‘ನಾನೇನು ಅಲ್ಲಾಡಿಸಿದೆ ಹೇಳಿ’; ಮಂಜುಗೆ ನೇರ ಪ್ರಶ್ನೆ ಇಟ್ಟ ಶೋಭಾ ಶೆಟ್ಟಿ

‘ಬಿಗ್ ಬಾಸ್ ಕನ್ನಡ ಸೀಸನ್ 11’ ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿರುವ ಶೋಭಾ ಶೆಟ್ಟಿ ಅವರ ಆಟಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಮಂಜು ಮತ್ತು ಶೋಭಾ ನಡುವೆ ನಾಯಕತ್ವದ ವಿಚಾರದಲ್ಲಿ ಜಗಳ ನಡೆದಿದ್ದು, ಶೋಭಾ ಅವರ ವರ್ತನೆಗೆ ಮಂಜು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿವಾದವು ದೊಡ್ಡಮನೆಯ ವಾತಾವರಣದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ.

‘ನಾನೇನು ಅಲ್ಲಾಡಿಸಿದೆ ಹೇಳಿ’; ಮಂಜುಗೆ ನೇರ ಪ್ರಶ್ನೆ ಇಟ್ಟ ಶೋಭಾ ಶೆಟ್ಟಿ
ಶೋಭಾ-ಮಂಜು

Updated on: Nov 20, 2024 | 7:19 AM

ಶೋಭಾ ಶೆಟ್ಟಿ ಅವರು ಬಿಗ್ ಬಾಸ್​ನಲ್ಲಿ ಉತ್ತಮ ಆಟ ಆಡುತ್ತಿದ್ದಾರೆ. ಅವರ ಆಟಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದ ಅವರು ದೊಡ್ಮನೆ ವಾತಾವರಣಕ್ಕೆ ಬೇಗ ಹೊಂದಿಕೊಂಡಿದ್ದಾರೆ. ಈ ಮಧ್ಯೆ ಮಂಜು ಹಾಗೂ ಶೋಭಾ ಮಧ್ಯೆ ಕಿರಿಕ್ ಆಗಿದೆ. ಮಂಜು ಆಡಿದ ಮಾತಿಗೆ ಶೋಭಾ ಸಖತ್ ಸಿಟ್ಟಾಗಿದ್ದಾರೆ. ಈ ಎಪಿಸೋಡ್ ಭರ್ಜರಿ ಚರ್ಚೆ ಹುಟ್ಟುಹಾಕಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಈ ವಾರ ಭವ್ಯಾ ಕ್ಯಾಪ್ಟನ್ ಆದರು. ಈ ವಾರದ ಟಾಸ್ಕ್​ಗೆ ಒಂದು ತಂಡದ ಕ್ಯಾಪ್ಟನ್ ಆಗಿ ಭವ್ಯಾ ನೇಮಕ ಗೊಂಡಿದ್ದಾರೆ. ಕ್ಯಾಪ್ಟನ್ ಆಗಿರುವುದಕ್ಕೆ ಅವರಿಗೆ ಸಿಕ್ಕ ವಿಶೇಷ ಅಧಿಕಾರ ಇದು. ಮತ್ತೊಂದು ತಂಡಕ್ಕೆ ಕ್ಯಾಪ್ಟನ್​ನ ಆಯ್ಕೆ ಮಾಡುವ ಪ್ರಕ್ರಿಯೆ ನಡೆದಿದೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದ ಶೋಭಾ ಹಾಗೂ ರಜತ್ ಪೈಕಿ ಒಬ್ಬರನ್ನು ಆಯ್ಕೆ ಮಾಡುವ ಅವಕಾಶವನ್ನು ಬಿಗ್ ಬಾಸ್ ನೀಡಿದರು. ಆಗ ಮಂಜು ಅವರು ಶೋಭಾಗೆ ನಾಯಕಿ ಆಗುವ ಅರ್ಹತೆ ಇಲ್ಲ ಎಂದರು.

‘ಬಿಗ್ ಬಾಸ್ ನೀಡಿದ ನಿಯಮಗಳಿಗೆ ಯಾರೂ ಕೈ ಹಾಕೋಕೆ ಹೋಗಲ್ಲ. ಆದರೆ, ಶೋಭಾ ಅವರು ಅದನ್ನು ಅಲ್ಲಾಡಿಸಿದರು ಎಂದು ನನಗೆ ವೈಯಕ್ತಿಕವಾಗಿ ಅನಿಸಿತು’ ಎಂದರು ಮಂಜು. ಇದಕ್ಕೆ ಶೋಭಾ ಉತ್ತರಿಸಿದ್ದಾರೆ. ‘ಅಲ್ಲಾಡಿಸಿದ್ದು ಅಂದ್ರೆ ಏನು? ನಾನು ಏನನ್ನು ಅಲ್ಲಾಡಿಸಿದೆ? ನನಗೆ ಈ ಬಗ್ಗೆ ಕ್ಲ್ಯಾರಿಟಿ ಬೇಕು’ ಎಂದು ಶೋಭಾ ಪಟ್ಟು ಹಿಡಿದು ಕುಳಿತರು. ಈ ವಿಚಾರಕ್ಕೆ ಸಂಬಂಧಿಸಿ ಇಬ್ಬರ ಮಧ್ಯೆ ಮಾತಿನ ಫೈಟ್ ಜೋರಾಯಿತು.

ಇದನ್ನೂ ಓದಿ: ‘ಹೆಂಗ್ ಮಾತಾಡ್ತಾಳೋ ಯಪ್ಪಾ’; ಶೋಭಾ ಕೂಗಾಟ ನೋಡಿ ಹನುಮಂತ ಸೈಲೆಂಟ್

‘ಸುಮ್ಮನೆ ಕುಳಿತುಕೊಳ್ಳಿ’ ಎಂದು ಮಂಜು ಹೇಳಿದರು. ‘ನಿಮ್ಮ ಮಾತು ಕೇಳೋಕೆ ಬಂದಿಲ್ಲ. ಬಿಗ್ ಬಾಸ್ ಹೇಳಿದ್ರೆ ಮಾತ್ರ ಕೂರೋದು. ಕ್ಲ್ಯಾರಿಫಿಕೇಷನ್ ಕೊಡ್ತೀನಿ’ ಎಂದರು ಶೋಭಾ. ಇವರ ಫೈಟ್​ ನೋಡಿ ಮನೆ ಮಂದಿ ತಲೆಕೆಡಿಸಿಕೊಂಡರು. ಶೋಭಾ ಅವರ ಏರುಧ್ವನಿಯನ್ನು ನೋಡಿ ಹನುಮಂತ ಹಾಗೂ ಧನರಾಜ್ ಅವರು ಶಾಕ್ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us