‘ಸನ್‌ ಉದಯ’ ವಾಹಿನಿಯಲ್ಲಿ ಮಾರ್ಚ್‌ 23ರಿಂದ ಹೊಸ ಧಾರಾವಾಹಿ ‘ಮೂಗುತಿ ಮಲ್ಲಿ’

‘ಉದಯ’ ಟಿವಿ ಈಗ ‘ಸನ್ ಉದಯ’ ಆಗಿದೆ. ಹೆಸರು ಮಾತ್ರವಲ್ಲದೇ ಸಾಕಷ್ಟು ವಿಷಯಗಳು ಬದಲಾಗಿವೆ. ಹೊಸ ಹೊಸ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಬರುತ್ತಿದ್ದಾರೆ ಎಂದು ಈ ವಾಹಿನಿ ತಿಳಿಸಿದೆ. ಅದರ ಮೊದಲ ಹೆಜ್ಜೆ ಎಂಬಂತೆ ಮಾ.23ಕ್ಕೆ ಹೊಸ ಸೀರಿಯಲ್ ‘ಮೂಗುತಿ ಮಲ್ಲಿ’ ಪ್ರಸಾರ ಆರಂಭ ಆಗಲಿದೆ.

‘ಸನ್‌ ಉದಯ’ ವಾಹಿನಿಯಲ್ಲಿ ಮಾರ್ಚ್‌ 23ರಿಂದ ಹೊಸ ಧಾರಾವಾಹಿ ‘ಮೂಗುತಿ ಮಲ್ಲಿ’
Muguthi Malli Serial Cast

Updated on: Mar 20, 2026 | 3:59 PM

ಪ್ರೇಕ್ಷಕರ ನೆಚ್ಚಿನ ‘ಉದಯ’ ಟಿವಿ ಈಗ ‘ಸನ್ ಉದಯ’ (Sun Udaya) ಎಂಬ ಹೊಸ ಹೆಸರಿನೊಂದಿಗೆ ಪ್ರೇಕ್ಷಕರನ್ನು ರಂಜಿಸುತ್ತಿದೆ. ಯುಗಾದಿ ಹಬ್ಬ ಎಂದರೆ ಹೊಸ ವರ್ಷದ ಆರಂಭ. ಉದಯ ಟಿವಿಯು ಯುಗಾದಿಯ ದಿನವೇ ‘ಸನ್ ಉದಯ’ವಾಗಿ ಬದಲಾಗಿದೆ. ಕಳೆದ ಮೂರು ದಶಕಗಳಿಂದ ಕನ್ನಡಿಗರನ್ನು ರಂಜಿಸುತ್ತಿರುವ ಈ ವಾಹಿನಿಯಲ್ಲಿ ಈಗ ಸಾಕಷ್ಟು ಹೊಸತನವನ್ನು ಪರಿಚಯಿಸಲಾಗುತ್ತಿದೆ. ಅದರ ಮೊದಲ ಹಂತವಾಗಿ ಸೋಮವಾರದಿಂದ (ಮಾರ್ಚ್‌ 23) ಹೊಸ ಸೀರಿಯಲ್ ‘ಮೂಗುತಿ ಮಲ್ಲಿ’ (Muguthi Malli) ಪ್ರಸಾರ ಆರಂಭ ಆಗುತ್ತಿದೆ.

ಹೌದು, ಮಾರ್ಚ್‌ 23ರಿಂದ ಸೋಮವಾರದಿಂದ ಶನಿವಾರ ರಾತ್ರಿ 8 ಗಂಟೆಗೆ ‘ಮೂಗುತಿ ಮಲ್ಲಿ’ ಸೀರಿಯಲ್ ಬರಲಿದೆ. ಇದೊಂದು ಲವ್‌ ಸ್ಟೋರಿ ಹೊಂದಿರುವ ಧಾರಾವಾಹಿ. ಶ್ರೀಮಂತರು ಎಂದರೆ ದೂರ ಓಡಿ ಹೋಗುವ ಹುಡುಗಿಯ ಕಥೆ ಇದು. ಕಷ್ಟದಲ್ಲಿ ಬೆಳೆದ ಮಲ್ಲಿ ಎಂಬ ಹುಡುಗಿ ಚೂಟಿ, ಘಾಟಿ ಮತ್ತು ಸ್ವಾಭಿಮಾನಿ. ಆಕೆಯ ಮೇಲೆ ಶ್ರೀಮಂತ ಹುಡುಗನಿಗೆ ಲವ್ ಆದರೆ? ಅದೇ ಈ ಧಾರಾವಾಹಿಯ ಕಹಾನಿ.

ಮಲ್ಲಿಯ ಅಣ್ಣ ಉಂಡಾಡಿ ಗುಂಡ ಆದ್ದರಿಂದ ಮನೆ ಹೊಣೆಗಾರಿಕೆ ಆಕೆ ಹೆಗಲ ಮೇಲಿದೆ. ಅಪ್ಪನಿಂದ ಬಳುವಳಿಯಾಗಿ ಬಂದ ಅಡುಗೆ ಕೆಲಸವೇ ಈಕೆಯ ಕೈಹಿಡಿದಿದೆ. ಮನೆ ಮನೆಗೆ ಹೋಗಿ ಅಡುಗೆ ಮಾಡುವ ಮಲ್ಲಿಯ ಕೈಯಲ್ಲಿ ಅದೇನೋ ಜಾದೂ ಇದೆ. ಹಸಿದವರಿಗೆ ಮಾತ್ರ ಅನ್ನದ ಬೆಲೆ ಗೊತ್ತಿರೋದು ಎಂಬುದು ಅವಳ ನಂಬಿಕೆ. ಆದರೆ ಬಡವರನ್ನು ಕಣ್ಣೆತ್ತೆಯೂ ನೋಡದ ಶ್ರೀಮಂತ ಕುಟುಂಬದ ವಿರಾಜ್​​ಗೆ ಮಲ್ಲಿ ಮೇಲೆ ಪ್ರೀತಿ ಚಿಗುರುತ್ತದೆ.

ಮಸಾಲೆ ಕಂಪನಿ ನಡೆಸುವ, ಹಸಿವನ್ನೇ ಕಂಡಿದರ ಕುಟುಂಬದ ಹುಡುಗನೇ ಕಥಾನಾಯಕ ವಿರಾಜ್. ಮಲ್ಲಿಯನ್ನು ನೋಡಿದ ತಕ್ಷಣ ಅವನಿಗೆ ಪ್ರೀತಿ ಹುಟ್ಟುತ್ತದೆ. ಆದರೆ ಆಕೆಗೆ ಶ್ರೀಮಂತರನ್ನು ಕಂಡರೆ ಆಗುವುದಿಲ್ಲ. ಹೀಗಿರುವಾಗ ಮಲ್ಲಿ ಮತ್ತು ವಿರಾಜ್‌ ಲವ್‌ ಸ್ಟೋರಿ ಎತ್ತ ಸಾಗುತ್ತದೆ ಎಂಬುದನ್ನು ತಿಳಿಯಲು ಮಾರ್ಚ್ 23ರಿಂದ ರಾತ್ರಿ 8 ಗಂಟೆಗೆ ‘ಮೂಗುತಿ ಮಲ್ಲಿ’ ಸೀರಿಯಲ್ ನೋಡಬೇಕು.

ಇದನ್ನೂ ಓದಿ: 50 ದಿನ ಪೂರೈಸಿದ ಖುಷಿಯಲ್ಲಿ ‘ಭಾರತಿ ಟೀಚರ್ 7ನೇ ತರಗತಿ’ ಸಿನಿಮಾ ತಂಡ

‘ಕೋಟಿ’ ಸಿನಿಮಾದಲ್ಲಿ ಡಾಲಿ ಧನಂಜಯ ತಂಗಿಯಾಗಿ ಅಭಿನಯಿಸಿದ್ದ ತನುಜಾ ವೆಂಕಟೇಶ್‌ ಅವರು ‘ಮೂಗುತಿ ಮಲ್ಲಿ’ ಧಾರಾವಾಹಿಗೆ ನಾಯಕಿ ಆಗಿದ್ದಾರೆ. ‘ಅಂತರಪಟ’ ಖ್ಯಾತಿಯ ಚಂದನ್‌ ಗೌಡ ಅವರು ಹೀರೋ ಆಗಿದ್ದಾರೆ. ಹಿರಿಯ ನಟಿ ಅಂಬಿಕಾ, ತೆಲುಗು ಬಿಗ್‌ಬಾಸ್‌ ಖ್ಯಾತಿಯ ಕನ್ನಡದ ನಟಿ ಕೀರ್ತಿ ಭಟ್‌, ಆರ್ಯ, ವೀಣಾ ಪೊನ್ನಪ್ಪ, ಮರೀನಾ, ಪುನೀತ್‌ ಮುಂತಾದವರು ಈ ಧಾರಾವಾಹಿಯ ಪಾತ್ರವರ್ಗದಲ್ಲಿ ಇದ್ದಾರೆ. ಆರವ್‌ ಕಾರ್ತಿಕ್‌ ಅವರು ನಿರ್ದೇಶನ ಮಾಡುತ್ತಿದ್ದಾರೆ. ಪುನೀತ್‌ ಛಾಯಾಗ್ರಹಣ ಮಾಡುತ್ತಿದ್ದಾರೆ. ಅಜಯ್‌ ರವಿ ಅವರು ಈ ಧಾರಾವಾಹಿ ನಿರ್ಮಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us