ಶೋಭಾ ಕಣ್ಣಿಗೆ ಬಟ್ಟೆ; ಹನುಮಂತ ಫಸ್ಟ್​ ನೈಟ್ ಬೆಡ್​ನ ವಿವರಣೆ ಕೊಟ್ಟ ಪರಿಗೆ ಸುದೀಪ್ ಸುಸ್ತು

ಶೋಭಾ ಶೆಟ್ಟಿ ಹಾಗೂ ರಜತ್ ಅವರು ಬಂದರು. ಶೋಭಾ ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು. ಈ ವೇಳೆ ಫಸ್ಟ್​ನೈಟ್ ಬೆಡ್​ನ ಫೋಟೋ ಬಂತು. ಇದನ್ನು ನೋಡಿ ಎಲ್ಲರೂ ನಕ್ಕರು. ರಜತ್ ಬಳಿ ಇದನ್ನು ವಿವರಿಸೋಕೆ ಸಾಧ್ಯ ಆಗಲೇ ಇಲ್ಲ. ಆ ಬಳಿಕ ಶಿಶಿರ್ ಅವರು ತಾವು ಪ್ರಯತ್ನ ಮಾಡುವುದಾಗಿ ಬಂದರು. ಕೊನೆಗೆ ಬಂದ ಹನುಮಂತ ಇದರಲ್ಲಿ ಯಶಸ್ಸು ಕಂಡರು.

ಶೋಭಾ ಕಣ್ಣಿಗೆ ಬಟ್ಟೆ; ಹನುಮಂತ ಫಸ್ಟ್​ ನೈಟ್ ಬೆಡ್​ನ ವಿವರಣೆ ಕೊಟ್ಟ ಪರಿಗೆ ಸುದೀಪ್ ಸುಸ್ತು
ಬಿಗ್ ಬಾಸ್
Follow us
ರಾಜೇಶ್ ದುಗ್ಗುಮನೆ
|

Updated on: Dec 02, 2024 | 10:35 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಭಾನುವಾರದ ಎಪಿಸೋಡ್​ ಯಾವಾಗಲೂ ಫನ್ ಇಂದ ತುಂಬಿರುತ್ತದೆ. ಕಳೆದ ಭಾನುವಾರ (ಡಿಸೆಂಬರ್ 1) ಈ ಫನ್ ಸ್ವಲ್ಪ ಅಧಿಕವಾಗಿಯೇ ಇತ್ತು. ಸ್ಪರ್ಧಿಯ ಕಣ್ಣಿಗೆ ಬಟ್ಟೆ ಕಟ್ಟಲಾಗುತ್ತದೆ. ಈ ವೇಳೆ ಬೋರ್ಡ್​​ಮೇಲೆ ಒಂದು ವಸ್ತುವನ್ನು ತೋರಿಸಲಾಗುತ್ತದೆ. ಅದು ಏನು ಎಂಬುದನ್ನು ಎದುರು ಇರುವ ವ್ಯಕ್ತಿ ಧ್ವನಿ ಮೂಲಕವೇ ವಿವರಿಸಬೇಕು. ಈ ಎಪಿಸೋಡ್ ಸಖತ್ ಮನರಂಜನಾತ್ಮಕವಾಗಿ ಇತ್ತು.

ಶೋಭಾ ಶೆಟ್ಟಿ ಹಾಗೂ ರಜತ್ ಅವರು ಬಂದರು. ಶೋಭಾ ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು. ಈ ವೇಳೆ ಫಸ್ಟ್​ನೈಟ್ ಬೆಡ್​ನ ಫೋಟೋ ಬಂತು. ಇದನ್ನು ನೋಡಿ ಎಲ್ಲರೂ ನಕ್ಕರು. ರಜತ್ ಬಳಿ ಇದನ್ನು ವಿವರಿಸೋಕೆ ಸಾಧ್ಯ ಆಗಲೇ ಇಲ್ಲ. ಆ ಬಳಿಕ ಶಿಶಿರ್ ಅವರು ತಾವು ಪ್ರಯತ್ನ ಮಾಡುವುದಾಗಿ ಬಂದರು. ಅವರ ಬಳಿಯೂ ಸಾಧ್ಯವಾಗಿಲ್ಲ.

ಕೊನೆಗೆ ಸುದೀಪ್ ಅವರು ಈ ಟಾಸ್ಕ್​ನ ತ್ರಿವಿಕ್ರಂಗೆ ನೀಡಿದರು. ‘ಇದನ್ನು ಸರಿಯಾಗಿ ಗೆಸ್ ಮಾಡಿದರೆ ಇಡೀ ಮನೆಗೆ ಲಕ್ಷುರಿ ಬಜೆಟ್ ಸಿಗುತ್ತದೆ’ ಎಂದರು. ಆದರೆ, ತ್ರಿವಿಕ್ರಂ ಬಳಿಯೂ ಇದನ್ನು ಮಾಡೋಕೆ ಸಾಧ್ಯವಾಗಿಲ್ಲ. ಕೊನೆಗೆ ಬಂದಿದ್ದೇ ಹನುಮಂತ ಅವರು. ಹನುಮಂತ ಅವರು ಬರುತ್ತಿದ್ದಂತೆ, ‘ಎ ಏ ಐ ಅಂ ಅಃ..’ ಎಂದರು. ಅವರ ಧ್ವನಿಯಲ್ಲೇ ಶೋಭಾಗೆ ಗೊತ್ತಾಗಿ ಹೋಯಿತು. ‘ಫಸ್ಟ್​ನೈಟ್ ಕೋಣೆ ಅಥವಾ ಬೆಡ್’ ಎಂದು ಶೋಭಾ ಉತ್ತರ ಕೊಟ್ಟರು. ಈ ಮೂಲಕ ಇಡೀ ಮನೆ ಲಕ್ಷುರಿ ಪಡೆಯಿತು.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ಮತ್ತೆ ಹೈಡ್ರಾಮಾ; ಮುಖ್ಯದ್ವಾರ ತೆಗೆದ ಬಳಿಕ ಉಲ್ಟಾ ಹೊಡೆದ ಶೋಭಾ ಶೆಟ್ಟಿ

ರಜತ್, ಶಿಶಿರ್ ಹಾಗೂ ತ್ರಿವಿಕ್ರಂ ಬಳಿ ಸಾಧ್ಯವಾಗದೇ ಇದ್ದಿದ್ದನ್ನು ಹನುಮಂತ ಅವರು ಮಾಡಿ ತೋರಿಸಿದರು. ಈ ಮೂಲಕ ಇಡೀ ಮನೆಗೆ ಲಕ್ಷುರಿ ಕೊಡಿಸಿ ಅವರು ಹಿರೋ ಆದರು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ