
ಇತ್ತೀಚೆಗೆ ವಿಚ್ಛೇದನ ಅನ್ನೋದು ಸಾಮಾನ್ಯ ಎಂಬಂತಾಗಿ ಬಿಟ್ಟಿದೆ. ಸಿನಿಮಾ ಸೆಲೆಬ್ರಿಟಿಗಳಂತೂ ಈ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದೇ ಇಲ್ಲ. ಈಗ ಇದಕ್ಕೆ ಹೊಸ ಉದಾಹರಣೆಯೊಂದು ಸಿಕ್ಕಿದೆ. ಹಿಂದಿ ಕಿರುತೆರೆ ನಟಿ ಪಲ್ಲವಿ ರಾವ್ ಅವರು ವಿಚ್ಛೇದನ (Divorce) ಪಡೆದಿಕೊಳ್ಳುತ್ತಿದ್ದಾರೆ. ಅವರ ಪತಿ, ನಿರ್ದೇಶಕ ಸೂರಜ್ ರಾವ್ ಅವರಿಂದ ಬೇರೆ ಆಗುವ ಘೋಷಣೆ ಮಾಡಿದ್ದಾರೆ. ಇವರ ದಾಂಪತ್ಯಕ್ಕೆ 22 ವರ್ಷ ತುಂಬಿತ್ತು. ಇವರ ಮಧ್ಯೆ ಹೊಂದಾಣಿಕೆ ಮೂಡಿ ಬಂದಿಲ್ಲ.
ಪಲ್ಲವಿ ಅವರು ಸಂದರ್ಶನ ಒಂದರಲ್ಲಿ ಈ ವಿಚಾರದ ಬಗ್ಗೆ ಹೇಳಿಕೊಂಡಿದ್ದಾರೆ. ತಮ್ಮ ವಿಚ್ಛೇದನಕ್ಕೆ ಹೊಂದಾಣಿಕೆ ಸಮಸ್ಯೆ ಕಾರಣ ಎಂದಿದ್ದಾರೆ. ಕಳೆದ ಕೆಲ ವರ್ಷಗಳಿಂದ ಇವರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಇದ್ದವು. ಇಷ್ಟು ವರ್ಷಗಳ ಕಾಲ ಇದನ್ನು ಸಹಿಸಿಕೊಂಡಿದ್ದರು. ಆದರೆ, ಈಗ ಅವರು ಬೇರೆ ಆಗಲೇಬೇಕು ಎಂದುಕೊಂಡಿದ್ದಾರೆ.
‘ನಮಗೆ 21 ವರ್ಷದ ಮಗಳು ಹಾಗೂ 18 ವರ್ಷದ ಮಗ ಇದ್ದಾನೆ. ನನ್ನ ಹಾಗೂ ಪತಿ ಮಧ್ಯೆ ಹೊಂದಾಣಿಕೆ ತರಲು ಸಾಧ್ಯ ಆಗಲೇ ಇಲ್ಲ. ಕೆಲವೊಮ್ಮೆ ಶಾಂತಿಯುತ ಜೀವನವನ್ನು ಆಯ್ಕೆ ಮಾಡುವುದು ಉತ್ತಮ. ನಾನು ಸೂರಜ್ ಅವರನ್ನು ಗೌರವಿಸುತ್ತೇನೆ ಮತ್ತು ಯಾವಾಗಲೂ ಅವನಿಗೆ ಒಳ್ಳೆಯದನ್ನು ಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ.
ಸೂರಜ್ ರಾವ್ ಅವರು ಹಾಗೂ ಪಲ್ಲವಿ ಸೆಟ್ ಒಂದರಲ್ಲಿ ಭೇಟಿ ಆದರು. ಇಬ್ಬರ ಮಧ್ಯೆ ಪರಿಚಯ ಬೆಳೆದು, ಪ್ರೀತಿ ಮೂಡಿತು. 2003ರಲ್ಲಿ ಇವರು ವಿವಾಹ ಆದರು. ಆಪ್ತರು ಮಾತ್ರ ಮದುವೆಗೆ ಹಾಜರಿ ಹಾಕಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು. ಈಗ ಮಕ್ಕಳನ್ನು ಸಾಕುವ ಜವಾಬ್ದಾರಿಯನ್ನು ಪಲ್ಲವಿ ಅವರೇ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ನಯನತಾರಾ-ವಿಘ್ನೇಶ್ ವಿಚ್ಛೇದನ ನಟಿಯ ಪ್ರತಿಕ್ರಿಯೆ ಏನಿತ್ತು?
ಪಲ್ಲವಿ ಅವರು ಎರಡು ದಶಕಗಳಿಂದ ಸಿನಿಮಾ ರಂಗದಲ್ಲಿ ತೊಡಗಿಕೊಂಡಿದ್ದಾರೆ. ‘ಪಾಂಡ್ಯ ಸ್ಟೋರ್, ‘ಯೇ ಝುಕಿ ಝುಕಿ ಸಿ ನಜರ್’, ‘ಖಯಾಮತ್ ಸೇ ಖಯಾಮತ್’, ‘ದಿಯಾ ಔರ್ ಬಾತಿ ಹಮ್’, ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸೂರಜ್ ಅವರು ಕಿರುತೆರೆ ಧಾರಾವಾಹಿಗಳನ್ನು ನಿರ್ದೇಶನ ಮಾಡುತ್ತಿದ್ದಾರೆ. ‘ಕ್ಯು ಕಿ ಸಾಸ್ ಬಿ ಖಬಿ ಬಹು ಥಿ’, ‘ಶಕ ಲಕ ಬೂಮ್ ಬೂಮ್’ ಮೊದಾಲಾದ ಶೋಗಳನ್ನು ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.