ಬಿಗ್ ಬಾಸ್ ಎಂದರೆ ಬರೀ ಕಾಂಟ್ರವರ್ಸಿ ಅಲ್ಲ. ಆ ಮನೆಯೊಳಗೆ ಸ್ನೇಹ ಮತ್ತು ಪ್ರೀತಿ ಚಿಗುರಿದ್ದಕ್ಕೆ ಅನೇಕ ಉದಾಹರಣೆಗಳು ಇವೆ. ‘ಬಿಗ್ ಬಾಸ್ ಕನ್ನಡ ಸೀಸನ್ 9’ ಕೂಡ ಹಲವರ ಪಾಲಿಗೆ ಒಳ್ಳೆಯ ಸ್ನೇಹಿತರನ್ನು ನೀಡಿದೆ. ಆ ಪೈಕಿ ಹೆಚ್ಚು ಹೈಲೈಟ್ ಆಗಿದ್ದು ರೂಪೇಶ್ ಶೆಟ್ಟಿ (Roopesh Shetty) ಮತ್ತು ಸಾನ್ಯಾ ಐಯ್ಯರ್. ಇವರಿಬ್ಬರು ಬಿಗ್ ಬಾಸ್ ಒಟಿಟಿ ಶೋನಲ್ಲಿ ಮೊದಲ ಬಾರಿಗೆ ಪರಿಚಿತರಾದರು. ಬಳಿಕ ಟಿವಿ ಸೀಸನ್ಗೂ ಜೊತೆಯಾಗಿ ಕಾಲಿಟ್ಟರು. ಅಲ್ಲಿಯೂ ಕೂಡ ತುಂಬ ಅನ್ಯೋನ್ಯವಾಗಿ ಇದ್ದರು. ಸಾನ್ಯಾ ಐಯ್ಯರ್ (Sanya Iyer) ಜೊತೆ ರೂಪೇಶ್ ಶೆಟ್ಟಿ ಹೆಚ್ಚು ಕಾಲ ಕಳೆದರು. ಆದರೆ ಸಾನ್ಯಾ ಫಿನಾಲೆಗೆ ಬರಲಿಲ್ಲ. ಈಗ ಬಿಗ್ ಬಾಸ್ ಕನ್ನಡ 9ನೇ ಸೀಸನ್ (Bigg Boss Kannada Season 9) ಮುಗಿಯಲು ಕ್ಷಣಗಣನೆ ಶುರುವಾಗಿದ್ದು, ಈ ಸಂದರ್ಭದಲ್ಲಿ ಸಾನ್ಯಾ ಅಯ್ಯರ್ ಅವರನ್ನು ರೂಪೇಶ್ ಶೆಟ್ಟಿ ನೆನಪಿಸಿಕೊಂಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ಸಾನ್ಯಾ ಐಯ್ಯರ್ ಅವರು ಎಲಿಮಿನೇಟ್ ಆದಾಗ ರೂಪೇಶ್ ಶೆಟ್ಟಿ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದರು. ‘ದಯವಿಟ್ಟು ಬದಲಾಗಬೇಡ. ನನಗಾಗಿ ಕಾದಿರು’ ಎಂದು ಸಾನ್ಯಾ ಬಳಿ ರೂಪೇಶ್ ಮನವಿ ಮಾಡಿಕೊಂಡಿದ್ದರು. ಈಗ ದೊಡ್ಮನೆಯ ಹೊರಗೆ ಸಾನ್ಯಾರನ್ನು ಭೇಟಿ ಮಾಡುವ ಸಮಯ ಹತ್ತಿರ ಆಗಿದೆ. ಭೇಟಿ ಆದಾಗ ತಮ್ಮ ಮೊದಲು ಮಾತು ಏನಾಗಿರಲಿದೆ ಎಂಬುದನ್ನು ಅವರು ದೊಡ್ಮನೆ ಒಳಗೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Bigg Boss Finale: ಬಿಗ್ ಬಾಸ್ ಫಿನಾಲೆಗಾಗಿ ವಿಶೇಷ ಗೆಟಪ್ನೊಂದಿಗೆ ಕ್ಯಾಮೆರಾ ಮುಂದೆ ಬಂದ ರಾಕೇಶ್ ಅಡಿಗ
‘ಮೊದಲಿಗೆ ಹೋಗಿ ತಬ್ಬಿಕೊಳ್ತೀನಿ. ಹೇಗಿದ್ದೀಯಾ ಅಂತ ಕೇಳುತ್ತೇನೆ. ಪ್ರೀತಿ ಮತ್ತು ಸ್ನೇಹಕ್ಕಿಂತಲೂ ಮುಖ್ಯವಾಗಿ ಮೊದಲಿದ್ದ ಕಾಳಜಿ ಈಗಲೂ ಇದೆಯಾ ಅಂತ ಕೇಳ್ತೀನಿ. ಯಾಕೆಂದರೆ ಈ ಮನೆಯಲ್ಲಿ ಅವರ ಜೊತೆ ಇದ್ದ ಅನುಭವ ನನಗಿದೆ. ಆದರೆ ಮನೆಯ ಹೊರಗಿನ ಅನುಭವ ಇಲ್ಲ. ಮನೆಯಲ್ಲಿ ಇದ್ದ ಭಾವನೆ ಈಗಲೂ ಹಾಗೆಯೇ ಇದೆಯಾ? ಲೈಫ್ ಹೇಗೆಲ್ಲ ಬದಲಾಗಿದೆ? ನಾನು ನಿಮಗೆ ಈ ಮನೆಯಲ್ಲಿ ಇದ್ದಷ್ಟೇ ಮುಖ್ಯವಾ ಅಂತ ಕೇಳ್ತೀನಿ’ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: BBK 9 Finale: ಬಿಗ್ ಬಾಸ್ ಫಿನಾಲೆ ನಡೆಸಿಕೊಡಲು ಝಗಮಗಿಸುವ ಡ್ರೆಸ್ ಧರಿಸಿ ವೇದಿಕೆಗೆ ಬಂದ ಕಿಚ್ಚ ಸುದೀಪ್
ಯಾರನ್ನಾದರೂ ಹಚ್ಚಿಕೊಂಡರೆ ಅವರ ಬಗ್ಗೆ ತೀವ್ರ ಕಾಳಜಿ ತೋರುವುದು ರೂಪೇಶ್ ಶೆಟ್ಟಿ ಗುಣ. ಸಾನ್ಯಾ ಐಯ್ಯರ್ ಬಗ್ಗೆ ಅವರು ಆ ರೀತಿಯ ಭಾವನೆ ಇಟ್ಟುಕೊಂಡಿದ್ದಾರೆ ಎಂಬುದಕ್ಕೆ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಘಟನೆಗಳು ಸಾಕ್ಷಿ ಆಗಿದ್ದವು. ಇಬ್ಬರ ಜೋಡಿ ಚೆನ್ನಾಗಿದೆ ಎಂದು ವೀಕ್ಷಕರು ಕೂಡ ಕಮೆಂಟ್ಗಳ ಮೂಲಕ ಅಭಿಪ್ರಾಯ ತಿಳಿಸಿದ್ದುಂಟು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.