ನಾಮಿನೇಷನ್ ವೇಳೆ ಪ್ರಶಾಂತ್, ತಾಂಡವ್ ರಾಮ್ ಸ್ನೇಹದ ಮುಖವಾಡ ಬಯಲು

ತಾಂಡವ್ ರಾಮ್, ಜಗದೀಶ್, ಸೋನಿಕಾ, ಗಾನವಿ, ಕಾವ್ಯಾ, ಆಸಿಯಾ ಅವರು ಈ ವಾರ ನಾಮಿನೇಟ್ ಆಗಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ವೇಳೆ ಪ್ರಶಾಂತ್ ಅವರು ಸ್ನೇಹವನ್ನು ಬದಿಗಿಟ್ಟು ತಾಂಡವ್ ರಾಮ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಪ್ರಶಾಂತ್ ಅವರು ಸ್ನೇಹವನ್ನು ಬಿಟ್ಟುಕೊಟ್ಟಿದ್ದಕ್ಕೆ ತಾಂಡವ್ ಬೇಸರ ಮಾಡಿಕೊಂಡಿದ್ದಾರೆ.

ನಾಮಿನೇಷನ್ ವೇಳೆ ಪ್ರಶಾಂತ್, ತಾಂಡವ್ ರಾಮ್ ಸ್ನೇಹದ ಮುಖವಾಡ ಬಯಲು
Prashanth, Thandav Ram
Image Credit source: Colors Kannada

Updated on: Oct 12, 2026 | 10:44 PM

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಪೈಪೋಟಿ ಜಾಸ್ತಿ ಆಗಿದೆ. ಒಂದಷ್ಟು ಮಂದಿ ಎಲಿಮಿನೇಟ್ ಆಗಿದ್ದರೆ, ಹೊಸ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಕೂಡ ದೊಡ್ಮನೆ ಒಳಗೆ ಬಂದಿದ್ದಾರೆ. ಈ ವಾರ ಯಾರು ಎಲಿಮಿನೇಟ್ ಆಗಬೇಕು ಎಂಬುದನ್ನು ತೀರ್ಮಾನಿಸಲು ನಾಮಿನೇಷನ್ ಮಾಡಲಾಗಿದೆ. ಈ ವೇಳೆ ಸ್ಪರ್ಧಿಗಳ ನಡುವಿನ ಬಣ್ಣ ಬಯಲಾಗಿದೆ. ಪ್ರಶಾಂತ್ ಮತ್ತು ತಾಂಡವ್ ರಾಮ್ ಅವರ ಸ್ನೇಹದ ಮುಖವಾಡ ಕಳಚಿ ಬಿದ್ದಿದೆ.

ದಸರಾ ಹಬ್ಬದ ಪ್ರಯುಕ್ತ ವಿಶೇಷ ರೀತಿಯಲ್ಲಿ ನಾಮಿನೇಷನ್ ಮಾಡಲಾಯಿತು. ಯಾರು, ಯಾರನ್ನು ನಾಮಿನೇಟ್ ಮಾಡಬೇಕಾಗುತ್ತದೆ ಎಂಬುದು ಮೊದಲೇ ಗೊತ್ತಾಗದ ರೀತಿಯಲ್ಲಿ ಈ ಚಟುವಟಿಕೆಯನ್ನು ನೀಡಲಾಗಿತ್ತು. ಅನಿರೀಕ್ಷಿತ ಸಂದರ್ಭದಲ್ಲಿ ಪ್ರಶಾಂತ್ ಅವರು ತಾಂಡವ್ ರಾಮ್ ಅವರನ್ನು ನಾಮಿನೇಟ್ ಮಾಡಬೇಕಾಯಿತು. ಅದರಿಂದಾಗಿ ತಾಂಡವ್ ಬೇಸರ ಮಾಡಿಕೊಂಡರು.

ತಾಂಡವ್ ರಾಮ್ ಅವರನ್ನು ಹೊರತುಪಡಿಸಿ ಸೋನಿಕಾ ಅವರನ್ನು ನಾಮಿನೇಟ್ ಮಾಡುವ ಆಯ್ಕೆ ಕೂಡ ಪ್ರಶಾಂತ್ ಅವರ ಎದುರಿಗೆ ಇತ್ತು. ಆದರೆ ಸೋನಿಕಾ ಬದಲಿಗೆ ತಾಂಡವ್ ಅವರನ್ನೇ ಪ್ರಶಾಂತ್ ನಾಮಿನೇಟ್ ಮಾಡಿದರು. ನಾಮಿನೇಷನ್ ಪ್ರಕ್ರಿಯೆ ಮುಗಿದ ಬಳಿಕ ಅವರಿಬ್ಬರು ಈ ಬಗ್ಗೆ ಚರ್ಚೆ ಮಾಡಿದರು. ಸೋನಿಕಾ ಸಲುವಾಗಿ ತಮ್ಮ ಸ್ನೇಹವನ್ನು ಪ್ರಶಾಂತ್ ಬಿಟ್ಟುಕೊಟ್ಟಿದ್ದಕ್ಕಾಗಿ ತಾಂಡವ್ ಅವರು ಬೇಸರ ವ್ಯಕ್ತಪಡಿಸಿದರು.

ಬಿಗ್ ಬಾಸ್ ಶೋಗೆ ಬರುವುದಕ್ಕೂ ಮೊದಲೇ ತಾಂಡವ್ ರಾಮ್ ಮತ್ತು ಪ್ರಶಾಂತ್ ಅವರು ಸ್ನೇಹಿತರಾಗಿದ್ದರು. ಈ ಹಿಂದಿನ ಸಂಚಿಕೆಗಳಲ್ಲಿ ಪ್ರಶಾಂತ್ ಜೊತೆಗಿನ ಸ್ನೇಹದ ಬಗ್ಗೆ ತಾಂಡವ್ ರಾಮ್ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಆದರೆ ನಾಮಿನೇಷನ್ ಸಂದರ್ಭದಲ್ಲಿ ಈ ರೀತಿ ಆಗುತ್ತದೆ ಎಂದು ತಾಂಡವ್ ರಾಮ್ ಅವರು ನಿರೀಕ್ಷಿಸಿರಲಿಲ್ಲ. ಹಾಗಾಗಿ ಅವರಿಗೆ ಬೇಸರ ಆಗಿದೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ

ಈ ಮೊದಲು ತಾಂಡವ್ ರಾಮ್ ಮತ್ತು ಗಗನ್ ಚಿನ್ನಪ್ಪ ಅವರ ನಡುವೆ ಉತ್ತಮ ಸ್ನೇಹ ಇತ್ತು. ಆದರೆ ಬಿಗ್​ ಬಾಸ್ ಮನೆಯಲ್ಲಿ ಹೆಚ್ಚು ದಿನಗಳ ಕಾಲ ಸ್ನೇಹಕ್ಕೆ ಗಂಟು ಬೀಳಲು ಸಾಧ್ಯವಿಲ್ಲ. ಅದು ತಾಂಡವ್ ಮತ್ತು ಗಗನ್ ಅವರಿಗೆ ಅರ್ಥ ಆಗಿದೆ. ಇನ್ಮುಂದೆ ತಾವಿಬ್ಬರು ಪ್ರತ್ಯೇಕವಾಗಿ ಆಟವನ್ನು ಮುಂದುವರಿಸಲು ತೀರ್ಮಾನಿಸಿದ್ದಾರೆ. ಆ ನಿರ್ಧಾರ ಸರಿಯಾಗಿದೆ ಎಂದು ತಾಂಡವ್ ಅವರಿಗೆ ಆಸಿಯಾ ಮತ್ತು ಕಾವ್ಯಾ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us