ಈ ವಾರ ದೊಡ್ಮನೆಯಿಂದ ಎಲಿಮಿನೇಟ್ ಆಗೋ ಸ್ಪರ್ಧಿ ಇವರೇ? ಇರಲಿದೆ ಟ್ವಿಸ್ಟ್

|

Updated on: Nov 10, 2023 | 11:11 AM

ಬಿಗ್ ಬಾಸ್​ನಲ್ಲಿ ಪ್ರತಿ ವಾರ ಒಂದು ಎಲಿಮಿನೇಷನ್ ನಡೆಯುತ್ತದೆ. ಕಳೆದ ವಾರ ರಕ್ಷಕ್ ಅವರು ದೊಡ್ಮನೆಯಿಂದ ಔಟ್ ಆಗಿದ್ದರು. ಈ ವಾರ ಬಿಗ್ ಬಾಸ್​ ಮನೆಯಿಂದ ಯಾರು ಹೊರ ಹೋಗುತ್ತಾರೆ ಅನ್ನೋ ಕುತೂಹಲ ಮೂಡಿದೆ. ಹಲವರ ಮೇಲೆ ಎಲಿಮಿನೇಷನ್ ತೂಗುಗತ್ತಿ ಇದೆ.

ಈ ವಾರ ದೊಡ್ಮನೆಯಿಂದ ಎಲಿಮಿನೇಟ್ ಆಗೋ ಸ್ಪರ್ಧಿ ಇವರೇ? ಇರಲಿದೆ ಟ್ವಿಸ್ಟ್
ಬಿಗ್ ಬಾಸ್
Follow us on

ಈ ವರ್ಷ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ (Bigg Boss Kannada) ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವೀಕ್ಷಿಸಲು ಅವಕಾಶ ಇದೆ. ಎಪಿಸೋಡ್​ನಲ್ಲಿ ಏನಾಯಿತು ಎಂಬುದನ್ನು ನೋಡುವುದರ ಜೊತೆ ಮನೆ ಮಂದಿ ಏನು ಮಾಡುತ್ತಿದ್ದಾರೆ ಎಂಬುದನ್ನು ಮೊದಲೇ ತಿಳಿದುಕೊಳ್ಳಬಹುದು. ಈ ರೀತಿ ಲೈವ್ ನೋಡುವ ಸಂದರ್ಭದಲ್ಲಿ ಕೆಲವು ಮುಖ್ಯ ವಿಚಾರಗಳು ಹೊರ ಬೀಳುತ್ತಿವೆ. ಈ ವಾರ ದೊಡ್ಮನೆಯಿಂದ ಹೊರ ಹೋಗೋಕೆ ಒಬ್ಬ ಸ್ಪರ್ಧಿ ರೆಡಿ ಆಗಿದ್ದಾರೆ ಎನ್ನಲಾಗುತ್ತಿದೆ.

ಬಿಗ್ ಬಾಸ್​ನಲ್ಲಿ ಪ್ರತಿ ವಾರ ಒಂದು ಎಲಿಮಿನೇಷನ್ ನಡೆಯುತ್ತದೆ. ಕಳೆದ ವಾರ ರಕ್ಷಕ್ ಅವರು ದೊಡ್ಮನೆಯಿಂದ ಔಟ್ ಆಗಿದ್ದರು. ಈ ವಾರ ಬಿಗ್ ಬಾಸ್​ ಮನೆಯಿಂದ ಯಾರು ಹೊರ ಹೋಗುತ್ತಾರೆ ಅನ್ನೋ ಕುತೂಹಲ ಮೂಡಿದೆ. ಹಲವರ ಮೇಲೆ ಎಲಿಮಿನೇಷನ್ ತೂಗುಗತ್ತಿ ಇದೆ.

ಈಶಾನಿ, ನಮ್ರತಾ ಗೌಡ, ಸ್ನೇಹಿತ್, ನೀತು ವನಜಾಕ್ಷಿ, ವರ್ತೂರ್ ಸಂತೋಷ್, ತುಕಾಲಿ ಸಂತೋಷ್ ಹಾಗೂ ಕಾರ್ತಿಕ್ ಮಹೇಶ್ ಅವರು ಈ ವಾರ ನಾಮಿನೇಟ್ ಆಗಿದ್ದಾರೆ. ಜಿಯೋ ಸಿನಿಮಾದಲ್ಲಿ ವೋಟ್ ಮಾಡೋಕೆ ಅವಕಾಶ ಇದೆ. ಅನೇಕರು ಈಶಾನಿ ಅಥವಾ ನೀತು ಮನೆಯಿಂದ ಹೊರ ಹೋಗಬಹುದು ಎಂದು ಊಹಿಸುತ್ತಿದ್ದಾರೆ. ಆದರೆ, ಊಹೆ ತಪ್ಪಾಗಬಹುದು ಎನ್ನುತ್ತಿವೆ ಸ್ಪರ್ಧಿಗಳು ಆಡಿದ ಮಾತು. ತುಕಾಲಿ ಸಂತೋಷ್ ಬಳಿ ಮಾತನಾಡಿದ್ದ ವರ್ತೂರು ಸಂತೋಷ್, ‘ನಾನ್ ಬಿಡು.. ನಂಗೆ ಹೋಗೋದು ಅನಿವಾರ್ಯ ಆಗಿದೆ’ ಎಂದಿದ್ದಾರೆ. ಅವರ ಈ ಹೇಳಿಕೆ ಸಾಕಷ್ಟು ಅನುಮಾನ ಮೂಡಿಸಿದೆ.

ಇದನ್ನೂ ಓದಿ: ‘ನಿಮ್ಮ ಮೇಲಿದ್ದ ಗೌರವ ಹೋಯಿತು’; ಮೈಕೆಲ್ ಕಳ್ಳಾಟದ ಬಗ್ಗೆ ವೀಕ್ಷಕರಿಗೆ ಬೇಸರ

ಹುಲಿ ಉಗುರು ಹೊಂದಿರುವ ಪ್ರಕರಣದಲ್ಲಿ ವರ್ತೂರು ಸಂತೋಷ್ ಅವರು ಇತ್ತೀಚೆಗೆ ಅರೆಸ್ಟ್ ಆದರು. ಬಿಗ್ ಬಾಸ್​ನಲ್ಲಿ ಇದ್ದಾಗಲೇ ಅವರ ಬಂಧನಕ್ಕೆ ಆದೇಶ ಬಂತು. ಹೊರಗೆ ಕರೆತಂದು ಅವರ ಬಂಧಿಸಲಾಯಿತು. ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು. ಜಾಮೀನು ಪಡೆದ ಹೊರ ಬಂದ ಅವರು ಮರಳಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅವರಿಗೆ ಈಗ ಹೊರಗೆ ಬರೋ ಅನಿವಾರ್ಯತೆ ಮೂಡಿದೆಯೇ ಎನ್ನುವ ಪ್ರಶ್ನೆ ಕಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ