ಕಿರುತೆರೆ ಸೆಲೆಬ್ರಿಟಿ ದಂಪತಿ ಕವಿತಾ ಹಾಗೂ ಚಂದನ್ ಅವರು ಪೋಷಕರಾಗಿದ್ದಾರೆ. ವಿಷ್ಣುವರ್ಧನ್, ಉಪೇಂದ್ರ, ನಟಿ ಶ್ರುತಿ ಅಂಥಹಾ ಸ್ಯಾಂಡಲ್ವುಡ್ ಸೆಲೆಬ್ರೆಟಿಗಳು ಜನಿಸಿರುವ ಸೆಪ್ಟೆಂಬರ್ 18ರಂದೇ ಅವರ ಮೊದಲ ಮಗು ಜನನವಾಗಿದೆ. ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ನಟ ಚಂದನ್. ವಿಡಿಯೋನಲ್ಲಿ ಮಗುವಿನ ಕಾಲನ್ನು ಚಂದನ್ ಹಿಡಿದುಕೊಂಡಿದ್ದಾರೆ. ‘ನನ್ನ ಮುದ್ದು ಕಂದಮ್ಮ ಧರೆಗಿಳಿದಿದ್ದಾನೆ’ ಎಂದು ವಿಡಿಯೋಕ್ಕೆ ಕ್ಯಾಪ್ಷನ್ ನೀಡಿದ್ದಾರೆ. ಅಂದಹಾಗೆ ಈ ತಾರಾ ಜೋಡಿಗೆ ಗಂಡು ಮಗು ಜನನಾಗಿವೆ.
‘ಲಕ್ಷ್ಮಿ ಬಾರಮ್ಮ’ ಧಾರಾವಾಹಿಯಿಂದ ಈ ಜೋಡಿ ಜನಪ್ರಿಯವಾಗಿತ್ತು. ಕೆಲ ವರ್ಷಗಳ ಹಿಂದೆ ಕವಿತಾ ಹಾಗೂ ಚಂದನ್ ವಿವಾಹವಾಗಿದ್ದರು. ಕೆಲ ತಿಂಗಳ ಹಿಂದಷ್ಟೆ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಷಯ ಹಂಚಿಕೊಂಡಿದ್ದರು. ಕೆಲ ದಿನಗಳ ಹಿಂದೆ ಕವಿತಾ ಗೌಡ ಅವರಿಗೆ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಸಹ ಮಾಡಲಾಗಿತ್ತು. ಇದೀಗ ಮೊದಲ ಬಾರಿಗೆ ಈ ಜೋಡಿ ಪೋಷಕರಾಗಿದ್ದಾರೆ. ಚಂದನ್ ಹಂಚಿಕೊಂಡಿರುವ ಮಗುವಿನ ವಿಡಿಯೋಕ್ಕೆ ಹಲವಾರು ಮಂದಿ ಲೈಕ್ ಒತ್ತಿದ್ದು, ಜೋಡಿಗೆ ಶುಭಾಶಯ ಹೇಳಿದ್ದಾರೆ.
ಇದನ್ನೂ ಓದಿ:ಹೇಗಿತ್ತು ನೋಡಿ ನಟಿ ಕವಿತಾ ಗೌಡ ಸೀಮಂತ ಶಾಸ್ತ್ರ; ಇಲ್ಲಿವೆ ಸುಂದರ ಫೋಟೋಗಳು
ಇತ್ತೀಚೆಗೆ ನಡೆದಿದ್ದ ಕವಿತಾರ ಸೀಮಂತ ಶಾಸ್ತ್ರದಲ್ಲಿ ನಟಿ ಶ್ರುತಿ ಸೇರಿದಂತೆ ಹಲವಾರು ಸಿನಿಮಾ ಮತ್ತು ಕಿರುತೆರೆ ತಾರೆಯರು ಭಾಗಿಯಾಗಿದ್ದರು. ನಟಿ ನಮ್ರತಾ ಗೌಡ, ನಟಿ ತನಿಷಾ ಕುಪ್ಪಂಡ ಇನ್ನೂ ಹಲವಾರು ಮಂದಿ ಭಾಗಿಯಾಗಿದ್ದರು. ಈಗಲೂ ಸಹ ಮಗುವಾದ ಬಳಿಕ ಹಲವಾರು ಕಿರುತೆರೆ ತಾರೆಯರು ಈ ಜೋಡಿಗೆ ಶುಭಾಶಯ ಕೋರುತ್ತಿದ್ದಾರೆ. ಅಭಿಮಾನಿಗಳು ಸಹ ಶುಭಾಶಯಗಳನ್ನು ಕೋರುತ್ತಿದ್ದಾರೆ.
ಈ ಜೋಡಿ ಕೋವಿಡ್ ಸಮಯದಲ್ಲಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2021 ರ ಮೇ ತಿಂಗಳಲ್ಲಿ ಮದುವೆಯಾದರು. ಇದೇ ವರ್ಷದ ಮೇ ತಿಂಗಳಲ್ಲಿ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ವಿಷಯ ಹಂಚಿಕೊಂಡಿದ್ದರು. ಇಂದು ಮಗುವಿನ ಆಗಮನ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:39 pm, Wed, 18 September 24