ತುಕಾಲಿ ಸಂತೋಷ್ (Tukali Santosh) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಗಮನ ಸೆಳೆಯುತ್ತಿದ್ದಾರೆ. ಆರಂಭದಲ್ಲಿ ಅವರು ಮಾಡಿದ ಕಮೆಂಟ್ಗಳು ಕೆಲವರಿಗೆ ಬೇಸರ ಮೂಡಿಸಿದ್ದವು. ಡ್ರೋನ್ ಪ್ರತಾಪ್ನ ಹೀಯಾಳಿಸಿ ಅವರು ಮಾತನಾಡಿದ್ದರು. ಸುದೀಪ್ ಅವರು ಕ್ಲಾಸ್ ತೆಗೆದುಕೊಂಡ ಬಳಿಕವೂ ತಂತೋಷ್ ಅವರು ಅಷ್ಟಾಗಿ ಬದಲಾಗಿಲ್ಲ. ಅವರಿವರ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಈಗ ಸಂತೋಷ್ ಅವರ 2 ಲಕ್ಷ ರೂಪಾಯಿ ಬೇರೆಯವರ ಖಾತೆಗೆ ಜಮಾ ಆಗಿದೆ. ಈ ಬಗ್ಗೆ ಸುದೀಪ್ ಅವರೇ ಮಾಹಿತಿ ನೀಡಿದ್ದಾರೆ.
ಶನಿವಾರದ (ಅಕ್ಟೋಬರ್ 28) ಎಪಿಸೋಡ್ನಲ್ಲಿ ನವರಾತ್ರಿ ಹಬ್ಬವನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತೀರಿ ಎಂದು ಸುದೀಪ್ ಅವರು ಪ್ರಶ್ನೆ ಮಾಡಿದ್ದರು. ಇದಕ್ಕೆ ತುಕಾಲಿ ಅವರು ಉತ್ತರಿಸಿದ್ದರು. ‘ಹಬ್ಬನ ಸಖತ್ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಹೊರಗಿದ್ದರೆ ದಾನ-ಧರ್ಮ ಮಾಡುತ್ತಿದ್ದೆ. ಆದರೆ, ಈ ಬಾರಿ ಅದು ಸಾಧ್ಯವಾಗುತ್ತಿಲ್ಲ’ ಎಂದರು ಸಂತೋಷ್. ಇದೇ ವಿಚಾರ ಇಟ್ಟುಕೊಂಡು ಸುದೀಪ್ ಅವರು ಸಂತುನ ಕಾಲೆಳೆದರು.
‘ಅಷ್ಟೇನಾ.. ನಿಮ್ಮ ಖಾತೆಯಲ್ಲಿರುವ ಹಣವನ್ನು ನಾವು ಬಳಸಿಕೊಳ್ಳುತ್ತೇವೆ. ಆ ಹಣದಿಂದ ದಾನ ಧರ್ಮ ಮಾಡುತ್ತೇವೆ. ಪ್ರತಿ ವಾರ ನಿಮಗೆ ಕ್ರೆಡಿಟ್ ಆಗುವ ಸಂಭಾವನೆಯನ್ನು ದಾನ ಧರ್ಮಕ್ಕೆ ಬಳಕೆ ಮಾಡಿಕೊಳ್ಳುತ್ತೇವೆ’ ಎಂದು ಹೇಳಿದ್ದರು ಸುದೀಪ್.
ಭಾನುವಾರದ ಎಪಿಸೋಡ್ನಲ್ಲಿ ಈ ವಿಚಾರ ಚರ್ಚೆಗೆ ಬಂದಿದೆ. ‘ತುಕಾಲಿ ಅವರೇ ನಿಮ್ಮ ಖಾತೆಯಿಂದ ಎರಡು ಲಕ್ಷ ರೂಪಾಯಿ ತೆಗೆದುಕೊಂಡಿದ್ದೇವೆ. ಈ ಹಣವನ್ನು ದಾನ ಧರ್ಮ ಮಾಡಿದ್ದೇವೆ’ ಎಂದರು ಸುದೀಪ್. ಇದನ್ನು ಕೇಳಿ ಸಂತೋಷ್ ಅವರು ಕಂಗಾಲಾದರು. ‘ಅಣ್ಣ ದಯವಿಟ್ಟು ಬೇಡ. ಆ ದುಡ್ಡು ಎಲ್ಲಿ ಹೋಯಿತು ಎಂದು ಹೆಂಡತಿ ಕೇಳ್ತಾಳೆ. ದಯವಿಟ್ಟು ಹಣ ವಾಪಾಸು ಮಾಡಿ’ ಎಂದು ಕೋರಿದರು.
ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ವರ್ತೂರು ಸಂತೋಷ್ ರೀ-ಎಂಟ್ರಿ; ಬದಲಾಗಲಿದೆ ಲೆಕ್ಕಾಚಾರ?
‘ನೀವು ಮದುವೆ ಆದವರು. ನಿಮ್ಮ ಹೆಂಡತಿ. ನಿಮ್ಮದೇ ಬ್ಯಾಂಕ್ ಖಾತೆ. ನಾವೇಕೆ ಆ ಬಗ್ಗೆ ತಲೆಕೆಡಿಸಿಕೊಳ್ಳಬೇಕು’ ಎಂದು ಸುದೀಪ್ ನಗುತ್ತಲೇ ಉತ್ತರಿಸಿದರು. ಭಾನುವಾರದ ಎಪಿಸೋಡ್ ಸಖತ್ ಫನ್ ಆಗಿತ್ತು. ಎರಡು ಲಕ್ಷ ರೂಪಾಯಿ ವಿಚಾರ ಕೂಡ ಹಾಸ್ಯದ ರೂಪದಲ್ಲೇ ಹೇಳಿದ್ದು. ಮನೆಯವರು ಇದೇ ಅರ್ಥದಲ್ಲಿ ತೆಗೆದುಕೊಂಡರು.
ರಾತ್ರಿ 9:30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ ಲೈವ್ ಕೂಡ ನೋಡಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:05 am, Mon, 30 October 23