ಸೇವ್ ಆದರೂ ಬಿಗ್ ಬಾಸ್​ನಿಂದ ಹೊರ ಹೋಗುವ ನಿರ್ಧಾರ ಮಾಡಿದ್ದೇಕೆ ಶೋಭಾ? ಇಲ್ಲಿದೆ ಅಸಲಿ ವಿಚಾರ

ತೆಲುಗು ಬಿಗ್ ಬಾಸ್​ನಲ್ಲಿ ಶೋಭಾ ಶೆಟ್ಟಿ ಹಲ್​ಚಲ್ ಎಬ್ಬಿಸಿದ್ದರು. ಕೂಗಾಡಿಕೊಂಡಿದ್ದ ಅವರು, ಎಲ್ಲರ ಬಾಯಿ ಮುಚ್ಚಿಸಿದ್ದರು. ವಿನ್ ಆಗೋ ಅವಕಾಶ ಅವರಿಗೆ ಸಿಕ್ಕಿರಲಿಲ್ಲ. ಕನ್ನಡ ಬಿಗ್ ಬಾಸ್​ಗೆ ಬಂದ ಮೊದಲ ವಾರ ಮಾತ್ರ ಅವರು ಕೂಗಾಟ ನಡೆಸಿದ್ದರು. ಈಗ ಹೊರ ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ.

ಸೇವ್ ಆದರೂ ಬಿಗ್ ಬಾಸ್​ನಿಂದ ಹೊರ ಹೋಗುವ ನಿರ್ಧಾರ ಮಾಡಿದ್ದೇಕೆ ಶೋಭಾ? ಇಲ್ಲಿದೆ ಅಸಲಿ ವಿಚಾರ
ಶೋಭಾ
Follow us
ರಾಜೇಶ್ ದುಗ್ಗುಮನೆ
|

Updated on: Dec 02, 2024 | 6:51 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಒಂದು ಅಚ್ಚರಿಯ ಬೆಳವಣಿಗೆ ನಡೆದಿದೆ. ಶೋಭಾ ಶೆಟ್ಟಿ ಅವರು ಜನರ ವೋಟ್ ಪಡೆದು ಸೇವ್ ಆದರೂ ದೊಡ್ಮನೆಯಿಂದ ಹೊರ ಹೋಗುವ ನಿರ್ಧಾರ ಮಾಡಿದ್ದಾರೆ. ತೆಲುಗು ಬಿಗ್ ಬಾಸ್​ನಲ್ಲಿ ಕೂಗಾಡಿಕೊಂಡಿದ್ದ ಅವರು ಕನ್ನಡ ಬಿಗ್ ಬಾಸ್​​ಗೆ ಬಂದು ಇಷ್ಟೊಂದು ವೀಕ್ ಏಕೆ ಆದರು ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಕೊನೆಗೂ ಅದಕ್ಕೆ ಉತ್ತರ ಸಿಕ್ಕಿದೆ. ಸುದೀಪ್ ಎದುರು ಅವರು ಈ ವಿಚಾರ ಹೇಳಿಕೊಂಡಿದ್ದಾರೆ.

ತೆಲುಗು ಬಿಗ್ ಬಾಸ್​ನಲ್ಲಿ ಶೋಭಾ ಶೆಟ್ಟಿ ಹಲ್​ಚಲ್ ಎಬ್ಬಿಸಿದ್ದರು. ಕೂಗಾಡಿಕೊಂಡಿದ್ದ ಅವರು, ಎಲ್ಲರ ಬಾಯಿ ಮುಚ್ಚಿಸಿದ್ದರು. ವಿನ್ ಆಗೋ ಅವಕಾಶ ಅವರಿಗೆ ಸಿಕ್ಕಿರಲಿಲ್ಲ. ಕನ್ನಡ ಬಿಗ್ ಬಾಸ್​ಗೆ ಬಂದ ಮೊದಲ ವಾರ ಮಾತ್ರ ಅವರು ಕೂಗಾಟ ನಡೆಸಿದ್ದರು. ಮಂಜು ವಿರುದ್ಧ ಅವರು ಸಿಟ್ಟಾಗಿದ್ದರು. ಆದರೆ, ದಿನ ಕಳೆದಂತೆ ಅವರು ಡಲ್ ಆದರು. ಹೆಚ್ಚು ಕಾಣಿಸಿಕೊಳ್ಳಲೇ ಇಲ್ಲ. ಆದರೆ, ಈಗ ಅವರು ದೊಡ್ಮನೆಯಿಂದ ಹೊರ ಹೋಗುವ ನಿರ್ಧಾರ ಮಾಡಿದ್ದಾರೆ. ಇದಕ್ಕೆ ಕಾರಣ ಕೂಡ ತಿಳಿಸಿದ್ದಾರೆ.

‘ನನಗೆ ಅನಾರೋಗ್ಯ ಸಮಸ್ಯೆ ಆಗಿದೆ. ನನ್ನ ಕಾಲು ಸಹಕರಿಸುತ್ತಿಲ್ಲ’ ಎಂದು ಹೇಳುತ್ತಾ ಶೋಭಾ ಶೆಟ್ಟಿ ಅವರು ಕಣ್ಣೀರು ಹಾಕಿದರು. ಸುದೀಪ್ ಅವರು ಸಮಾಧಾನ ಮಾಡಿ ಅವರಿಗೆ ಧೈರ್ಯ ತುಂಬಿದರು. ಇದರಿಂದ ಮನಸ್ಸು ಬದಲಿಸಿದ ಶೋಭಾ ಶೆಟ್ಟಿ ನಂತರ ಮತ್ತೆ ಪ್ಲೇಟ್ ಬದಲಿಸಿದರು. ‘ನಾನು ಹೋಗುತ್ತೇನೆ’ ಎಂದು ಹಠ ಹಿಡಿದು ಕುಳಿತರು.

ಇದನ್ನೂ ಓದಿ: ನನ್ನನ್ನು ಬಿಟ್ಟುಬಿಡಿ ಎಂದು ಕೈ ಮುಗಿದು ಕೇಳಿಕೊಂಡ ಶೋಭಾ ಶೆಟ್ಟಿ

ಶೋಭಾ ಶೆಟ್ಟಿ ಅವರು ಮನೆ ಬಿಟ್ಟು ಹೋಗುವ ನಿರ್ಧಾರ ತೆಗೆದುಕೊಂಡಿರೋದು ಅನಾರೋಗ್ಯ ಕಾರಣದಿಂದಲೇ ಎಂದು ಹೇಳಲಾಗುತ್ತಿದೆ. ಟಾಸ್ಕ್ ಆಡುವಾಗ ಬಿದ್ದು ಅವರ ಕಾಲಿಗೆ ಪೆಟ್ಟಾಗಿತ್ತು. ಈ ಕಾರಣಕ್ಕೆ ಅವರು ಹೊರಹೋಗುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಅಂದಹಾಗೆ, ಈವರೆಗೆ ಅವರು ದೊಡ್ಮನೆಯಿಂದ ಹೊರಕ್ಕೆ ಹೋಗೋದನ್ನು ತೋರಿಸಿಲ್ಲ. ಅವರು ದೊಡ್ಮನೆಯಲ್ಲಿ ಉಳಿದುಕೊಂಡರೋ ಅಥವಾ ಹೋದರೋ ಎನ್ನವು ವಿಚಾರ ಇಂದಿನ (ಡಿಸೆಂಬರ್ 2) ಎಪಿಸೋಡ್​ನಲ್ಲಿ ತಿಳಿಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ