ಸುಧಾರಾಣಿ ಬಿಗ್ ಬಾಸ್​ಗೆ ಬರ್ತಾರೆ ಎಂದ ಟ್ರೋಲ್​ ಪೇಜ್​ಗಳಿಗೆ ಮೀಮ್​ ಸ್ಟೈಲ್​ನಲ್ಲಿ ಉತ್ತರಿಸಿದ ನಟಿ

Bigg Boss 12 Contestants List: ಸುಧಾರಾಣಿ ಅವರು ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ವೈರಲ್ ವಿಡಿಯೋದಲ್ಲಿ ಅವರು ಮೀಮ್‌ಗಳನ್ನು ಹಂಚಿಕೊಂಡು ತಮ್ಮ ನಿರ್ಧಾರವನ್ನು ಖಚಿತಪಡಿಸಿದ್ದಾರೆ. ಈ ಸೀಸನ್‌ನಲ್ಲಿ ಇತರ ಅನೇಕ ಸೆಲೆಬ್ರಿಟಿಗಳ ಹೆಸರುಗಳು ಚರ್ಚೆಯಲ್ಲಿದೆ.

ಸುಧಾರಾಣಿ ಬಿಗ್ ಬಾಸ್​ಗೆ ಬರ್ತಾರೆ ಎಂದ ಟ್ರೋಲ್​ ಪೇಜ್​ಗಳಿಗೆ ಮೀಮ್​ ಸ್ಟೈಲ್​ನಲ್ಲಿ ಉತ್ತರಿಸಿದ ನಟಿ
ಸುದೀಪ್-ಸುಧಾರಾಣಿ

Updated on: Sep 10, 2025 | 7:01 AM

ಬಿಗ್ ಬಾಸ್ ಪ್ರತಿ ಸೀಸನ್ ಆರಂಭಕ್ಕೂ ಮೊದಲು ಒಂದಷ್ಟು ಹೆಸರುಗಳು ಓಡಾಡುತ್ತವೆ. ಅವರು ಬರ್ತಾರಂತೆ, ಇವರು ಬರ್ತಾರಂತೆ ಎಂದೆಲ್ಲ ಸುದ್ದಿ ಹರಿದಾಡುತ್ತವೆ. ಮೊದಲೆಲ್ಲ 10 ಹೆಸರು ವೈರಲ್ ಆದರೆ, ಅದರಲ್ಲಿ ಕನಿಷ್ಠ ಐದು ಜನರಾದರೂ ದೊಡ್ಮನೆಗೆ ಬರುತ್ತಿದ್ದರು. ಆದರೆ, ಇದು ಸೋಶಿಯುಲ್ ಮೀಡಿಯಾ ಕಾಲ. ಈ ವೇಳೆ ಯಾರ್ಯಾರೋ ಹೆಸರು ಹರಿದಾಡುತ್ತದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ವೇಳೆ ಅನೇಕ ಸೆಲೆಬ್ರಿಟಿಗಳ ಹೆಸರು ಹರಿದಾಡಿದೆ. ಇದರಲ್ಲಿ ಹಿರಿಯ ನಟಿ ಸುಧಾರಾಣಿ (Sudharani) ಹೆಸರು ಕೂಡ ಇದೆ. ಆದರೆ, ಅವರು ಇದನ್ನು ಅಲ್ಲಗಳೆದಿದ್ದಾರೆ. ಅದೂ ತಮ್ಮದೇ ಸ್ಟೈಲ್​​ನಲ್ಲಿ.

ಸುಧಾರಾಣಿ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಅವರು ನಟಿಯಾಗಿ, ಪೋಷಕ ಪಾತ್ರಗಳ ಮೂಲಕ ಜನಮನ ಗೆದ್ದಿದ್ದಾರೆ. ಈಗ ಅವರು ಕಿರುತೆರೆಯಲ್ಲೂ ಬ್ಯುಸಿ ಆಗಿದ್ದಾರೆ. ಅವರು ‘ಶ್ರೀರಸ್ತು ಶುಭಮಸ್ತು’ ಹೆಸರಿನ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಈ ಧಾರಾವಾಹಿ ಇತ್ತೀಚೆಗೆ ಪೂರ್ಣಗೊಂಡಿದೆ. ಹೀಗಾಗಿ, ಸುಧಾರಾಣಿ ಹೆಸರು ಕೂಡ ಸಂಭಾವ್ಯ ಪಟ್ಟಿಯಲ್ಲಿ ಸೇರಿಕೊಂಡಿತ್ತು.

ಇದನ್ನೂ ಓದಿ
ಅತ್ತೆಯ ಒತ್ತಾಯಕ್ಕೆ ಲಿವ್-ಇನ್ ರಿಲೇಶನ್​ಶಿಪ್​ನಲ್ಲಿ ಇದ್ದ ಅಕ್ಷಯ್ ಕುಮಾರ್
‘ಅದು ನಾನು ಜೀವನದಲ್ಲಿ ತೆಗೆದುಕೊಂಡ ಕೆಟ್ಟ ನಿರ್ಧಾರ’; ಮರುಗಿದ ಚಂದನ್
‘ಸು ಫ್ರಮ್ ಸೋ’ ಒಟಿಟಿ ದಿನಾಂಕ ರಿವೀಲ್; 45ನೇ ದಿನವೂ ಅಬ್ಬರದ ಕಲೆಕ್ಷನ್
ಸೂರ್ಯವಂಶಿ ನಟ ನಿಧನ; ವಾಯು ಪಡೆಯಲ್ಲಿ ಸೇವೆ ಸಲ್ಲಿಸಿ ಚಿತ್ರರಂಗಕ್ಕೆ ಎಂಟ್ರಿ

ಇದನ್ನೂ ಓದಿ: ಸುಧಾರಾಣಿಗೆ ‘ಹಾಲುಂಡ ತವರು’ ಚಿತ್ರದಲ್ಲಿ ನಟಿಸುವ ಅವಕಾಶ ಮಿಸ್ ಆಗಿದ್ದು ಹೇಗೆ?

ಈ ಬಗ್ಗೆ ಸುಧಾರಾಣಿ ಅವರು ಸ್ಪಷ್ಟನೆ ನೀಡಿದ್ದಾರೆ. ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಮೀಮ್ ಪೇಜ್​ಗಳ ಪೋಸ್ಟ್​​ಗಳ ಸ್ಕ್ರಿನ್ ಶಾಟ್ ಹಾಕಿದ್ದಾರೆ. ಕೊನೆಗೆ ತಮ್ಮದೇ ಸಿನಿಮಾದ ‘ಯಾರ್ ಹೇಳಿದ್ದು’ ಎಂಬ ಡೈಲಾಗ್ ಹಾಕಿದ್ದಾರೆ. ಈ ಮೂಲಕ ತಾವು ಹೋಗೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.

ಸುಧಾರಾಣಿ ಪೋಸ್ಟ್

ಸುಧಾರಾಣಿ ಅವರು ತಮ್ಮ ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಅಮೂಲ್ಯ ಸಮಯವನ್ನು ಕುಟುಂಬದ ಜೊತೆಗೇ ಕಳೆಯಬೇಕು ಎಂಬುದು ಅವರ ಆಲೋಚನೆ. ಹೀಗಾಗಿ, ಸುಧಾರಾಣಿ ಅವರು ಬಿಗ್ ಬಾಸ್​ಗೆ ಬರೋದು ಅನುಮಾನ ಎಂದೇ ಹೇಳಲಾಗುತ್ತಿದೆ. ಉಳಿದಂತೆ ಶ್ವೇತಾ ಪ್ರಸಾದ್ ಮೊದಲಾದವರ ಹೆಸರು ಚಾಲ್ತಿಯಲ್ಲಿ ಇದೆ. ಸೆಪ್ಟೆಂಬರ್ 28ರ ಬಿಗ್ ಬಾಸ್ ಓಪನಿಂಗ್ ಎಪಿಸೋಡ್​ನಲ್ಲಿ ಇದಕ್ಕೆ ಸ್ಪಷ್ಟನೆ ಸಿಗಲಿದೆ. ಕಿಚ್ಚ ಸುದೀಪ್ ಅವರೇ ಈ ಸೀಸನ್​ನ ನಿರೂಪಣೆ ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 7:00 am, Wed, 10 September 25