ಶಿವಣ್ಣಗೆ ಪ್ರೀತಿಯ ಅಪ್ಪುಗೆ ಕೊಟ್ಟ ಸುಧಾರಾಣಿ; ಸಾವು ಗೆದ್ದು ಬಂದಿದ್ದಕ್ಕೆ ಭವ್ಯ ಸ್ವಾಗತ

| Updated By: Ganapathi Sharma

Updated on: Feb 04, 2025 | 3:10 PM

ಶಿವರಾಜ್ ಕುಮಾರ್ ಅವರು ಮೂತ್ರಕೋಶದ ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ನಂತರ ಜೀ ಕನ್ನಡದ ಸರಿಗಮಪ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಸುಧಾರಾಣಿ ಅವರೊಂದಿಗೆ ಅವರ ಭಾವುಕ ಭೇಟಿಯು ಪ್ರೋಮೋದಲ್ಲಿ ಗಮನ ಸೆಳೆದಿದೆ. ಅವರ ಅಪಾರ ಅಭಿಮಾನಿಗಳು ಮತ್ತು ಸಹ ಕಲಾವಿದರ ಪ್ರೀತಿಯನ್ನು ಈ ಪ್ರೋಮೋ ಸ್ಪಷ್ಟವಾಗಿ ತೋರಿಸುತ್ತದೆ.

ಶಿವಣ್ಣಗೆ ಪ್ರೀತಿಯ ಅಪ್ಪುಗೆ ಕೊಟ್ಟ ಸುಧಾರಾಣಿ; ಸಾವು ಗೆದ್ದು ಬಂದಿದ್ದಕ್ಕೆ ಭವ್ಯ ಸ್ವಾಗತ
ಸುಧಾರಾಣಿ -ಶಿವಣ್ಣ
Follow us on

ಶಿವರಾಜ್​ಕುಮಾರ್ ಹಾಗೂ ಸುಧಾರಾಣಿ ಕನ್ನಡ ಚಿತ್ರರಂಗದ ಸೂಪರ್ ಹಿಟ್ ಜೋಡಿಗಳಲ್ಲಿ ಒಂದು. ಮತ್ತೊಂದು ವಿಶೇಷ ಎಂದರೆ ಸುಧಾರಾಣಿ ಅವರು ರಾಜ್​ಕುಮಾರ್ ಕುಟುಂಬದ ಜೊತೆ ವಿಶೇಷ ಬಾಂಧವ್ಯ ಹೊಂದಿದ್ದಾರೆ. ರಾಜ್​ಕುಮಾರ್ ಅವರಿಂದ ಹಿಡಿದು, ಯುವ ಅವರ ಜೊತೆ ಸುಧಾರಾಣಿ ತೆರೆ ಹಂಚಿಕೊಂಡು ಗಮನ ಸೆಳೆದಿದ್ದಾರೆ. ಈ ಮೂಲಕ ಅಪರೂಪದ ಸಾಧನೆ ಮಾಡಿದ್ದರು. ಶಿವರಾಜ್​ಕುಮಾರ್ ಅವರು ಸಾವು ಗೆದ್ದು ಬಂದಿದ್ದು ಅವರಿಗೆ ಸುಧಾರಾಣೀ ಭವ್ಯ ಸ್ವಾಗತ ಕೋರಿದ್ದಾರೆ.

ಜೀ ಕನ್ನಡದಲ್ಲಿ ಹೊಸ ಪ್ರೋಮೋ ಒಂದನ್ನು ಹಂಚಿಕೊಳ್ಳಲಾಗಿದೆ. ಈ ಪ್ರೋಮೋದಲ್ಲಿ ಶಿವರಾಜ್​ಕುಮಾರ್ ಅವರು ‘ಸರಿಗಮಪ’ ವೇದಿಕೆ ಮೇಲೆ ಬಂದಿರೋದು ಇದೆ. ಈ ಪ್ರೋಮೋಗೆ ‘ಅದೇ ಸ್ಪೂರ್ತಿ, ಅದೇ ಹುರುಪು, ಚೈತನ್ಯದ ಚಿಲುಮೆಯಾಗಿ ಬಂದ ಎನರ್ಜಿ ಮಾಸ್ಟರ್ ಶಿವಣ್ಣ ಅವರಿಗೆ ಅಭಿಮಾನದ ಸ್ವಾಗತ’ ಎಂದು ಕ್ಯಾಪ್ಶನ್ ಕೊಡಲಾಗಿದೆ. ಈ ಪ್ರೋಮೋ ಗಮನ ಸೆಳೆದಿದೆ.

ಶಿವರಾಜ್​ಕುಮಾರ್ ಅವರಿಗೆ ಇತ್ತೀಚೆಗೆ ಮೂತ್ರಕೋಶದ ಕ್ಯಾನ್ಸರ್ ಉಂಟಾಗಿತ್ತು. ಈ ಕ್ಯಾನ್ಸರ್​ನ ಗೆದ್ದು ಅವರು ಬಂದಿದ್ದಾರೆ. ಇದಕ್ಕಾಗಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ. ಅವರು ಅಮೆರಿಕಕ್ಕೆ ತೆರಳಿ ಆಪರೇಷನ್ ಮಾಡಿಸಿಕೊಂಡಿದ್ದು, ಈಗ ಕ್ಯಾನ್ಸರ್ ಮುಕ್ತರಾಗಿದ್ದಾರೆ. ಅವರು ಭಾರತಕ್ಕೆ ಬರುತ್ತಿದ್ದಂತೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅವರು ಜೀ ಕನ್ನಡದ ಸರಿಗಮಪ ವೇದಿಕೆ ಬಂದಿದ್ದಾರೆ.

ಸರಿಗಮಪ ವೇದಿಕೆಗೆ ಶಿವಣ್ಣ ಬರುತ್ತಿದ್ದಂತೆ ತಾರಾ, ಶ್ರುತಿ, ಅರ್ಜುನ್ ಜನ್ಯ ಖುಷಿಪಟ್ಟರು. ಎಲ್ಲರೂ ಬಂದು ಶಿವರಾಜ್​ಕುಮಾರ್ ಅವರಿಗೆ ಹಗ್ ಕೊಟ್ಟರು. ಅದರಲ್ಲೂ ಸುಧಾರಾಣಿ ಅವರಿಗೆ ಭರ್ಜರಿ ಖುಷಿ ಆಯಿತು. ಅವರು ಬಂದು ಪ್ರೀತಿಯಿಂದ ಹಗ್ ಕೊಟ್ಟರು. ಶಿವರಾಜ್​ಕುಮಾರ್​ಗೆ ಪ್ರೀತಿಯಿಂದ ಮುತ್ತನ್ನು ಕೂಡ ಕೊಟ್ಟರು.

ಇದನ್ನೂ ಓದಿ: 29 ವರ್ಷಗಳ ಬಳಿಕ ಯಾಣಗೆ ಭೇಟಿ ನೀಡಿದ ಶಿವರಾಜ್​ಕುಮಾರ್​; ಇಲ್ಲಿವೆ ಫೋಟೋಸ್

ಶಿವರಾಜ್​ಕುಮಾರ್ ಅವರ ಎನರ್ಜಿಗೆ ಅವರೇ ಸಾಟಿ. ಅವರು ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸಿದ್ದಾರೆ. ಈಗ ಕ್ಯಾನ್ಸರ್ ಬಂದ ಕಾರಣ ಅವರು ಬ್ರೇಕ್ ಪಡೆಯಬೇಕಾಯಿತು. ಈಗ ಅವರು ಕೆಲ ತಿಂಗಳು ಮನೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ. ಆ ಬಳಿಕ ಸಿನಿಮಾ ಕೆಲಸಗಳನ್ನು ಒಪ್ಪಿಕೊಂಡು ನಟಿಸಲಿದ್ದಾರೆ. ಶಿವರಾಜ್​ಕುಮಾರ್ ಅವರಿಗೆ ಜೀ ಕನ್ನಡದ ಜೊತೆ ಒಳ್ಳೆಯ ಒಡನಾಟ ಇದೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋಗೆ ಅವರೇ ಜಡ್ಜ್ ಆಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:12 am, Mon, 3 February 25