ಟಿಆರ್ಪಿ ರೇಸ್ನಲ್ಲಿರೋ ಟಾಪ್ ಐದು ಕನ್ನಡದ ಧಾರಾವಾಹಿಗಳ ಬಗ್ಗೆ ಇಲ್ಲಿದೆ ಮಾಹಿತಿ
Kannada Serial TRP: ಮಧ್ಯಮ ವರ್ಗದ ಕುಟುಂಬದ ಕಥೆ ‘ಲಕ್ಷ್ಮೀ ನಿವಾಸ. ಎರಡು ಹೆಣ್ಣುಮಕ್ಕಳಿಗೆ ಮದುವೆ ಮಾಡಬೇಕು ಎನ್ನುವ ಪ್ರಯತ್ನದಲ್ಲಿರುವ ವ್ಯಕ್ತಿಯ ಕಥೆಯನ್ನು ‘ಲಕ್ಷ್ಮೀ ನಿವಾಸ’ ಧಾರಾವಾಹಿ ಹೊಂದಿದೆ. ಈ ಧಾರಾವಾಹಿಗೆ ಒಟ್ಟಾರೆಯಾಗಿ ಭರ್ಜರಿ ಟಿಆರ್ಪಿ ಸಿಗುತ್ತಿದೆ. ಈ ಧಾರಾವಾಹಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ನಗರ ಹಾಗೂ ಗ್ರಾಮಗಳ ಭಾಗದ ಜನರಿಗೆ ಧಾರಾವಾಹಿ ಹೆಚ್ಚು ಇಷ್ಟ ಆಗಿದೆ.
ಪ್ರತಿ ಗುರುವಾರ ಧಾರಾವಾಹಿಗಳ ಟಿಆರ್ಪಿ (Kannada Serial TRP) ಹೊರ ಬರುತ್ತದೆ. ಪ್ರತಿ ವಾರವೂ ಟಿಆರ್ಪಿಯಲ್ಲಿ ಸಾಕಷ್ಟು ಬದಲಾವಣೆ ಇದ್ದೇ ಇರುತ್ತದೆ. ಒಂದು ವಾರ ಟಾಪ್ನಲ್ಲಿರೋ ಧಾರಾವಾಹಿಯ ಟಿಆರ್ಪಿಯಲ್ಲಿ ಬದಲಾವಣೆ ಆಗಬಹುದು. ಆಯಾ ವಾರ ಯಾವ ರೀತಿಯಲ್ಲಿ ಕಥೆ ಮೂಡಿ ಬಂದಿದೆ ಎಂಬುದರ ಆಧಾರದ ಮೇಲೆ ಟಿಆರ್ಪಿ ನಿಗದಿ ಆಗುತ್ತದೆ. ಈ ವಾರ ಟಾಪ್ ಐದು ಧಾರಾವಾಹಿಗಳ ಸಾಲಿನಲ್ಲಿ ಎಲ್ಲವೂ ಜೀ ಕನ್ನಡದ ಧಾರಾವಾಹಿಗಳೇ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ. ಆ ಬಗ್ಗೆ ಇಲ್ಲಿದೆ ವಿವರ.
ಲಕ್ಷ್ಮೀ ನಿವಾಸ
ಪಕ್ಕಾ ಮಧ್ಯಮ ವರ್ಗದ ಕುಟುಂಬದ ಕಥೆ ‘ಲಕ್ಷ್ಮೀ ನಿವಾಸ. ಎರಡು ಹೆಣ್ಣುಮಕ್ಕಳಿಗೆ ಮದುವೆ ಮಾಡಬೇಕು ಎನ್ನುವ ಪ್ರಯತ್ನದಲ್ಲಿರುವ ವ್ಯಕ್ತಿಯ ಕಥೆಯನ್ನು ‘ಲಕ್ಷ್ಮೀ ನಿವಾಸ’ ಧಾರಾವಾಹಿ ಹೊಂದಿದೆ. ಈ ಧಾರಾವಾಹಿಗೆ ಒಟ್ಟಾರೆಯಾಗಿ ಭರ್ಜರಿ ಟಿಆರ್ಪಿ ಸಿಗುತ್ತಿದೆ. ಈ ಧಾರಾವಾಹಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ನಗರ ಹಾಗೂ ಗ್ರಾಮಗಳ ಭಾಗದ ಜನರಿಗೆ ಧಾರಾವಾಹಿ ಹೆಚ್ಚು ಇಷ್ಟ ಆಗಿದೆ.
ಪುಟ್ಟಕ್ಕನ ಮಕ್ಕಳು
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಎರಡನೇ ಸ್ಥಾನದಲ್ಲಿ ಇದೆ. ‘ಲಕ್ಷ್ಮೀ ನಿವಾಸ’ ಧಾರಾವಾಹಿಗೂ ಮೊದಲು ಟಿಆರ್ಪಿಯಲ್ಲಿ ಈ ಧಾರಾವಾಹಿಗೆ ಮೊದಲ ಸ್ಥಾನ ಸಿಗುತ್ತಿತ್ತು. ಉಮಾಶ್ರೀ ಮೊದಲಾದವರು ನಟಿಸಿದ ಈ ಧಾರಾವಾಹಿ ಈಗ ಎರಡನೇ ಸ್ಥಾನದಲ್ಲಿ ಮುನ್ನಡೆಯುತ್ತಿದೆ.
ಅಮೃತಧಾರೆ
ಆಸ್ತಿ-ಅಂತಸ್ತಿನ ವಿಚಾರದಲ್ಲಿ ಅಜಗಜಾಂತರ ಇರುವ ಎರಡು ಕುಟುಂಬಗಳ ಮಧ್ಯೆ ಸಂಬಂಧ ಬೆಳೆಯುವ ಕಥೆ ‘ಅಮೃತಧಾರೆ’. ಇಲ್ಲಿ ಆಸ್ತಿ ಮಾತ್ರವಲ್ಲ ಕಥಾ ನಾಯಕ ಹಾಗೂ ಕಥಾ ನಾಯಕಿಗೆ ಮದುವೆ ವಯಸ್ಸು ಕೂಡ ಮೀರಿರುತ್ತದೆ. ಸದಾ ಕಿತ್ತಾಡುವ ಇವರ ಮಧ್ಯೆ ಈಗ ನಿಧಾನವಾಗಿ ಪ್ರೀತಿ ಮೂಡುತ್ತಿದೆ.
ಇದನ್ನೂ ಓದಿ: ಟ್ರೆಡಿಷನಲ್ ಲುಕ್ನಲ್ಲಿ ಗಮನ ಸೆಳೆದ ‘ಸೀತಾ ರಾಮ’ ಸುಂದರಿ ವೈಷ್ಣವಿ
ಸೀತಾ ರಾಮ
ಗಗನ್ ಚಿನ್ನಪ್ಪ ಹಾಗೂ ವೈಷ್ಣವಿ ಗೌಡ ಜೊತೆಯಾಗಿ ನಟಿಸಿರೋ ಧಾರಾವಾಹಿ ‘ಸೀತಾ ರಾಮ’. ಇಬ್ಬರ ಮಧ್ಯೆ ಪ್ರೀತಿ ಮೂಡುತ್ತಿದೆ. ಈ ಧಾರಾವಾಹಿ ಇತ್ತೀಚೆಗೆ ಮತ್ತೆ ಜನರ ಫೇವರಿಟ್ ಎನಿಸಿಕೊಂಡಿದೆ. ಈ ಧಾರಾವಾಹಿಗೆ ನಾಲ್ಕನೇ ಸ್ಥಾನ ಸಿಕ್ಕಿದೆ.
ಉಳಿದ ಧಾರಾವಾಹಿ
‘ಸತ್ಯ’ ಧಾರಾವಾಹಿ ಐದನೇ ಸ್ಥಾನದಲ್ಲಿ ಇದೆ. ಆರನೇ ಸ್ಥಾನದಲ್ಲಿ ಜೀ ಕನ್ನಡದ ‘ಶ್ರೀರಸ್ತು ಶುಭಮಸ್ತು’ ಹಾಗೂ ಕಲರ್ಸ್ ಕನ್ನಡದ ‘ರಾಮಾಚಾರಿ’ ಧಾರಾವಾಹಿಗಳು ಇವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ