Seetha Raama Serial: ಪರಿಸ್ಥಿತಿಗೆ ಕಟ್ಟುಬಿದ್ದ ಸೀತಾ; ಲಾಯರ್ ಮಾಡಿದ ಕುತಂತ್ರ ಫಲಿಸುತ್ತಾ?

| Updated By: ರಾಜೇಶ್ ದುಗ್ಗುಮನೆ

Updated on: Aug 08, 2023 | 8:35 AM

‘ಸೀತಾ ರಾಮ’ ಧಾರಾವಾಹಿ ಸಂಚಿಕೆ 16: ಲಾಯರ್ ಮತ್ತು ಸೀತಾಳ ಅತ್ತಿಗೆ ಮಾಡಿದ ಕುತಂತ್ರ ಸೀತಾಳನ್ನು ಕಟ್ಟು ಹಾಕಿದೆ. ಸೀತಾ ಮತ್ತು ಸಿಹಿಗೆ ಸಹಾಯ ಮಾಡಿ ರಾಮ್ ಇವವರ ಬದುಕನ್ನೇ ಬದಲಿಸಬಹುದು.

Seetha Raama Serial: ಪರಿಸ್ಥಿತಿಗೆ ಕಟ್ಟುಬಿದ್ದ ಸೀತಾ; ಲಾಯರ್ ಮಾಡಿದ ಕುತಂತ್ರ ಫಲಿಸುತ್ತಾ?
ಸೀತಾ-ಸಿಹಿ
Follow us on

ಕಾಫಿ ಮಾಡಿದ ರಾಮ

‘ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 16: ಮುಂಜಾನೆಯ ಬೆಳಕು ರಾಮನ ಕೋಣೆಗೆ ಬೀಳುತ್ತಿದ್ದಂತೆ ಅಲಾರಂ ತನ್ನ ಕೆಲಸ ಆರಂಭಿಸಿದೆ. ಆ ಶಬ್ದ ಕೇಳುತ್ತಿದ್ದಂತೆ ರಾಮ್​ಗೆ ಸೀತಾ ಮಾಡಿದ ಶಿಸ್ತಿನ ಪಾಠ ನೆನಪಾಗಿ, ಥಟ್ಟಂತ ಎಚ್ಚರಗೊಳ್ಳುತ್ತಾನೆ. ಅಡುಗೆ ಮನೆಗೆ ಹೋಗಿ ಅವನೇ ಕಾಫಿ ಮಾಡುತ್ತಾನೆ. ಆದರೆ ಉಪ್ಪು ಯಾವುದು? ಸಕ್ಕರೆ ಯಾವುದು? ತಿಳಿಯದೇ ಪರದಾಡುತ್ತಾನೆ. ಇದನ್ನೆಲ್ಲಾ ಕಂಡ ಭಾರ್ಗವಿ ಸಿಟ್ಟಿನಿಂದ ಕೆಲಸದವರ ಮೇಲೆ ಕೂಗಾಡುತ್ತಾಳೆ. ಅದಕ್ಕೆ ರಾಮ್ ತಾನೇ ಅಡುಗೆ ಮನೆಗೆ ಬಂದಿರುವುದಾಗಿ ಚಿಕ್ಕಿಗೆ ತಿಳಿಸಿ, ತಮ್ಮ ಆಫೀಸಿಗೆ ಮಹಿಳೆಯರು ಬೆಳಿಗ್ಗೆ ಎಷ್ಟೆಲ್ಲಾ ಕೆಲಸ ಮಾಡಿ ಬರುತ್ತಾರೆ ಎಂಬ ಬಗ್ಗೆ ಹೇಳುತ್ತಾನೆ. ಇದನ್ನೆಲ್ಲಾ ಕೇಳಿದ ತಾತನಿಗೆ, ರಾಮ ಲೋಕಾರೂಢಿಯಾಗಿ ಮಾತನಾಡುತ್ತಿರುವುದನ್ನು ಕೇಳಿ ಬಹಳ ಸಂತೋಷವಾಗುತ್ತದೆ. ಇದಕ್ಕೆಲ್ಲಾ ಸೀತಾ ಕಾರಣ ಎಂಬುದು ತಾತ ಮತ್ತು ಅಶೋಕನಿಗೆ ತಿಳಿಯುತ್ತದೆ. ಜೊತೆಗೆ ದೇಸಾಯಿ ಮನೆ ಹಿರಿ ತಲೆ ತಾತನಿಗೆ ತನ್ನ ಮೊಮ್ಮಗ ಬದಲಾಗುತ್ತಿದ್ದಾನೆ ಎಂಬುದು ತುಂಬಾ ಖುಷಿ ನೀಡುತ್ತದೆ.

ಅರಮನೆಗೆ ಪತ್ರ ಬರೆದ ಸಿಹಿ

ಇನ್ನು ಸಿಹಿ ಅರಮನೆಗೆ ಪತ್ರ ಬರೆಯುತ್ತಿದ್ದಾಳೆ. ಅರಮನೆ ಮನೆಗೆ ಬಂದರೆ ಏನು ಮಾಡಬೇಕು ಎಂಬುದನ್ನು ಬರೆದಿಟ್ಟಿದ್ದಾಳೆ. ಅದನ್ನು ಮನೆ ಮುಂದಿನ ಬಾಗಿಲಿನ ಮೇಲೆ ಅಂಟಿಸಿದ್ದಾಳೆ. ಅವಳ ಮುಗ್ಧತೆ ಎಲ್ಲರಿಗೂ ಇಷ್ಟ ಆಗಿದೆ.

ಇದನ್ನೂ ಓದಿ: ಪೂಜಾ ಲೋಕೇಶ್ ಸಂದರ್ಶನ: ‘ಸೀತಾ ರಾಮ’ ಧಾರಾವಾಹಿಯ ವಿಲನ್ ಪಾತ್ರದ ಬಗ್ಗೆ ಮಾತನಾಡಿದ ನಟಿ

ಸೀತಾಳಿಗೆ ಅತ್ತಿಗೆ ಕಾಟ..

ಮನೆಯ ನೋಟಿಸ್ ವಿಚಾರವನ್ನು ಕೇಳಲು ಸೀತಾಳ ಅತ್ತಿಗೆ ಬಂದಿದ್ದಾಳೆ. ಅದರ ಜೊತೆಗೆ ‘ಲಾಯರ್ ರುದ್ರ ಪ್ರತಾಪನಿಗೆ ಫೋನ್ ಮಾಡಿ ಈ ವಿಷಯ ಹೇಳು, ಇಲ್ಲವಾದಲ್ಲಿ ನೀನು ಜೈಲಿಗೆ ಹೋಗಬೇಕಾಗುತ್ತದೆ’ ಎಂಬ ಒತ್ತಡವನ್ನೂ ಹಾಕುತ್ತಾಳೆ. ಅತ್ತಿಗೆ ಮಾತಿಗೆ ಹೆದರಿದ ಸೀತಾ ಕೊನೆಗೂ ಲಾಯರ್​ಗೆ ಕಾಲ್ ಮಾಡಿದ್ದಾಳೆ. ಸರಿಯಾದ ಸಮಯವನ್ನು ಉಪಯೋಗಿಸಿಕೊಂಡ ರುದ್ರ ಇದನ್ನೆಲ್ಲಾ ಆಫೀಸ್ ಅಲ್ಲಿ ಕುಳಿತು ಮಾತನಾಡಬೇಕು ಎಂದು ನೆಪ ಹೇಳಿ ಸೀತಾಳನ್ನು ಕರೆಯುತ್ತಾನೆ. ದಿಕ್ಕು ತೋಚದೇ ಸೀತಾ ಮುಂದೇನು ಎಂದು ಚಿಂತಿಸುತ್ತಾಳೆ. ಆದರೆ ಸಿಹಿಯ ಪ್ರೀತಿ, ಅವಳ ಅಪ್ಪುಗೆ ಅದೆಲ್ಲವನ್ನೂ ಮರೆಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:34 am, Tue, 8 August 23