ಹಿಂದಿ ಕಿರುತೆರೆ ಲೋಕಕ್ಕೆ ಶಾಕ್ ಆಗುವಂಥ ಘಟನೆ ಒಂದು ನಡೆದಿದೆ. ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದ ಸಹೋದರಿಯರಾದ ಡಾಲಿ ಸೋಹಿ (Dolly Sohi) ಹಾಗೂ ಅಮನ್ದೀಪ್ ಸೋಹಿ ಇಬ್ಬರೂ ಕೆಲವೇ ಗಂಟೆಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ. ಒಬ್ಬರು ಜಾಂಡಿಸ್ಗೆ ಮೃತಪಟ್ಟರೆ ಮತ್ತೊಬ್ಬರು ಗರ್ಭಕಂಠ ಕ್ಯಾನ್ಸರ್ನಿಂದ ಕೊನೆಯುಸಿರು ಎಳೆದಿದ್ದಾರೆ. ಈ ವಿಚಾರ ಶಾಕಿಂಗ್ ಎನಿಸಿದೆ.
ಅಮನ್ದೀಪ್ ಅವರಿಗೆ ಹಲವು ದಿನಗಳ ಹಿಂದೆ ಜಾಂಡಿಸ್ ಆಗಿತ್ತು. ಅವರಿಗೆ ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಇದಾದ ಬೆನ್ನಲ್ಲೇ ಕ್ಯಾನ್ಸರ್ನಿಂದ ಬಳಲುತ್ತಿದ್ದು ಸೋಹಿ ಕೂಡ ಕೊನೆಯುಸಿರು ಎಳೆದಿದ್ದಾರೆ. ಇವರ ಸಾವಿಗೆ ಅನೇಕರು ಸಂತಾಪ ಸೂಚಿಸಿದ್ದಾರೆ. ಎರಡೂ ಸಾವುಗಳಿಂದ ಕುಟುಂಬ ಶಾಕ್ಗೆ ಒಳಗಾಗಿದ್ದು, ಇದರಿಂದ ಚೇತರಿಸಿಕೊಳ್ಳುವ ಶಕ್ತಿಯನ್ನು ಅವರಿಗೆ ದೇವರು ನೀಡಲಿ ಎಂದು ಫ್ಯಾನ್ಸ್ ಕೋರಿದ್ದಾರೆ.
‘ನಮ್ಮ ಪ್ರೀತಿಯ ಅಮನ್ದೀಪ್ ಸೋಹಿ ಅವರು ಇಂದು ಸ್ವರ್ಗಸ್ಥರಾಗಿದ್ದಾರೆ. ನಾವು ಅವರನ್ನು ಕಳೆದುಕೊಂಡು ಶಾಕ್ಗೆ ಒಳಗಾಗಿದ್ದೇವೆ. ಇಂದು (ಮಾರ್ಚ್ 8) ಮಧ್ಯಾಹ್ನ ಅಂತಿಮ ಸಂಸ್ಕಾರ ನಡೆಯಲಿದೆ’ ಎಂದು ಡಾಲಿ ಸೋಹಿ ಅವರ ಸಹೋದರ ಮನು ಗುರುವಾರ ಹೇಳಿದ್ದರು. ಇದಾದ ಬೆನ್ನಲ್ಲೇ ಡಾಲಿ ಸಾವನಪ್ಪಿದ್ದಾರೆ.
ಅಮನ್ದೀಪ್ ಅವರು ಗುರುವಾರ (ಮಾರ್ಚ್ 7) ಮೃತಪಟ್ಟರು. ‘ಅಮನ್ದೀಪ್ ಮೃತಪಟ್ಟಿದ್ದಾರೆ ಅನ್ನೋದು ನಿಜ. ಅವರಿಗೆ ಜಾಂಡಿಸ್ ಆಗಿತ್ತು. ವೈದ್ಯರ ಬಳಿ ಹೆಚ್ಚಿನ ಮಾಹಿತಿ ಕೇಳುವ ತಾಕತ್ತು ನಮಗೆ ಇಲ್ಲ’ ಎಂದಿದ್ದಾರೆ ಮನು. ಡಾಲಿ ಅವರ ಆರೋಗ್ಯ ತೀವ್ರ ಹದಗೆಟ್ಟಿರಲಿಲ್ಲ. ಆದರೆ, ವಿಶ್ರಾಂತಿ ಪಡೆಯುವಂತೆ ವೈದ್ಯರು ಹೇಳಿದ್ದರು. 2023ರಲ್ಲಿ ಅವರಿಗೆ ಗರ್ಭಕಂಠ ಕ್ಯಾನ್ಸ್ ಇರೋದು ಪತ್ತೆ ಆಗಿತ್ತು.
ಇದನ್ನೂ ಓದಿ: ಟಿಆರ್ಪಿ ರೇಸ್ನಲ್ಲಿರೋ ಟಾಪ್ ಐದು ಕನ್ನಡದ ಧಾರಾವಾಹಿಗಳ ಬಗ್ಗೆ ಇಲ್ಲಿದೆ ಮಾಹಿತಿ
ಡಾಲಿ ಸೋಹಿ ಅವರು ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. 2000ರಲ್ಲಿ ಪ್ರಸಾರ ಆರಂಭಿಸಿದ ‘ಕಲಾಶ್’ ಧಾರಾವಾಹಿ ಮೂಲಕ ಬಣ್ಣದ ಬದುಕು ಆರಂಭಿಸಿದರು. 2022ರಲ್ಲಿ ಪ್ರಸಾರ ಕಂಡ ‘ಸಿಂಧೂರ್ ಕಿ ಕಿಮತ್’ ಅವರ ನಟನೆಯ ಕೊನೆಯ ಧಾರಾವಾಹಿ. ಅಮನ್ದೀಪ್ ಅವರು ಕೂಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ