ಅಗಲಿದ ತಂದೆ ನೆನೆದು ಸುಕೃತಾ ನಾಗ್ ಕಣ್ಣೀರು; ನಟಿಯ ನಗುಮೊಗದ ಹಿಂದಿದೆ ಸಾಕಷ್ಟು ನೋವು
ಸುಕೃತಾ ನಾಗ್ ಅವರು ತಮ್ಮ ಐದು ವರ್ಷದ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಬಗ್ಗೆ ತಮ್ಮ ಭಾವುಕ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಪ್ರವೀಣ್ ಜೈನ್ ಅವರು ಸುಕೃತಾಗೆ ತಂದೆಯನ್ನು ನೆನೆಯುವಂತೆ ಮಾಡಿ ಸರ್ಪ್ರೈಸ್ ಕೊಟ್ಟರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಗಮನ ಸೆಳೆದಿದೆ.

ಸುಕೃತಾ ನಾಗ್ ಅವರು ಕಿರುತೆರೆ ಮೂಲಕ ಅವರು ಸಾಕಷ್ಟು ಖ್ಯಾತಿ ಗಳಿಸಿದರು. ಅವರಿಗೆ ಈಗಲೂ ಕಿರುತೆರೆಯಲ್ಲಿ ಬೇಡಿಕೆ ಇದೆ ಎಂದು ಹೇಳಬಹುದು. ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ಮೊದಲು ನಟಿಸಿದ್ದರು ಸುಕೃತಾ (Sukrutha Nag). ಆ ಬಳಿಕ ‘ಲಕ್ಷಣ’ ಹೆಸರಿನ ಧಾರಾವಾಹಿಯನ್ನೂ ಅವರು ಮಾಡಿದರು. ಈಗ ಅವರು ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ನ ಭಾಗ ಆಗಿದ್ದಾರೆ. ಸುಕೃತಾ ನಾಗ್ ಅವರು ಕೇವಲ ಐದು ವರ್ಷ ಇದ್ದಾಗ ತಂದೆಯನ್ನು ಕಳೆದುಕೊಂಡಿದ್ದರು. ಈ ಬಗ್ಗೆ ಅವರು ವೇದಿಕೆ ಮೇಲೆ ನೆನೆದು ಬೇಸರಗೊಂಡಿದ್ದಾರೆ.
ಸುಕೃತಾ ಅವರ ಜೊತೆ ಇರೋ ಪ್ರವೀಣ್ ಜೈನ್ ಅವರು ಸುಕೃತಾಗೆ ಸರ್ಪ್ರೈಸ್ಕೊಟ್ಟರು. ‘ಸುಕೃತಾ ನಾಗ್ ತಂದೆಯ ಹೆಸರು ನಾಗರಾಜ್. ಸುಕೃತಾ ಐದು ವರ್ಷ ಇರುವಾಗಲೇ ನಾಗರಾಜ್ ಮೃತಪಟ್ಟರು. ಅವರ ತಂದೆ ಹೇಗಿದ್ರು, ಏನು ಮಾಡುತ್ತಿದ್ದರು ಎಂದು ಕೇಳಿಕೊಂಡು ಹೋದಾಗ ಅವರಿಗೆ ಸಹಾಯ ಮನಸ್ಥಿತಿ ಚೆನ್ನಾಗಿ ಇತ್ತು. ಸುಕೃತಾ ಕೂಡ ಒಬ್ಬರಿಗೆ ಸಹಾಯ ಮಾಡೋದನ್ನು ಇಷ್ಟಪಡುತ್ತಾರೆ. ಈ ವ್ಯಕ್ತಿತ್ವ ಎಲ್ಲಿಂದ ಬಂತು ಎಂದು ನೋಡಿದಾಗ ಅವರ ತಂದೆಯಿಂದಲೇ ಬಂದಿದ್ದು’ ಎಂದರು ಪ್ರವೀಣ್ ಜೈನ್.
‘ಬೇರೆಯವರ ಕಷ್ಟದಲ್ಲಿ ಇದ್ದಾಗ ಅದನ್ನು ಸರಿಯಾಗಿ ಹಂಚಿಕೊಂಡು ಬೆಳೆದ ಜೀವ ನಾಗರಾಜ್ ಅವರದ್ದು. ಅವರನ್ನು ಸ್ಮರಿಸೋ ಕಾರ್ಯಕ್ರಮವನ್ನು ನಾನು ಮಾಡಿದೆ. ಈ ಮೂಲಕ ಸುಕೃತಾಗೆ ಸರ್ಪ್ರೈಸ್ ಕೊಡಲು ಬಯಸಿದೆ. ನಿಮಗೆ ಇಷ್ಟ ಆಗುತ್ತದೆ ಎಂದು ಭಾವಿಸುತ್ತೇನೆ. ಇವರು ಎಲ್ಲಿಯೂ ಹೋಗಿಲ್ಲ. ನಾಗರಾಜ್ ಸರ್ ಆಲ್ವೇಸ್ ಲವ್ ಯೂ’ ಎಂದರು ಪ್ರವೀಣ್ ಜೈನ್.
View this post on Instagram
ಇದು ಸುಕೃತಾಗೆ ಸರ್ಪ್ರೈಸ್ ಆಗಿತ್ತು. ‘ತುಂಬಾ ಖುಷಿ ಆಗುತ್ತಿದೆ. ಅವರ ಫೋಟೋ ಸ್ಕ್ರೀನ್ ಮೇಲೆ ಬಂದಿದ್ದಕ್ಕೆ ಖುಷಿ ಇದೆ. ನನ್ನ ಅಮ್ಮ ಯಾರ ಸಹಾಯವೂ ಇಲ್ಲದೇ ನಮ್ಮನ್ನು ಬೆಳೆಸಿದ್ದಾರೆ ಅನ್ನೋದು ಖುಷಿಯ ವಿಚಾರ. ಎಷ್ಟೇ ಕಷ್ಟ ಬಂದರೂ ನಾವು ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ಕಷ್ಟ ನಮ್ಮ ಜೀವನದ ಭಾಗ ಆಗಿದೆ. ತಂದೆ ಇದ್ದಿದ್ದರೆ ನಾವು ಇಷ್ಟು ಕಷ್ಟಪಡೋ ಸ್ಥಿತಿ ಬರುತ್ತಿರಲಿಲ್ಲ’ ಎಂದರು ಸುಕೃತಾ.
ಇದನ್ನೂ ಓದಿ: ಜೀ ಕನ್ನಡದ ‘ಭರ್ಜರಿ ಬ್ಯಾಚುಲರ್ಸ್’ ಶೋಗೆ ಕಾಲಿಟ್ಟ ಮೋಸ್ಟ್ ಎಲಿಜಬೆಲ್ ಬ್ಯಾಚುಲರ್
‘22 ವರ್ಷ ಆಯ್ತು ತಂದೆ ಕಳೆದುಕೊಂಡಿದೆ. ಎಲ್ಲರಿಗೂ ತಂದೆ ಪ್ರೀತಿ ಸಿಗುತ್ತದೆ. ನನಗೆ ಸಿಕ್ಕಿಲ್ಲ ಅನ್ನೋದು ಬೇಸರ. ತಂದೆ ಹಾಗೂ ತಾಯಿ ಇಬ್ಬರ ಪ್ರೀತಿನೂ ತುಂಬಾನೇ ಮುಖ್ಯ. ನನ್ನ ತಂದೆಯ ಬಾಡಿ ಎದುರು ಆಡುತ್ತಿದ್ದೆ. ನನಗೆ ಏನಾಗುತ್ತಿದೆ ಎಂಬುದು ಗೊತ್ತಿರಲಿಲ್ಲ. ನನ್ನ ತಂದೆ ಕಾರ್ಯ ನನ್ನ ಅಕ್ಕನೇ ಮಾಡಿದ್ರು. ತಾಯಿ ಬಗ್ಗೆ ಹೆಮ್ಮೆ ಇದೆ. ತಾಯಿ ಚೆನ್ನಾಗಿ ಸಾಕಿದ್ದಾರೆ’ ಎಂದು ಸುಕೃತಾ ಹೇಳಿದರು. ಆ ಬಳಿಕ ರವಿಚಂದ್ರನ್ ಅವರು ಸಮಾಧಾನ ಮಾಡೋ ಕೆಲಸ ಮಾಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.