ಸಿಹಿಯ ಆತ್ಮಕ್ಕೆ ಸಿಕ್ಕಿತು ಹನುಮಂತನ ರಕ್ಷಣೆ; ಬಂದ ಪವರ್​ನಿಂದ ವಿಲನ್​ಗಳಿಗೆ ಭಯ

| Updated By: ರಾಜೇಶ್ ದುಗ್ಗುಮನೆ

Updated on: Mar 21, 2025 | 1:11 PM

ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿಯ ಹತ್ಯೆಯ ನಂತರ, ಆಕೆ ಆತ್ಮ ರೂಪದಲ್ಲಿ ಬಂದಿದ್ದಾಳೆ. ಹನುಮಾನ್ ಚಾಲೀಸಾ ಪಠಣದಿಂದ ಅಲೌಕಿಕ ಶಕ್ತಿ ಪಡೆದ ಸಿಹಿ, ಭಾರ್ಗವಿಯ ವಿರುದ್ಧ ಹೋರಾಡಲು ಸಿದ್ಧಳಾಗಿದ್ದಾಳೆ. ಲಾಯರ್ ಕಿಡ್ನಾಪ್ ಪ್ರಕರಣದಲ್ಲಿ ಸಿಹಿಯ ಶಕ್ತಿ ಸ್ಪಷ್ಟವಾಗಿದೆ. ಧಾರಾವಾಹಿಯಲ್ಲಿ ಮುಂದೆ ಇನ್ನಷ್ಟು ರೋಚಕ ತಿರುವುಗಳು ನಿರೀಕ್ಷಿಸಬಹುದು.

ಸಿಹಿಯ ಆತ್ಮಕ್ಕೆ ಸಿಕ್ಕಿತು ಹನುಮಂತನ ರಕ್ಷಣೆ; ಬಂದ ಪವರ್​ನಿಂದ ವಿಲನ್​ಗಳಿಗೆ ಭಯ
ಸಿಹಿಯ ಆತ್ಮಕ್ಕೆ ಸಿಕ್ಕಿತು ಹನುಮಂತನ ರಕ್ಷಣೆ; ಬಂದ ಪವರ್​ನಿಂದ ವಿಲನ್​ಗಳಿಗೆ ಭಯ
Follow us on

‘ಸೀತಾ ರಾಮ’ ಧಾರಾವಾಹಿಯಲ್ಲಿ (Seetha Raama Serial) ಹಲವು ತಿರುವುಗಳು ಎದುರಾಗಿವೆ. ಸಿಹಿಯನ್ನು ಕೊಲ್ಲಲು ಭಾರ್ಗವಿ ಯಶಸ್ವಿ ಆಗಿದ್ದಳು. ಆ ಕೊಲೆಯ ಬಳಿಕ ಸಿಹಿ ಆತ್ಮವಾಗಿದ್ದಾಳೆ. ತನ್ನ ಸಹೋದರಿ ಸುಬ್ಬಿ (ಹೊಸ ಸಿಹಿ) ಬಿಟ್ಟು ಆಕೆ ಮತ್ಯಾರಿಗೂ ಕಾಣುವುದಿಲ್ಲ. ಈಗ ಸಿಹಿ ಆತ್ಮಕ್ಕೆ ಸಾಕಷ್ಟು ಪವರ್ ಸಿಕ್ಕಿದೆ. ಹನುಮಂತನ ರಕ್ಷಣೆಯಿಂದ ಆಕೆ ವೈರಿಗಳನ್ನು ನಾಶ ಮಾಡಲು ರೆಡಿ ಆಗಿದ್ದಾಳೆ. ಇದರಿಂದ ಧಾರಾವಾಹಿ ಬೇರೆಯದೇ ಹಂತಕ್ಕೆ ಹೋಗುವ ಸೂಚನೆ ಸಿಕ್ಕಿದೆ. ಈ ಪ್ರೋಮೋನ ಜೀ ಕನ್ನಡ ವಾಹಿನಿಯು ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಸಿಹಿಯ ಹತ್ಯೆಯ ನಂತರ ಆಕೆಯು ಸುಬ್ಬಿಯನ್ನು ಭೇಟಿ ಮಾಡಿದ್ದಾಳೆ. ಸುಬ್ಬಿಯು ಸಿಹಿಯ ರೀತಿಯಲ್ಲೇ ಇರುವುದರಿಂದ ಆಕೆಯನ್ನೇ ಈಗ ಸಿಹಿಯಾಗಿ ಬದಲಿಸಲಾಗಿದೆ. ಸುಬ್ಬಿಗೆ ಈ ಹಿಂದಿನ ಯಾವ ವಿಚಾರಗಳೂ ಗೊತ್ತಿಲ್ಲ. ಆದರೆ, ಆತ್ಮದ ರೂಪದಲ್ಲಿ ಬಂದಿರೋ ಸಿಹಿ ಎಲ್ಲವನ್ನೂ ವಿವರಿಸುತ್ತಿದ್ದಾಳೆ. ಕೆಟ್ಟವರು ಯಾರು, ಒಳ್ಳೆಯವರು ಯಾರು ಎಂದು ತಿಳಿಸುತ್ತಾ ಇದ್ದಾಳೆ.

ಈಗ ಸುಬ್ಬಿಯನ್ನು ಲಾಯರ್ ಕಿಡ್ನ್ಯಾಪ್ ಮಾಡಿದ್ದಾನೆ. ಭಾರ್ಗವಿ ಸೂಚನೆ ಮೇರೆಗೆ ಈ ಕಿಡ್ನ್ಯಾಪ್ ನಡೆದಿದೆ. ಈ ವೇಳೆ ಆತ್ಮದ ರೂಪದಲ್ಲಿರುವ ಸಿಹಿಗೆ ಶಕ್ತಿ ಬಂದಿದೆ. ಹನುಮಂತನಿಂದ ರಕ್ಷಣೆ ಪಡೆದ ಆಕೆಯು ಲಾಯರ್​ಗೆ ಸಖತ್ ಏಟು ಕೊಟ್ಟಿದ್ದಾಳೆ. ಈ ಸಂದರ್ಭದ ಪ್ರೋಮೋ ಗಮನ ಸೆಳೆದಿದೆ. ಇನ್ನುಮುಂದೆ ಸಿಹಿ vs ಭಾರ್ಗವಿ ಆಟವು ಮತ್ತಷ್ಟು ರೋಚಕತೆ ಪಡೆದುಕೊಳ್ಳುವ ಸೂಚನೆ ಸಿಕ್ಕಿದೆ.

ಇದನ್ನೂ ಓದಿ: ಸಿಹಿಯ ಆತ್ಮ ಹಿಡಿದುಕೊಂಡ ಅಘೋರಿ; ಪ್ರಯಾಗ್​ರಾಜ್​​ನಲ್ಲಿ ‘ಸೀತಾ ರಾಮ’ ತಂಡ 

ಪವರ್ ಸಿಕ್ಕಿದ್ದು ಹೇಗೆ?

ಈ ಮೊದಲು ರಾಮ, ಸೀತಾ ಹಾಗೂ ಸುಬ್ಬಿ ಕುಂಭ ಮೇಳಕ್ಕೆ ತೆರಳಿದ್ದರು. ಅಲ್ಲಿ ಸಿಕ್ಕ ಅಘೋರಿಯು ಆತ್ಮ ರೂಪದಲ್ಲಿರುವ ಸಿಹಿಗೆ ದಾರ ಒಂದನ್ನು ಕಟ್ಟಿದ್ದರು. ಹನುಮಾನ್ ಚಾಲೀಸ್ ಹೇಳಿ ಹನುಮಂತನ ಅನುಗ್ರಹ ಪಡೆದರೆ ಶಕ್ತಿ ಬರುತ್ತದೆ ಎಂದು ಹೇಳಿದ್ದನು. ಅಂತೆಯೇ ಸಿಹಿಯು ಸಾಕಷ್ಟು ಬಾರಿ ಹನುಮಾನ್ ಚಾಲಿಸ್ ಪಠಿಸಿದ್ದಳು. ಈ ಕಾರಣಕ್ಕೆ ದುಷ್ಟ ಶಕ್ತಿಗಳ ನಾಶಕ್ಕೆ ಹನುಮಂತನ ಅನುಗ್ರಹ ಸಿಹಿಯ ಆತ್ಮಕ್ಕೆ ಸಿಕ್ಕಿದೆ. ಇನ್ನು ಮುಂದೆ ಧಾರಾವಾಹಿ ಮತ್ತಷ್ಟು ತಿರುವುಗಳನ್ನು ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಮುಂದೆ ಧಾರಾವಾಹಿ ಯಾವ ರೀತಿಯಲ್ಲಿ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.