ಕಿರುತೆರೆ ನಟಿಯ ಜತೆಗಿನ ಪ್ರೀತಿಯನ್ನು ಅಧಿಕೃತ ಮಾಡಿದ ಹೀರೋ; ಮೊದಲೇ ಗೊತ್ತಿತ್ತು ಎಂದ ಫ್ಯಾನ್ಸ್​

| Updated By: ರಾಜೇಶ್ ದುಗ್ಗುಮನೆ

Updated on: Sep 29, 2021 | 5:31 PM

ಆರ್ಯನ್​ ಅವವರು ಇತ್ತೀಚೆಗೆ ಮ್ಯಾಚಿಂಗ್​ ರಿಂಗ್​ನ ಫೋಟೋವನ್ನು ಪೋಸ್ಟ್ ಮಾಡಿದ್ದರು. ಇದು ಶಬಾನಾ ಮತ್ತು ಆರ್ಯನ್​ ನಡುವೆ ಪ್ರೀತಿ ಮೊಳೆತಿದೆ ಎನ್ನುವ ಸುದ್ದಿಗೆ ಪುಷ್ಠಿ ನೀಡಿತ್ತು.

ಕಿರುತೆರೆ ನಟಿಯ ಜತೆಗಿನ ಪ್ರೀತಿಯನ್ನು ಅಧಿಕೃತ ಮಾಡಿದ ಹೀರೋ; ಮೊದಲೇ ಗೊತ್ತಿತ್ತು ಎಂದ ಫ್ಯಾನ್ಸ್​
ಶಬಾನಾ-ಆರ್ಯನ್
Follow us on

ಚಿತ್ರರಂಗದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಾ ಇರುವಾಗ ನಟ-ನಟಿಯರ ಮಧ್ಯೆ ಪ್ರೀತಿ ಮೊಳೆತು ಮದುವೆ ಆದ ಉದಾಹರಣೆ ಸಾಕಷ್ಟಿದೆ. ಯಶ್ ಮತ್ತು ರಾಧಿಕಾ ಪಂಡಿತ್​ ಸೇರಿ ಸಾಕಷ್ಟು  ಮಂದಿ ಒಂದೇ ಸಿನಿಮಾದಲ್ಲಿ ಕೆಲಸ ಮಾಡಿ ಮದುವೆ ಆಗಿದ್ದಾರೆ. ಈಗ ಈ ಸಾಲಿಗೆ ಹೊಸದೊಂದು ಸೇರ್ಪಡೆ ಆಗುತ್ತಿದೆ. ತಮಿಳು ಕಿರುತೆರೆ ನಟಿ ಶಬಾನಾ ಶಜಹಾನ್​ ಜತೆ ಪ್ರೀತಿಯಲ್ಲಿರುವ ವಿಚಾರವನ್ನು ನಟ ಆರ್ಯನ್​ ಅಧಿಕೃತ ಮಾಡಿದ್ದಾರೆ. ಈ ವಿಚಾರ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಮೂಡಿಸಿದೆ.

ಆರ್ಯನ್​ ಅವರು ಇತ್ತೀಚೆಗೆ ಮ್ಯಾಚಿಂಗ್​ ರಿಂಗ್​ನ ಫೋಟೋವನ್ನು ಪೋಸ್ಟ್ ಮಾಡಿದ್ದರು. ಇದು ಶಬಾನಾ ಮತ್ತು ಆರ್ಯನ್​ ನಡುವೆ ಪ್ರೀತಿ ಮೊಳೆತಿದೆ ಎನ್ನುವ ಸುದ್ದಿಗೆ ಪುಷ್ಠಿ ನೀಡಿತ್ತು.  ಆದರೆ, ಇಬ್ಬರೂ ಈ ವಿಚಾರದಲ್ಲಿ ಮೌನ ವಹಿಸಿದ್ದರು. ಈಗ ಆರ್ಯನ್​ ತಮ್ಮ ಸಂಬಂಧವನ್ನು ಅಧಿಕೃತ ಮಾಡಿದ್ದಾರೆ.

ಶಬಾನಾ ಜತೆ ನಿಂತಿರುವ ಫೋಟೋವನ್ನು ಆರ್ಯನ್​ ಪೋಸ್ಟ್ ಮಾಡಿದ್ದಾರೆ. ಆ ಫೋಟೋಗೆ ‘ದೇವರು ನೀಡಿದ ಅತಿದೊಡ್ಡ ಗಿಫ್ಟ್’​ ಎನ್ನುವ ಕ್ಯಾಪ್ಶನ್​ ನೀಡಿದ್ದಾರೆ. ಈ ಮೂಲಕ ಎಲ್ಲಾ ವದಂತಿಗೆ ಬ್ರೇಕ್​ ಕೊಟ್ಟು ತಮ್ಮ ಸಂಬಂಧವನ್ನು ಅಧಿಕೃತ ಮಾಡಿದ್ದಾರೆ. ಈ ಫೋಟೋದಲ್ಲಿ ಶಬಾನಾ ಬಿಳಿ ಬಣ್ಣದ ಡ್ರೆಸ್​ನಲ್ಲಿ ಕಾಣಿಸಿಕೊಂಡರೆ, ಆರ್ಯನ್​ ಕುರ್ತಾದಲ್ಲಿ ಮಿಂಚಿದ್ದಾರೆ.

ಮದುವೆ ವಿಚಾರ ಅಧಿಕೃತ ಮಾಡಿದ ಬೆನ್ನಲ್ಲೇ ಸಾಕಷ್ಟು ವರದಿಗಳು ಈ ಬಗ್ಗೆ ಹರಿದಾಡಿವೆ. ಮೂಲಗಳ ಪ್ರಕಾರ ಇಬ್ಬರೂ ಶೀಘ್ರವೇ ಮದುವೆ ಆಗಲಿದ್ದಾರೆ ಎನ್ನಲಾಗಿದೆ. ಅದಕ್ಕಾಗಿಯೇ ಇಬ್ಬರೂ ತಮ್ಮ ಸಂಬಂಧವನ್ನು ಅಧಿಕೃತ ಮಾಡಿದ್ದಾರೆ ಎಂದು ಕೆಲ ವರದಿಗಳು ತಿಳಿಸಿವೆ.

ಈ ವರ್ಷ ಮೇ ತಿಂಗಳಿಂದಲೇ ಇವರಿಬ್ಬರ ಪ್ರೀತಿ ವಿಚಾರದ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಮಹಿಳಾ ಅಭಿಮಾನಿಯೊಬ್ಬರು ಆರ್ಯನ್​​ಗೆ ಸೋಶಿಯಲ್​ ಮೀಡಿಯಾ ಕಮೆಂಟ್​ ಬಾಕ್ಸ್​ನಲ್ಲಿ ಪ್ರಪೋಸ್​ ಮಾಡಿದ್ದರು. ಈ ಕಮೆಂಟ್​ಗೆ ಅವರು ಶಬಾನಾ ಅವರನ್ನು ಟ್ಯಾಗ್​ ಮಾಡುವ ಮೂಲಕ ಸಾಕಷ್ಟು ಸುದ್ದಿಯಾಗಿದ್ದರು.

ಶಬಾನಾ 2016ರಲ್ಲಿ ಧಾರಾವಾಹಿ ಲೋಕಕ್ಕೆ ಕಾಲಿಟ್ಟರು. ಆರಂಭದಲ್ಲಿ ಮಲಯಾಳಂ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಅವರು ನಂತರ ತಮಿಳು ಕಿರುತೆರೆ ಲೋಕಕ್ಕೆ ಕಾಲಿಟ್ಟರು. ಅವರು ನಟಿಸುತ್ತಿರುವ ಸೆಂಬರುಥಿ ಧಾರಾವಾಹಿ 1000 ಎಪಿಸೋಡ್​ ಮುಗಿಸಿ ಮುನ್ನುಗ್ಗುತ್ತಿದೆ.

ಇದನ್ನೂ ಓದಿ: ವಿವಾದಾತ್ಮಕ ಫೋಟೋಶೂಟ್​ ಮಾಡಿಸಿ ಬಂಧನಕ್ಕೆ ಒಳಗಾದ ಕಿರುತೆರೆ ನಟಿ

ಖ್ಯಾತ ಕಿರುತೆರೆ ನಟಿ ವಿರುದ್ಧ ಅಭಿಮಾನಿಯಿಂದಲೇ ಕಿರುಕುಳ ಆರೋಪ

Published On - 5:03 pm, Wed, 29 September 21