Shamita Shetty: ಶಮಿತಾ ಶೆಟ್ಟಿಗೆ ಆಂಟಿ ಎಂದ ನಟಿ; ಜಗಳಕ್ಕೆ ಇಳಿದ ಶಿಲ್ಪಾ ಶೆಟ್ಟಿ ತಂಗಿ

| Updated By: ರಾಜೇಶ್ ದುಗ್ಗುಮನೆ

Updated on: Aug 13, 2021 | 8:47 PM

ಗುರುವಾರ (ಆಗಸ್ಟ್​ 12) ಎಪಿಸೋಡ್​ನಲ್ಲಿ ಶಮಿತಾ ಶೆಟ್ಟಿ ಹಾಗೂ ಭೋಜ್​ಪುರಿ ನಟಿ ಅಕ್ಷರಾ ಸಿಂಗ್​ ನಡುವೆ ಕಿತ್ತಾಟ ಏರ್ಪಟ್ಟಿದೆ. ಊಟದ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ಆರಂಭವಾಗಿದೆ. ‘

Shamita Shetty: ಶಮಿತಾ ಶೆಟ್ಟಿಗೆ ಆಂಟಿ ಎಂದ ನಟಿ; ಜಗಳಕ್ಕೆ ಇಳಿದ ಶಿಲ್ಪಾ ಶೆಟ್ಟಿ ತಂಗಿ
ಶಮಿತಾ ಶೆಟ್ಟಿಗೆ ಆಂಟಿ ಎಂದ ನಟಿ; ಜಗಳಕ್ಕೆ ಇಳಿದ ಶಿಲ್ಪಾ ಶೆಟ್ಟಿ ತಂಗಿ
Follow us on

ಅಶ್ಲೀಲ ಸಿನಿಮಾ ನಿರ್ಮಾಣ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಪೊಲೀಸರ ವಶದಲ್ಲಿರುವ ರಾಜ್​ ಕುಂದ್ರಾ ಅವರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಅವರ ಬಂಧನದ ಬಳಿಕ ಪತ್ನಿ ಶಿಲ್ಪಾ ಶೆಟ್ಟಿ, ನಾದಿನಿ ಶಮಿತಾ ಶೆಟ್ಟಿ ಸೇರಿದಂತೆ ಇಡೀ ಕುಟುಂಬವೇ ಮುಜುಗರ ಅನುಭವಿಸುವಂತಾಗಿದೆ. ಅದರ ನಡುವೆಯೂ ಶಮಿತಾ ಶೆಟ್ಟಿ ಅವರು ಬಿಗ್​ ಬಾಸ್​ ಓಟಿಟಿ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದಾರೆ. ಅವರು ಬಿಗ್​ ಬಾಸ್​ ಒಟಿಟಿಯಲ್ಲಿ ಸಾಕಷ್ಟು ಹೈಲೈಟ್​ ಕೂಡ ಆಗುತ್ತಿದ್ದಾರೆ.

ಗುರುವಾರ (ಆಗಸ್ಟ್​ 12) ಎಪಿಸೋಡ್​ನಲ್ಲಿ ಶಮಿತಾ ಶೆಟ್ಟಿ ಹಾಗೂ ಭೋಜ್​ಪುರಿ ನಟಿ ಅಕ್ಷರಾ ಸಿಂಗ್​ ನಡುವೆ ಕಿತ್ತಾಟ ಏರ್ಪಟ್ಟಿದೆ. ಊಟದ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ಆರಂಭವಾಗಿದೆ. ‘ಶಮಿತಾ ಮನೆಯಲ್ಲಿ ಎಲ್ಲರಿಗೂ ಆದೇಶ ನೀಡುತ್ತಾ, ಇಂಗ್ಲಿಷ್ ಪದಗಳನ್ನು ಬಳಸಿ ತಾವು ಹೈ-ಫೈ ಸಮಾಜಕ್ಕೆ ಸೇರಿದವರು ಎಂದು ತೋರಿಸುತ್ತಿದ್ದಾರೆ’ ಎಂಬುದಾಗಿ ಅಕ್ಷರಾ ದೂರಿದರು.  ಶಮಿತಾ ಕೂಡ  ಅಕ್ಷರಾಗೆ ತಿರುಗೇಟು ನೀಡಿದ್ದಾರೆ.

ನಂತರ ಅಕ್ಷರಾ ಅವರು ಶಮಿತಾ ವಯಸ್ಸಿನ ಬಗ್ಗೆ ಮಾತನಾಡಿದ್ದಾರೆ. ‘ಶಮಿತಾ ನನ್ನ ತಾಯಿ ವಯಸ್ಸಿನವರು. ಅವರೊಂದು ರೀತಿಯಲ್ಲಿ ಆಂಟಿ ಇದ್ದಂತೆ. ಶಮಿತಾಗೆ ಅಷ್ಟೊಂದು ವಯಸ್ಸಾಗಿದೆ ಎಂದು ತಿಳಿದು ನನಗೆ ಶಾಕ್​ ಆಯಿತು’ ಎಂದು ಉರ್ಫಿ ಜಾವೇದ್​ ಬಳಿ ಅಕ್ಷರಾ ಹೇಳಿಕೊಂಡಿದ್ದಾರೆ.

ಕರಣ್​ ಜೋಹರ್​ ನಡೆಸಿಕೊಡುತ್ತಿರುವ ‘ಬಿಗ್​ ಬಾಸ್​ ಓಟಿಟಿ’ ಶೋ ಕೇವಲ ವೂಟ್​ನಲ್ಲಿ ಪ್ರಸಾರ ಆಗುತ್ತಿದೆ. ಈ ಕಾರ್ಯಕ್ರಮ ತುಂಬ ವಿವಾದಾತ್ಮಕವಾಗಿದ್ದು, ಹಲವು ಸೆಲೆಬ್ರಿಟಿಗಳು ಭಾಗವಹಿಸುತ್ತಿದ್ದಾರೆ. ಅದರಲ್ಲಿ ಕೊರಿಯೋಗ್ರಾಫರ್​ ನಿಶಾಂತ್​ ಭಟ್​ ಸಹ ಇದ್ದಾರೆ. ಆದರೆ ಅವರ ಜೊತೆಗೆ ಶಮಿತಾ ಶೆಟ್ಟಿ ಬೆರೆಯುತ್ತಿಲ್ಲ. ಅವರಿಂದ ಸಾಧ್ಯವಾದಷ್ಟು ಅಂತರವನ್ನು ಕಾಪಾಡಿಕೊಳ್ಳಲು ಶಮಿತಾ ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ.

ಸಹ ಸ್ಪರ್ಧಿ ದಿವ್ಯಾ ಅಗರ್​ವಾಲ್​ ಜೊತೆ ಮಾತನಾಡುವಾಗ ಶಮಿತಾ ಶೆಟ್ಟಿ ಈ ವಿಷಯ ಬಾಯಿಬಿಟ್ಟಿದ್ದಾರೆ. ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯ ಬಗ್ಗೆ ಇಷ್ಟು ದಿನ ಮುಚ್ಚಿಟ್ಟಿದ್ದ ಆ ರಹಸ್ಯವನ್ನು ಅವರು ಬಯಲು ಮಾಡಿದ್ದಾರೆ. ‘ಒಂದು ಶೋನಲ್ಲಿ ಜೊತೆಯಾಗಿ ಕೆಲಸ ಮಾಡುವಾಗ ನಿಶಾಂತ್​ ಭಟ್​ ನನ್ನೊಂದಿಗೆ ಲಿಮಿಟ್​ ಕ್ರಾಸ್​ ಮಾಡಿದ್ದ. ಅದು ನನಗೆ ಕಿರಿಕಿರಿ ಉಂಟುಮಾಡಿತ್ತು. ಆ ಬಳಿಕ ನಾನು ಅವನಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದೆ’ ಎಂದು ಶಮಿತಾ ಹೇಳಿದ್ದಾರೆ.

ಇದನ್ನೂ ಓದಿ: ‘ಒಮ್ಮೆ ಅವನು ನನ್ನ ಜತೆ ಲಿಮಿಟ್​ ಕ್ರಾಸ್​ ಮಾಡಿದ್ದ’; ರಹಸ್ಯ ತೆರೆದಿಟ್ಟ ರಾಜ್​ ಕುಂದ್ರಾ ನಾದಿನಿ ಶಮಿತಾ ಶೆಟ್ಟಿ

‘ಬೇರೆ ವಿಚಾರಗಳಲ್ಲಿ ಮನಸ್ತಾಪ ಬೇಡ’; ಬಿಗ್​ ಬಾಸ್​ ಮುಗಿದ್ಮೇಲೆ ಮೊದಲ ಬಾರಿಗೆ ಅಭಿಮಾನಿಗಳೆದರು ಬಂದ ಅರವಿಂದ್​