Virender Sehwag: ಕೆಬಿಸಿಯಲ್ಲಿ ಭರ್ಜರಿ ಆಟವಾಡಿದ ವೀರು- ದಾದಾ; ಸೆಹ್ವಾಗ್- ಗಂಗೂಲಿಗೆ ₹ 25 ಲಕ್ಷ ಗೆದ್ದುಕೊಟ್ಟ ಪ್ರಶ್ನೆ ಇಲ್ಲಿದೆ

| Updated By: shivaprasad.hs

Updated on: Sep 04, 2021 | 12:00 PM

Sourav Ganguly: ಸೌರವ್ ಗಂಗೂಲಿ ಹಾಗೂ ವೀರೇಂದ್ರ ಸೆಹ್ವಾಗ್ ಕೆಬಿಸಿಯಲ್ಲಿ ಭರ್ಜರಿ ಆಟವಾಡಿ 25 ಲಕ್ಷ ರೂಗಳನ್ನು ಗೆದ್ದಿದ್ದಾರೆ. ಈರ್ವರೂ ದತ್ತಿಯ ಉದ್ದೇಶದಿಂದ ಹಣವನ್ನು ಬಳಸುತ್ತಿರುವುದು ವಿಶೇಷ.

Virender Sehwag: ಕೆಬಿಸಿಯಲ್ಲಿ ಭರ್ಜರಿ ಆಟವಾಡಿದ ವೀರು- ದಾದಾ; ಸೆಹ್ವಾಗ್- ಗಂಗೂಲಿಗೆ ₹ 25 ಲಕ್ಷ ಗೆದ್ದುಕೊಟ್ಟ ಪ್ರಶ್ನೆ ಇಲ್ಲಿದೆ
KBC 13ರಲ್ಲಿ ವೀರೇಂದ್ರ ಸೆಹ್ವಾಗ್, ಅಮಿತಾಭ್ ಬಚ್ಚನ್, ಸೌರವ್ ಗಂಗೂಲಿ
Follow us on

KBC 13: ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly) ಮತ್ತು ಭಾರತದ ಮಾಜಿ ಓಪನಿಂಗ್ ಬ್ಯಾಟ್ಸ್​ಮನ್ ವೀರೇಂದ್ರ ಸೆಹ್ವಾಗ್(Virender Sehwag) ಅವರು ಕೌನ್ ಬನೇಗಾ ಕರೋಡ್​ಪತಿ ಸೀಸನ್ 13ರ(KBC 13) ಮೊದಲ ಸೆಲೆಬ್ರಿಟಿ ಅತಿಥಿಗಳಾಗಿ ಭಾಗವಹಿಸಿದ್ದಾರೆ. ಈರ್ವರೂ ಭರ್ಜರಿಯಾಗಿ ಆಟವಾಡಿ ಚಾರಿಟಿಗಾಗಿ(ದತ್ತಿ) 25 ಲಕ್ಷ ರೂಗಳನ್ನು ಗೆದ್ದಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟಿಗರು ನಿರೂಪಕ ಅಮಿತಾಭ್ ಬಚ್ಚನ್(Amitabh Bachchan) ಅವರೊಂದಿಗೆ ಅನೇಕ ಸಂತಸದ ಪ್ರಸಂಗಗಳನ್ನು ಹಂಚಿಕೊಂಡರು ಮತ್ತು ವೀರೇಂದ್ರ ಸೆಹ್ವಾಗ್ ಕೆಲವು ಹಾಡುಗಳನ್ನೂ ಹಾಡಿದರು.

ಕರೋಡ್​ಪತಿ ಕಾರ್ಯಕ್ರಮದ ಬಂಗಾಳಿ ಅವತರಣಿಕೆಯನ್ನು ನಡೆಸಿಕೊಟ್ಟ ಅನುಭವವಿರುವ ಸೌರವ್, ಇಲ್ಲೂ ಕೆಲ ಕಾಲ  ಅಮಿತಾಭ್ ಸ್ಥಾನದಲ್ಲಿ ಕುಳಿತಿದ್ದರು. ಆ ಸಂದರ್ಭದಲ್ಲಿ ಅಮಿತಾಭ್ ‘ಪ್ರಶ್ನೆ ಕೇಳುವಾಗ ನನ್ನ ಮೇಲೆ ಕರುಣೆಯಿರಲಿ’ ಎಂದಿದ್ದು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತ್ತು. ವೀರೇಂದ್ರ ಸೆಹ್ವಾಗ್ ಹಾಗೂ ಗಂಗೂಲಿ ಹಾಸ್ಯ ಚಟಾಕಿಗಳ ಮೂಲಕ ಪರಸ್ಪರ ಕಾಲೆಳೆದುಕೊಂಡು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದರು.

ಸೌರವ್ ಗಂಗೂಲಿ ಮತ್ತು ವೀರೇಂದ್ರ ಸೆಹ್ವಾಗ್ ಸ್ಪರ್ಧೆಯಲ್ಲಿ 25 ಲಕ್ಷ ರೂ ಗೆದ್ದರು. ಅವರು 50 ಲಕ್ಷದ ಪ್ರಶ್ನೆಗೆ ತಯಾರಾದಾಗ ಸಮಯ ಮುಗಿದು, ಆಟ ಅಂತ್ಯವಾಯಿತು. 25 ಲಕ್ಷ ಗೆದ್ದ ಅವರ ಪ್ರಶ್ನೆ ಇದಾಗಿತ್ತು. ‘1942 ರಲ್ಲಿ ಪ್ರಾರಂಭವಾದ ನೇತಾಜಿ ಸುಭಾಷ್ ಚಂದ್ರ ಬೋಸ್ ನೇತೃತ್ವದ ಆಜಾದ್ ಹಿಂದ್ ರೇಡಿಯೋ, ಯಾವ ದೇಶದಲ್ಲಿ ಸೇವೆ ಆರಂಭಿಸಿತು?’. ವೀರು ಹಾಗೂ ದಾದಾ ಮುಂದೆ ಜಪಾನ್, ಜರ್ಮನಿ, ಸಿಂಗಾಪುರ್ ಮತ್ತು ಬರ್ಮಾ ಎಂಬ ನಾಲ್ಕು ಆಯ್ಕೆಗಳಿದ್ದವು. ಸರಿಯಾದ ಉತ್ತರ ಜರ್ಮನಿಯಾಗಿತ್ತು. ಅದನ್ನು ಉತ್ತರಿಸಿದ ಕಾರಣದಿಂದ ಕ್ರಿಕೆಟಿಗರು ಹಣವನ್ನು ತಮ್ಮದಾಗಿಸಿಕೊಂಡರು. ತಮಗೆ ಸಂಬಂದಪಟ್ಟ ಚಾರಿಟಿ ಟ್ರಸ್ಟ್​ಗಳಿಗೆ ಹಣವನ್ನು ನೀಡುವುದಾಗಿ ಈಗಾಗಲೇ ಕ್ರಿಕೆಟಿಗರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಹಲವು ಅಚ್ಚರಿಯ ಸಂಗತಿಗಳನ್ನು ದಿಗ್ಗಜರು ಪರಸ್ಪರ ಹಂಚಿಕೊಂಡರು. ಸೆಹ್ವಾಗ್​ ಕ್ರಿಕೆಟ್​ ಮೈದಾನದಲ್ಲಿ ಬಾಲಿವುಡ್​ ಹಾಡುಗಳನ್ನು ಗುನುಗುತ್ತಿದ್ದರಂತೆ! ಆ ಬಗ್ಗೆ ಅಮಿತಾಭ್​ ವಿಚಾರಿಸಿದಾಗ ಹಲವು ಫನ್ನಿ ಸಂಗತಿಗಳನ್ನು ಸೆಹ್ವಾಗ್​ ವಿವರಿಸಿದರು. ಯಾವ ಯಾವ ಸಂದರ್ಭಕ್ಕೆ ಯಾವ ಯಾವ ಹಾಡು ಮತ್ತು ಡೈಲಾಗ್​ ಸೂಕ್ತ ಆಗುತ್ತದೆ ಎಂದು ಅವರು ಅಣಕ ಮಾಡಿ ತೋರಿಸಿದರು.

ಇದನ್ನೂ ಓದಿ:

Ananth Nag Birthday: 74ನೇ ವಸಂತಕ್ಕೆ ಕಾಲಿಟ್ಟ ಕನ್ನಡ ಚಿತ್ರರಂಗದ ಎವರ್ ಗ್ರೀನ್ ಹೀರೋ ಅನಂತ್ ನಾಗ್

ಚಿರು ಫೋಟೋ ನೋಡಿದರೆ ಅಳು ನಿಲ್ಲಿಸ್ತಾನೆ ಮೇಘನಾ​ ಪುತ್ರ ರಾಯನ್​ ರಾಜ್​ ಸರ್ಜಾ

(Sourav Ganguly and Virender Sehwag won 25 L in KBC see the question)

Published On - 11:53 am, Sat, 4 September 21