‘ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ’; ಒಳಉಡುಪಿನ ವಿಚಾರದಲ್ಲಿ ದೇವರನ್ನು ಎಳೆತಂದಿದ್ದ ನಟಿಯ ಕ್ಷಮೆ

| Updated By: ರಾಜೇಶ್ ದುಗ್ಗುಮನೆ

Updated on: Jan 28, 2022 | 6:25 PM

ಫ್ಯಾಶನ್​ ಲೋಕದ ಬಗ್ಗೆ ​ ‘ಶೋ ಸ್ಟಾಪರ್’ ವೆಬ್​ ಸರಣಿ ಸಿದ್ಧಗೊಂಡಿದೆ. ‘ಮಹಾಭಾರತ’ ಧಾರಾವಾಹಿಯಲ್ಲಿ ಕೃಷ್ಣನ ಪಾತ್ರ ಮಾಡಿದ್ದ ಸೌರಭ್​ ರಾಜ್​ ಜೈನ್​ ಕೂಡ ಈ ವೆಬ್​ ಸರಣಿಯಲ್ಲಿ ನಟಿಸಿದ್ದಾರೆ. ಈ ಚಿತ್ರದ ಪ್ರಮೋಷನ್​ಗೆ ತಂಡ ಭೋಪಾಲ್​ಗೆ ತೆರಳಿತ್ತು.

‘ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ’; ಒಳಉಡುಪಿನ ವಿಚಾರದಲ್ಲಿ ದೇವರನ್ನು ಎಳೆತಂದಿದ್ದ ನಟಿಯ ಕ್ಷಮೆ
ಶ್ವೇತಾ ತಿವಾರಿ
Follow us on

ಶ್ವೇತಾ ತಿವಾರಿ (Shweta Tiwari) ಅವರು ಇತ್ತೀಚೆಗೆ ಭೋಪಾಲ್​ಗೆ ತೆರಳಿದ್ದರು. ಹೊಸ ವೆಬ್​ ಸೀರಿಸ್​ ‘ಶೋ ಸ್ಟಾಪರ್’ (Show Stopper  Web Series) ಪ್ರಚಾರ ಕಾರ್ಯದಲ್ಲಿ ಅವರು ಬ್ಯುಸಿ ಆಗಿದ್ದರು. ಈ ವೇಳೆ ಅವರು ಮಾಧ್ಯಮಗಳ ಜತೆ ಮಾತನಾಡುತ್ತಾ ನಗೆ ಚಟಾಕಿ ಹಾರಿಸಿದ್ದರು. ಬ್ರಾ ಸೈಜ್​ ವಿಚಾರದಲ್ಲಿ ದೇವರನ್ನು ಎಳೆದು ತಂದಿದ್ದರು. ‘ನನ್ನ ಬ್ರಾ ಸೈಜ್​ ಅನ್ನು ದೇವರು ತೆಗೆದುಕೊಂಡಿದ್ದಾನೆ’ ಎಂದಿದ್ದರು ಶ್ವೇತಾ. ಈ ವಿಡಿಯೋ ವೈರಲ್​ ಆಗುತ್ತಿದೆ. ಎಲ್ಲರೂ ಅವರ ವಿರುದ್ಧ ಕಿಡಿಕಾರುತ್ತಿದ್ದಾರೆ. ಇದು ಶ್ವೇತಾ ಗಮನಕ್ಕೆ ಬಂದಿದೆ. ಈ ವಿಚಾರದಲ್ಲಿ ಕ್ಷಮೆ ಕೇಳಿದ್ದಾರೆ. ಅಲ್ಲದೆ, ತಾವು ಹೇಳಿದ್ದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ.

ಅಲ್ಲಿ ನಡೆದಿದ್ದೇನು?

ಫ್ಯಾಶನ್​ ಲೋಕದ ಬಗ್ಗೆ ​ ‘ಶೋ ಸ್ಟಾಪರ್’ ವೆಬ್​ ಸರಣಿ ಸಿದ್ಧಗೊಂಡಿದೆ. ‘ಮಹಾಭಾರತ’ ಧಾರಾವಾಹಿಯಲ್ಲಿ ಕೃಷ್ಣನ ಪಾತ್ರ ಮಾಡಿದ್ದ ಸೌರಭ್​ ರಾಜ್​ ಜೈನ್​ ಕೂಡ ಈ ವೆಬ್​ ಸರಣಿಯಲ್ಲಿ ನಟಿಸಿದ್ದಾರೆ. ಈ ಚಿತ್ರದ ಪ್ರಮೋಷನ್​ಗೆ ತಂಡ ಭೋಪಾಲ್​ಗೆ ತೆರಳಿತ್ತು. ಈ ವೇಳೆ ವೆಬ್​ ಸರಣಿ ಬಗ್ಗೆ ಮಾತನಾಡುತ್ತಾ, ‘ನನ್ನ ಬ್ರಾ ಸೈಜ್​ ಅನ್ನು ದೇವರು ತೆಗೆದುಕೊಂಡಿದ್ದಾನೆ’ ಎಂದಿದ್ದರು.

ಭಾರೀ ವಿರೋಧ

ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಈ ಬಗ್ಗೆ ಗರಂ ಆಗಿದ್ದರು. ‘ಶ್ವೇತಾ ತಿವಾರಿ ಅವರ ಹೇಳಿಕೆಯನ್ನು ನಾನು ನೋಡಿದ್ದೇನೆ. ನಾನು ಇದನ್ನು ಖಂಡಿಸುತ್ತೇನೆ. ತನಿಖೆ ನಡೆಸಿ ಶೀಘ್ರವೇ ವರದಿ ಸಲ್ಲಿಸುವಂತೆ ಭೋಪಾಲ್ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ. ಆ ಬಳಿಕ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದರು ನರೋತ್ತಮ್. ಆ ಬಳಿಕ ಪೊಲೀಸರು ಎಫ್​ಐಆರ್​ ದಾಖಲು ಮಾಡಿಕೊಂಡಿದ್ದಾರೆ. ಇದಲ್ಲದೆ, ಸೋಶಿಯಲ್​ ಮೀಡಿಯಾದಲ್ಲೂ ಅವರಿಗೆ ವಿರೋಧ ವ್ಯಕ್ತವಾಗುತ್ತಿದೆ.

 ನಟಿ ಹೇಳೋದೇನು?

ಶ್ವೇತಾ ತಿವಾರಿ ಅವರು ಈ ಬಗ್ಗೆ ಕ್ಷಮೆ ಕೇಳಿದ್ದಾರೆ. ಅಲ್ಲದೆ, ಇದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಹೇಳಿದ್ದಾರೆ. ಹಾಗಾದರೆ, ಅವರು ಹೇಳಿದ ಅರ್ಥವೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ. ಈ ವೆಬ್​ ಸೀರಿಸ್​ನಲ್ಲಿ ಸೌರಭ್​ ರಾಜ್​ ಜೈನ್ ಅವರು ಬ್ರಾ ಫಿಟ್ಟರ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಸ್ತನದ ಆಕಾರ, ಗಾತ್ರಕ್ಕೆ ಅನುಗುಣವಾಗಿ ನಿರ್ದಿಷ್ಟ ಉತ್ಪನ್ನಗಳನ್ನು ಶಿಫಾರಸು ಮಾಡುವುದು ಬ್ರಾ ಫಿಟ್ಟರ್​ ಕೆಲಸ. ಸೌರಭ್​ ಜೈನ್ ಈ ಮೊದಲು ಕೃಷ್ಣನ ಪಾತ್ರ ಮಾಡಿದ್ದರು. ಹೀಗಾಗಿ ಶ್ವೇತಾ ತಿವಾರಿ ಅವರು ಸೌರಭ್​ ಜೈನ್​ಗೆ ಭಗವಾನ್​ ಎನ್ನುವ ಶಬ್ದ ಬಳಕೆ ಮಾಡಿದ್ದರು. ಇದನ್ನು ಶ್ವೇತಾ ತಿವಾರಿ ವಿವರಿಸುವ ಪ್ರಯತ್ನ ಮಾಡಿದ್ದಾರೆ.

‘ನನ್ನ ಹೇಳಿಕೆಯನ್ನು ಸಂಪೂರ್ಣವಾಗಿ ತಪ್ಪಾಗಿ ಅರ್ಥೈಸಲಾಗಿದೆ ಎಂಬುದು ಬೇಸರದ ವಿಚಾರ. ನಾನು ದೇವರ ಬಗ್ಗೆ ನಂಬಿಕೆ ಹೊಂದಿದ್ದೇನೆ. ನನಗೆ ಜನರ ಭಾವನೆಗಳಿಗೆ ನೋವುಂಟುಮಾಡುವ ಉದ್ದೇಶ ಇರಲಿಲ್ಲ. ಆದಾಗ್ಯೂ ಯಾರಿಗಾದರೂ ಬೇಸರವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ ಶ್ವೇತಾ ತಿವಾರಿ.

ಇದನ್ನೂ ಓದಿ: ಸೈಫ್​ ಅಲಿ ಖಾನ್​ ಪುತ್ರ ಇಬ್ರಾಹಿಂ ಜತೆ ಪಲಕ್​ ತಿವಾರಿ ಡೇಟಿಂಗ್​; ಕ್ಯಾಮೆರಾ ಕಂಡ ತಕ್ಷಣ ಮುಖ ಮುಚ್ಚಿಕೊಂಡ ನಟಿ

ದೇವರ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ ಹಿಂದಿ ಕಿರುತೆರೆ ನಟಿ ಶ್ವೇತಾ ತಿವಾರಿ