‘ಆ ರೀತಿ ಮನಸ್ಸು ಕದಿಯೋಕೆ ಅವರಿಗೆ ಮಾತ್ರ ಸಾಧ್ಯ’; ರವಿಚಂದ್ರನ್​ ಹೃದಯ ದೋಚುವ ಕಳ್ಳ

Ravichandran: ರವಿಚಂದ್ರನ್ ಅವರ ಸಿನಿಮಾಗಳಲ್ಲಿ ನಾಯಕಿಯರಿಗೆ ನೀಡುವ ಪ್ರಾಮುಖ್ಯತೆ ಹಾಗೂ ಅವರ ಚಿತ್ರ ನಿರ್ಮಾಣ ಶೈಲಿಯ ಬಗ್ಗೆ ಚರ್ಚೆ ನಡೆದಿದೆ. ಸುಧಾರಾಣಿ ಮತ್ತು ಶ್ರುತಿ ಅವರ ಅನುಭವಗಳನ್ನು ಹಂಚಿಕೊಳ್ಳುವುದು ಹಾಗೂ ರವಿಚಂದ್ರನ್ ಅವರ ಸಿನಿಮಾಗಳಲ್ಲಿ ನಟಿಸುವ ಅನುಭವದ ಬಗ್ಗೆ ಮಾಹಿತಿ ನೀಡಿದ್ದಾರೆ.

‘ಆ ರೀತಿ ಮನಸ್ಸು ಕದಿಯೋಕೆ ಅವರಿಗೆ ಮಾತ್ರ ಸಾಧ್ಯ’; ರವಿಚಂದ್ರನ್​ ಹೃದಯ ದೋಚುವ ಕಳ್ಳ
Ravichandran (2)
Edited By:

Updated on: Mar 10, 2025 | 10:54 AM

ರವಿಚಂದ್ರನ್ ಸಿನಿಮಾಗಳು ಸದಾ ಭಿನ್ನ ಎನಿಸಿಕೊಳ್ಳುತ್ತವೆ. ಅವರು ಸಿನಿಮಾ ನಿರ್ಮಾಣ, ನಿರ್ದೇಶನ ಎಲ್ಲವನ್ನೂ ಮಾಡಿದ್ದಾರೆ. ರವಿಚಂದ್ರನ್ ಸಿನಿಮಾಗಳಲ್ಲಿ ಹೀರೋಯಿನ್​ಗಳಿಗೆ ವಿಶೇಷ ಸ್ಥಾನ ನೀಡಲಾಗುತ್ತದೆ. ಈ ಬಗ್ಗೆ ಅನೇಕರು ಹೇಳಿಕೊಂಡಿದ್ದರು. ಇತ್ತೀಚೆ ಜೀ ಕನ್ನಡದ ರಿಯಾಲಿಟಿ ಶೋಗೆ ಆಗಮಿಸಿದ್ದ ಸುಧಾರಾಣಿ, ಶ್ರುತಿ ಮೊದಲಾದವರು ಈ ಬಗ್ಗೆ ಹೇಳಿಕೊಂಡಿದ್ದರು. ರವಿಚಂದ್ರನ್ (Ravichandran) ಸಿನಿಮಾಗಳಲ್ಲಿ ನಟಿಸುವಾಗ ಯಾವ ರೀತಿಯ ಅನುಭವ ಆಗಿದೆ ಎಂಬುದನ್ನು ಅವರು ವಿವರಿಸಿದ್ದರು. ಆ ಬಗ್ಗೆ ಇಲ್ಲಿದೆ ಮಾಹಿತಿ.

ಜೀ ಕನ್ನಡ ವೇದಿಕೆ ಏರಿದ್ದ ಸುಧಾರಾಣಿ ಅವರು ರವಿಚಂದ್ರನ್ ಅವರನ್ನು ಹಾಡಿ ಹೊಗಳಿದ್ದರು. ‘ರವಿಚಂದ್ರನ್ ಸಿನಿಮಾದಲ್ಲಿ ಹೀರೋಯಿನ್​ಗೆ ಜಾಸ್ತಿ ಬೆಲೆ ಕೊಡುತ್ತಾರೆ. ಪರ್ಫಾರ್ಮೆನ್ಸ್ ಇರಬಹುದು, ಕಾಸ್ಟ್ಯೂಮ್ ಇರಬಹುದು ಎಲ್ಲದರಲ್ಲೂ ಅವರಿಗೆ ಹೆಚ್ಚಿನ ಆದ್ಯತೆ ಇರುತ್ತದೆ’ ಎಂದು ರವಿಚಂದ್ರನ್ ಸಿನಿಮಾನ ಬಾಯ್ತುಂಬ ಹೊಗಳಿದರು.

ಇದನ್ನೂ ಓದಿ
ರವಿಚಂದ್ರನ್ ತಂದೆಗೆ 14 ಮಕ್ಕಳು; ಕ್ರೇಜಿಸ್ಟಾರ್ ಹುಟ್ಟಿದ್ದೂ ಪವಾಡವೇ

‘ನಾನು ಮೊದಲ ಬಾರಿ ರವಿಚಂದ್ರನ್​ ಜೊತೆ ಡ್ಯುಯೆಟ್ ಸಾಂಗ್ ಹಾಡುವಾಗ ನನಗೆ ಸಾಮಾನ್ಯ ಸೀರೆ ಉಡಿಸಲಾಗಿತ್ತು. ಮೊದಲ ಶಾಟ್​​ನಲ್ಲಿ ನಿಂತಿದ್ದೆ. 150 ಸಿನಿಮಾಗಳಲ್ಲಿ ಕಾಟನ್ ಸೀರೆ ಉಟ್ಟುಕೊಂಡು ಬಂದಿದ್ದಾರೆ. ಇಲ್ಲಿಯೂ ಹಾಗೆ ಕರೆದುಕೊಂಡು ಬರ್ತೀರಲ್ರಿ ಎಂದು ರವಿಚಂದ್ರನ್ ಸಿಟ್ಟಾದರು. ಏನು ಮಾಡ್ತಿರೋ ಗೊತ್ತಿಲ್ಲ ರಾಣಿ ತರ ಕರೆದುಕೊಂಡು ಬರಬೇಕು ಎಂದರು. ಬೆಳಿಗ್ಗೆ ಶೂಟಿಂಗ್ ಇತ್ತು. ಆದರೆ, ಬಟ್ಟೆಯ ಕಾರಣಕ್ಕೆ ಮಧ್ಯಾಹ್ನ ಶೂಟಿಂಗ್ ಆಯ್ತು. ಅದು ನನಗೆ ಮೊದಲ ಅನುಭವ. ರಾಣಿ ತರ ತೋರಿಸಿದ್ರು. ಆ ತರ ಮನಸ್ಸು ಕದಿಯೋಕೆ ಅವರಿಗೆ ಮಾತ್ರ ಸಾಧ್ಯ’ ಎಂದರು ಶ್ರುತಿ.

‘ಕನ್ನಡಿಗರ ಮನಸ್ಸು ಕದ್ದ ಕಳ್ಳ ಅವರು. ಅದರಲ್ಲೂ ಸಂಗೀತದಲ್ಲಿ ದೊಡ್ಡ ಅಲೆ ಸೃಷ್ಟಿ ಮಾಡಿದ ಮಾಂತ್ರಿಕ. ಕನ್ನಡ ಚಿತ್ರರಂಗ ಶ್ರೀಮಂತ ಗೊಳಿಸಿದ ಧೀಮಂತ. ಕಳ್ಳ ಕೃಷ್ಣ’ ಎಂದರು ತಾರಾ.

ಇದನ್ನೂ ಓದಿ: ರವಿಚಂದ್ರನ್ ತಂದೆಗೆ 14 ಮಕ್ಕಳಿದ್ದರು, ಬದುಕಿದ್ದು 5; ಕ್ರೇಜಿಸ್ಟಾರ್ ಹುಟ್ಟಿದ್ದೂ ಪವಾಡವೇ

ರವಿಚಂದ್ರನ್ ಅವರು ಆಗಿನ ಕಾಲದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಎಲ್ಲಾ ಸಿನಿಮಾಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದವು. ಅವರು ‘ಪ್ರೇಮಲೋಕ 2’ ಚಿತ್ರ ಮಾಡೋದಾಗಿ ಘೋಷಣೆ ಮಾಡಿದ್ದಾರೆ. ಆದರೆ, ಅಧಿಕೃತವಾಗಿ ಸಿನಿಮಾ ಇನ್ನೂ ಸೆಟ್ಟೇರಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:52 am, Mon, 10 March 25