಯಲ್ಲಿ ರಾಮ್ ತಂದಿರುವ ಆಟಿಕೆಗಳಿಂದ ಸಿಹಿ ಅರಮನೆ ಮಾಡುತ್ತಾಳೆ. ಅದಕ್ಕೊಂದು ಚೆಂದದ ಹಾಡು ಕಟ್ಟಿ ಮನೆಯವರನ್ನೆಲ್ಲಾ ಒಟ್ಟುಗೂಡಿಸಿ ಹಾಡುತ್ತಾಳೆ. ಇನ್ನು ಪಾನಿಪುರಿ ಪಾರ್ಟಿಗೆ ಬಂದ ರಾಮ್ ನಿಗೆ ಸೀತಾ ಮನೆ, ಆ ಮನೆಯವರು, ಅದಕ್ಕಿಂತ ಹೆಚ್ಚಾಗಿ ಅವನಿಗೆ ಸಿಕ್ಕ ಸಿಹಿಯ ಪ್ರೀತಿ ಎಲ್ಲವೂ ತುಂಬಾ ಇಷ್ಟವಾಗುತ್ತದೆ. ಸಿಹಿಯ ಅಜ್ಜಿ ಮದುವೆ ಪ್ರಸ್ತಾಪ ಮಾಡಿ ಅವನಿಗೆ ಬುದ್ದಿವಾದವನ್ನೂ ಹೇಳುತ್ತಾಳೆ.

ಇದನ್ನೂ ಓದಿ: ಭರ್ಜರಿ ಟಿಆರ್​ಪಿ ಪಡೆದ ‘ಸೀತಾ ರಾಮ’ ಧಾರಾವಾಹಿ; ಯಾವ ಸೀರಿಯಲ್​ಗೆ ಯಾವ ಸ್ಥಾನ?

ಜೀವನದ ಅರ್ಥ ಬದಲಾಗಿದೆ

ಮನೆಗೆ ಹೋದ ರಾಮನಿಗೆ ‘ಒಬ್ಬಂಟಿಯಾಗಿದ್ದ ತನಗೆ ಪುಟ್ಟ ಮಗು, ಪುಟ್ಟ ಮನೆ, ಅವರ ಪ್ರೀತಿ ನೋಡಿ ಜೀವನದ ಅರ್ಥ ಬೇರೆ ಆಗಿದೆ” ಎಂದು ಅನಿಸುವುದಕ್ಕೆ ಆರಂಭವಾಗುತ್ತದೆ. ಅಷ್ಟೆಲ್ಲಾ ಸಮಸ್ಯೆಗಳಿದ್ದರೂ ಯಾವುದನ್ನೂ ತೋರಿಸಿಕೊಳ್ಳದೇ ಅವರು ಬದುಕುತ್ತಿರುವ ರೀತಿ ನೋಡಿ ತಾನು ಏನಾದರೂ ಸಹಾಯ ಮಾಡಬೇಕಿನಿಸುತ್ತದೆ. ಹಾಗಾದರೆ ರಾಮ್ ಯಾವ ರೀತಿ ಸಹಾಯ ಮಾಡಬಹುದು? ತಿಳಿಯಲು ಮುಂದಿನ ವಾರದವರೆಗೆ ಕಾಯಬೇಕಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ