ಸ್ನೇಹಿತ್ ಗೌಡ ಮಾಡ್ತಿರೋ ಪಕ್ಷಪಾತವನ್ನು ನೀವು ಒಪ್ಪುತ್ತೀರಾ? ವೀಕೆಂಡ್​ನಲ್ಲಿ ಇರಲಿದೆ ವಿಶೇಷ ಕ್ಲಾಸ್?

|

Updated on: Dec 06, 2023 | 7:56 AM

ವಿನಯ್, ನಮ್ರತಾ ಹಾಗೂ ಮೈಕಲ್​ನ ಒಂದೇ ತಂಡದಲ್ಲಿ ಇಟ್ಟರು. ಇದು ಇಂಬ್ಯಾಲೆನ್ಸ್ ಆಗುತ್ತದೆ ಎಂದು ಸಂಗೀತಾ ಹೇಳಿದರೂ ಆ ಮಾತನ್ನು ಸ್ನೇಹಿತ್ ಕೇಳಲೇ ಇಲ್ಲ.‘ನನಗೆ ಅಧಿಕಾರ ಇದೆ’ ಎಂದು ಹಕ್ಕು ಚಲಾಯಿಸಿದರು.

ಸ್ನೇಹಿತ್ ಗೌಡ ಮಾಡ್ತಿರೋ ಪಕ್ಷಪಾತವನ್ನು ನೀವು ಒಪ್ಪುತ್ತೀರಾ? ವೀಕೆಂಡ್​ನಲ್ಲಿ ಇರಲಿದೆ ವಿಶೇಷ ಕ್ಲಾಸ್?
ಸ್ನೇಹಿತ್
Follow us on

ಸ್ನೇಹಿತ್ ಗೌಡ (Snehith Gowda) ಅವರು ಬಿಗ್ ಬಾಸ್​ನಲ್ಲಿ ಸದಾ ವಿನಯ್​ ಪರವಾಗಿ ಇರುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ವಾರ ಕ್ಯಾಪ್ಟನ್ ಆದ ಸ್ನೇಹಿತ್​ಗೆ ಒಂದು ಗೋಲ್ಡನ್ ಅವಕಾಶ ಸಿಕ್ಕಿತ್ತು. ಆದರೆ, ಇದನ್ನು ಅವರು ಕೈಚೆಲ್ಲಿದ್ದಾರೆ. ಇದಕ್ಕೆ ಅವರು ವೀಕೆಂಡ್​ನಲ್ಲಿ ಸಾಕಷ್ಟು ದಂಡ ತೆತ್ತಬೇಕಾಗಿ ಬರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಡಿಸೆಂಬರ್ 5ರಂದು ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರವಾದ ಎಪಿಸೋಡ್ ಸಾಕಷ್ಟು ಚರ್ಚೆ ಹುಟ್ಟುಹಾಕುತ್ತಿದೆ.

ಸ್ನೇಹಿತ್ ಗೌಡ ಅವರು ದೊಡ್ಮನೆಯಲ್ಲಿ ಈ ವಾರ ಕ್ಯಾಪ್ಟನ್ ಆಗಿದ್ದಾರೆ. ಅವರಿಗೆ ದ್ವಿಪಟ್ಟು ಅಧಿಕಾರವನ್ನು ಬಿಗ್ ಬಾಸ್ ನೀಡಿದ್ದಾರೆ. ಈ ಅಧಿಕಾರದ ಪ್ರಕಾರ ಈ ವಾರ ನಾಮಿನೇಷನ್ ಮಾಡುವ ಸಂಪೂರ್ಣ ಅಧಿಕಾರ ಸ್ನೇಹಿತ್​ಗೆ ಇತ್ತು. ಹೀಗಾಗಿ ಅವರು ತಮ್ಮ ತಂಡದವರನ್ನು ಸೇವ್ ಮಾಡಿದ್ದಾರೆ. ವಿನಯ್, ನಮ್ರತಾ ನಾಮಿನೇಷನ್​ನಿಂದ ಬಚಾವ್ ಆಗಿದ್ದಾರೆ.

ಈ ವಾರ ತಂಡ ಮಾಡುವ ಆಯ್ಕೆಯನ್ನು ಬಿಗ್ ಬಾಸ್ ಸ್ನೇಹಿತ್​​ಗೆ ನೀಡಿದ್ದರು. ಈ ವೇಳೆ ತಂಡ ಸಮಬಲ ಆಗಿರುವಂತೆ ನೋಡಿಕೊಳ್ಳಬೇಕು ಎಂದು ಬಿಗ್ ಬಾಸ್ ಆದೇಶ ನೀಡಿದ್ದರು. ಆದಾಗ್ಯೂ ಅವರು ತಮ್ಮ ಹಳೆಯ ಚಾಳಿಯನ್ನು ಮಂದುವರಿಸಿದರು. ವಿನಯ್, ನಮ್ರತಾ ಹಾಗೂ ಮೈಕಲ್​ನ ಒಂದೇ ತಂಡದಲ್ಲಿ ಇಟ್ಟರು. ಇದು ಇಂಬ್ಯಾಲೆನ್ಸ್ ಆಗುತ್ತದೆ ಎಂದು ಸಂಗೀತಾ ಹೇಳಿದರೂ ಆ ಮಾತನ್ನು ಸ್ನೇಹಿತ್ ಕೇಳಲೇ ಇಲ್ಲ.‘ನನಗೆ ಅಧಿಕಾರ ಇದೆ’ ಎಂದು ಹಕ್ಕು ಚಲಾಯಿಸಿದರು.

ಗೇಮ್ ಆಡುವ ಸಂದರ್ಭದಲ್ಲೂ ಸಂಗೀತಾ ವಿರುದ್ಧವೇ ಅವರು ಆದೇಶ ನೀಡುತ್ತಿದ್ದರು. ಇದು ಸಂಗೀತಾಗೆ ಬೇಸರ ಮೂಡಿಸಿದೆ. ‘ನೀವು ಪಕ್ಷಪಾತ್ರ ಮಾಡುತ್ತಿದ್ದೀರಿ’ ಎಂದು ಹೇಳುತ್ತಲೇ ಇದ್ದಾರೆ ಸಂಗೀತಾ. ‘ನೀನು ಯಾರಿಗೆ ಚೇಲಾ ಅನ್ನೋದು ಗೊತ್ತಿದೆ. ಹಿಂದಿನ ವಾರ ಯಾರು ಹೋಗಬೇಕಿತ್ತು ಅನ್ನೋದು ಗೊತ್ತಿದೆ’ ಎಂದಿದ್ದಾರೆ ಸಂಗೀತಾ.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ಸಂಪೂರ್ಣ ಸೈಲೆಂಟ್ ಆದ ಡ್ರೋನ್ ಪ್ರತಾಪ್; ಇದು ಸುದೀಪ್​ ಪಾಠದ ಎಫೆಕ್ಟ್​

ಈ ಮೊದಲು ಅನೇಕ ಬಾರಿ ಸ್ನೇಹಿತ್ ಗೌಡ ಅವರಿಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಆದಾಗ್ಯೂ ಅವರು ಬದಲಾಗಿಲ್ಲ. ಈ ವಾರ ಅವರಿಗೆ ಮತ್ತೆ ಕಿಚ್ಚನ ಪಾಠದ ಅಗತ್ಯವಿದೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ