‘ಏನೇ ಮಾಡಿದ್ರೂ ಕ್ಯೂಟ್ ಅನ್ನೋಕೆ ಅದೇನು ತೆಲುಗು ಬಿಗ್ ಬಾಸ್?’; ಶೋಭಾ ಬಗ್ಗೆ ತೆಲುಗು ಮಂದಿ ಟೀಕೆ

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಶೋಭಾ ಶೆಟ್ಟಿ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದರು. ಮೊದಲ ವಾರ ಕೂಗಾಟ ನಡೆಸಿದ್ದ ಅವರು ಎರಡನೇ ವಾರಕ್ಕೆ ಸೈಲೆಂಟ್ ಆದರು. ಅವರು ಅನಾರೋಗ್ಯದ ಕಾರಣ ನೀಡಿ ಹೊರಹೋಗುವ ನಿರ್ಧಾರಕ್ಕೆ ಬಂದಿದ್ದಾರೆ. ಇದಕ್ಕೆ ತೆಲುಗು ಮಂದಿ ಪ್ರತಿಕ್ರಿಯೆ ನೀಡುತ್ತಾ ಇದ್ದಾರೆ.

‘ಏನೇ ಮಾಡಿದ್ರೂ ಕ್ಯೂಟ್ ಅನ್ನೋಕೆ ಅದೇನು ತೆಲುಗು ಬಿಗ್ ಬಾಸ್?’; ಶೋಭಾ ಬಗ್ಗೆ ತೆಲುಗು ಮಂದಿ ಟೀಕೆ
ಶೋಭಾ-ಸುದೀಪ್

Updated on: Dec 02, 2024 | 8:19 AM

ಶೋಭಾ ಶೆಟ್ಟಿ ಅವರು ತೆಲುಗು ಬಿಗ್ ಬಾಸ್​​ನಲ್ಲಿ ಸಾಕಷ್ಟು ಹವಾ ಮಾಡಿದ್ದರು. ಅವರು ‘ಬಿಗ್ ಬಾಸ್ ತೆಲುಗು ಸೀಸನ್ 7’ರಲ್ಲಿ ಸ್ಪರ್ಧಿಸಿದ್ದರು. 98 ದಿನಗಳ ಕಾಲ ದೊಡ್ಮನೆಯಲ್ಲಿ ಅವರು ಇದ್ದರು. ಆದರೆ, ಕನ್ನಡ ಬಿಗ್ ಬಾಸ್​ನಲ್ಲಿ ಅವರಿಗೆ ಕೇವಲ ಎರಡು ವಾರವೂ ಇರೋಕೆ ಸಾಧ್ಯವಾಗಿಲ್ಲ. ಈ ವಿಚಾರವಾಗಿ ತೆಲುಗು ವೀಕ್ಷಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ‘ಹೆಣ್ಣುಮಕ್ಕಳು ಏನೇ ಮಾಡಿದ್ರೂ ಕ್ಯೂಟ್ ಅನ್ನೋಕೆ ಅದೇನು ತೆಲುಗು ಬಿಗ್ ಬಾಸ್ ಅಂದುಕೊಂಡ್ರಾ’ ಎಂದು ಅವರು ಟೀಕೆ ಮಾಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಶೋಭಾ ಶೆಟ್ಟಿ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದರು. ಮೊದಲ ವಾರ ಕೂಗಾಟ ನಡೆಸಿದ್ದ ಅವರು ಎರಡನೇ ವಾರಕ್ಕೆ ಸೈಲೆಂಟ್ ಆದರು. ಹೀಗೇಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಅದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಅವರು ಅನಾರೋಗ್ಯದ ಕಾರಣ ನೀಡಿ ಹೊರಹೋಗುವ ನಿರ್ಧಾರಕ್ಕೆ ಬಂದಿದ್ದಾರೆ. ಇದಕ್ಕೆ ತೆಲುಗು ಮಂದಿ ಪ್ರತಿಕ್ರಿಯೆ ನೀಡುತ್ತಾ ಇದ್ದಾರೆ.

‘ಇದು ತೆಲುಗು ಬಿಗ್ ಬಾಸ್ ಅಂದ್ಕೊಂಡ್ರಾ ಶೋಭಾ ಶೆಟ್ಟಿ ಅವರೇ? ಹೆಣ್ಣುಮಕ್ಕಳು ಏನೇ ಮಾಡಿದರೂ ಕ್ಯೂಟ್ ಅನ್ನೋಕೆ ಅಲ್ಲಿರೋದು ನಮ್ಮ ಹೋಸ್ಟ್​ (ಅಕ್ಕಿನೇನಿ ನಾಗಾರ್ಜುನ) ಅಂದ್ಕೊಂಡ್ರಾ? ಸುದೀಪ್ ಭಾಯ್ ಅವರು ಎಪಿಸೋಡ್ ನೋಡ್ತಾರೆ. ಕರ್ಮ ಹಿಂಬಾಲಿಸುತ್ತದೆ’ ಎಂದು ಬರೆದುಕೊಳ್ಳಲಾಗಿದೆ.

ಇದನ್ನೂ ಓದಿ:  ಸೇವ್ ಆದರೂ ಬಿಗ್ ಬಾಸ್​ನಿಂದ ಹೊರ ಹೋಗುವ ನಿರ್ಧಾರ ಮಾಡಿದ್ದೇಕೆ ಶೋಭಾ? ಇಲ್ಲಿದೆ ಅಸಲಿ ವಿಚಾರ

ಅಕ್ಕಿನೇನಿ ನಾಗಾರ್ಜುನ ಅವರು ಎಪಿಸೋಡ್ ನೋಡದೇ ಆ್ಯಂಕರಿಂಗ್ ಮಾಡುತ್ತಾರೆ ಎಂಬುದು ತೆಲುಗು ಮಂದಿಯ ಆರೋಪ. ಅಲ್ಲದೆ, ಅವರು ಒಬ್ಬರಿಗೊಂದು ನ್ಯಾಯ ಮತ್ತೊಬ್ಬರಿಗೊಂದು ನ್ಯಾಯ ಮಾಡುತ್ತಾರೆ ಎಂಬ ಆರೋಪವೂ ಇದೆ. ಇದನ್ನು ಅನೇಕರು ಒಪ್ಪುತ್ತಾರೆ. ಆದರೆ, ಸುದೀಪ್ ಅವರು ಎಂದಿಗೂ ಆ ರೀತಿ ಮಾಡಿಲ್ಲ. ತಮ್ಮದೇ ಗೆಳೆಯರು ಬಿಗ್ ಬಾಸ್​ನಲ್ಲಿ ಇದ್ದರೂ ಅವರು ಸುಮ್ಮನೆ ಕುಳಿತುಕೊಂಡಿಲ್ಲ. ಅವರು ನ್ಯಾಯ ಒದಗಿಸಿಯೇ ಎಪಿಸೋಡ್ ಮುಗಿಸುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:22 am, Mon, 2 December 24