ಜೀ ಕನ್ನಡದಲ್ಲಿ (Zee Kannada) ಪ್ರಸಾರ ಆಗುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಧಾರಾವಾಹಿಯ ನಾಯಕ ಅನಿರುದ್ಧ ಹಾಗೂ ಧಾರಾವಾಹಿಯ ತಂತ್ರಜ್ಞರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಎರಡು ವರ್ಷಗಳ ಕಾಲ ಅವರನ್ನು ಧಾರಾವಾಹಿಯಿಂದ ಹೊರಗಿಡುವ ನಿರ್ಧಾರಕ್ಕೆ ಬರಲಾಗಿದೆ. ಈ ಬಗ್ಗೆ ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಅವರು ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ, ಧಾರಾವಾಹಿಯ ಕಥಾ ನಾಯಕಿ ಮೇಘಾ ಶೆಟ್ಟಿ (Megha Shetty) ಬಗ್ಗೆ ಮಾತನಾಡಿದ್ದಾರೆ.
ಕೊವಿಡ್ ಸಂದರ್ಭದಲ್ಲಿ ಮೇಘಾ ಶೆಟ್ಟಿ ಅವರು ಧಾರಾವಾಹಿಯಿಂದ ಹೊರ ನಡೆಯಲಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದರು. ‘ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ ಎನ್ನುವ ಸುದ್ದಿ ನಾಲ್ಕೈದು ದಿನಗಳಿಂದ ಹರಿದಾಡಿತ್ತು. ಕುಟುಂಬ ಎಂದಾಗ ಗೊಂದಲ ಸಹಜ. ಈಗ ಗೊಂದಲ ಬಗೆಹರಿದಿದೆ. ಧಾರಾವಾಹಿ ಮುಗಿಯುವ ತನಕ ಅನು ಸಿರಿಮನೆ ಪಾತ್ರವನ್ನು ನಾನೇ ಮಾಡುತ್ತೇನೆ’ ಎಂದು ಮೇಘಾ ಶೆಟ್ಟಿ ಅಂದು ಭರವಸೆ ನೀಡಿದ್ದರು. ಅಂದು ಏನಾಗಿತ್ತು ಎಂಬ ವಿಚಾರದ ಬಗ್ಗೆ ಭಾಸ್ಕರ್ ಈಗ ಮಾಹಿತಿ ಹಂಚಿಕೊಂಡಿದ್ದಾರೆ.
‘ಕೊವಿಡ್ ಸಂದರ್ಭದಲ್ಲಿ ಶೂಟಿಂಗ್ಗಾಗಿ ಎಲ್ಲಾ ಧಾರಾವಾಹಿ ಟೀಂ ಹೈದರಾಬಾದ್ಗೆ ತೆರಳಿತ್ತು. ಆ ಸಂದರ್ಭದಲ್ಲಿ ಆರೂರು ಜಗದೀಶ್ ಅವರು ಕಣ್ಣೀರು ಹಾಕಿದ್ದರು. ಎಲ್ಲಾ ತಂಡದವರು ಸುಗಮವಾಗಿ ಶೂಟಿಂಗ್ ಮಾಡುತ್ತಿದ್ದರು. ಆದರೆ, ಈ ಟೀಂನಿಂದ ಮಾತ್ರ ದೂರು ಬರುತ್ತಿತ್ತು. ಕಥಾನಾಯಕಿಯನ್ನು ಸೀರಿಯಲ್ನಿಂದ ತೆಗೆಯಬೇಕು ಎಂದು ನಾವು ಎಲ್ಲರೂ ಸೇರಿ ನಿರ್ಧರಿಸಿದ್ದೆವು. ಅವರಿಗೂ ಆ ಮಾತನ್ನು ಹೇಳಿದ್ದೆವು. ಆದರೆ, ತಪ್ಪಿನ ಅರಿವಾಗಿ ಅವರು ಕ್ಷಮೆ ಕೇಳಿದ್ದರು’ ಎಂದಿದ್ದಾರೆ ಭಾಸ್ಕರ್.
ಇದನ್ನೂ ಓದಿ: ‘ಜೊತೆ ಜೊತೆಯಲಿ’ ಧಾರಾವಾಹಿಯ ಗೆಲುವಿನ ಸೂತ್ರವೇನು? ನಟಿ ಮೇಘಾ ಶೆಟ್ಟಿ ವಿವರಿಸಿದ್ದು ಹೀಗೆ
ಸದ್ಯ, ಅನಿರುದ್ಧ್ ಅವರನ್ನು ಎರಡು ವರ್ಷಗಳ ಕಾಲ ಕಿರುತೆರೆ ಲೋಕದಿಂದ ಹೊರಗಿಡುವ ನಿರ್ಧಾರಕ್ಕೆ ಬರಲಾಗಿದೆ. ಮುಂದಿನ ದಿನಗಳಲ್ಲಿ ಅನಿರುದ್ಧ್ಗೂ ಹಾಗೂ ಧಾರಾವಾಹಿ ತಂಡಕ್ಕೂ ರಾಜಿ ಆಗಲಿದೆಯೇ ಎಂಬುದು ಸದ್ಯದ ಕುತೂಹಲ. ಮತ್ತೆ ನಟಿಸಲು ಸಿದ್ಧರಿರುವುದಾಗಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಒಂದೊಮ್ಮೆ ಅನಿರುದ್ಧ ಹೊರಗುಳಿದಿದ್ದೇ ಆದಲ್ಲಿ ಬೇರೆ ಕಲಾವಿದರನ್ನು ಇಟ್ಟುಕೊಂಡು ‘ಜೊತೆ ಜೊತೆಯಲಿ’ ಮುನ್ನಡೆಸಲಾಗುತ್ತದೆಯೇ ಎಂಬುದನ್ನೂ ಕಾದು ನೋಡಬೇಕಿದೆ.
Published On - 2:37 pm, Sat, 20 August 22