‘ನಿಮ್ಮ ಮೇಲಿದ್ದ ಗೌರವ ಹೋಯಿತು’; ಮೈಕೆಲ್ ಕಳ್ಳಾಟದ ಬಗ್ಗೆ ವೀಕ್ಷಕರಿಗೆ ಬೇಸರ
ಮೈಕೆಲ್ ಅಜಯ್ಗೆ ತಂಡದ ನಾಯಕನಾಗಬೇಕು ಎನ್ನುವ ಆಸೆ ಇತ್ತು. ಆದರೆ, ಆ ರೀತಿ ಆಗಿಲ್ಲ. ಎಲ್ಲರೂ ಸೇರಿ ಡ್ರೋನ್ ಪ್ರತಾಪ್ ಅವರನ್ನು ತಂಡದ ನಾಯಕನನ್ನಾಗಿ ಸೆಲೆಕ್ಟ್ ಮಾಡಿದರು. ಇದರಿಂದ ಮೈಕೆಲ್ ಅವರು ಸಿಟ್ಟಾದರು.
ಮೈಕೆಲ್ ಅಜಯ್ (Michael Ajay) ಅವರು ಅನೇಕರಿಗೆ ಇಷ್ಟ ಆಗುತ್ತಿದ್ದರು. ಆದರೆ, ಈ ವಾರ ಅವರು ನಡೆದುಕೊಂಡ ರೀತಿ ವೀಕ್ಷಕರಿಗೆ ಸ್ವಲ್ಪವೂ ಹಿಡಿಸಲಿಲ್ಲ. ಎದುರಾಳಿ ತಂಡಕ್ಕೆ ತಮ್ಮ ತಂಡದ ರಹಸ್ಯಗಳನ್ನು ಬಿಟ್ಟುಕೊಟ್ಟಿದ್ದರು. ಅಷ್ಟೇ ಅಲ್ಲ, ಅಗತ್ಯ ಬಿದ್ದಾಗ ಮಾತ್ರ ಆಟ ಆಡಿ ಕ್ಯಾಪ್ಟನ್ ಆದರು. ಈ ವಾರ ಸುದೀಪ್ ಅವರು ಈ ವಿಚಾರದ ಬಗ್ಗೆ ವೀಕೆಂಡ್ನಲ್ಲಿ ಮಾತನಾಡಬೇಕು ಎಂದು ಅನೇಕರು ಒತ್ತಾಯ ಮಾಡಿದ್ದಾರೆ.
ಮೈಕೆಲ್ ಅಜಯ್ಗೆ ತಂಡದ ನಾಯಕನಾಗಬೇಕು ಎನ್ನುವ ಆಸೆ ಇತ್ತು. ಆದರೆ, ಆ ರೀತಿ ಆಗಿಲ್ಲ. ಎಲ್ಲರೂ ಸೇರಿ ಡ್ರೋನ್ ಪ್ರತಾಪ್ ಅವರನ್ನು ತಂಡದ ನಾಯಕನನ್ನಾಗಿ ಸೆಲೆಕ್ಟ್ ಮಾಡಿದರು. ಇದರಿಂದ ಮೈಕೆಲ್ ಅವರು ಸಿಟ್ಟಾದರು. ‘ನಾನು ಈ ವಾರ ಪರ್ಫಾರ್ಮೆನ್ಸ್ ಮಾಡಲ್ಲ. ಎಷ್ಟು ಬೇಕೋ ಅಷ್ಟೇ ಮಾಡ್ತೀನಿ’ ಎಂದರು ಮೈಕೆಲ್. ಅದರಂತೆ ನಡೆದುಕೊಂಡರು ಕೂಡ!
‘ಗಂಧದಗುಡಿ’ ಹಾಗೂ ‘ವಜ್ರಕಾಯ’ ಹೆಸರಿನ ಎರಡು ತಂಡಗಳು ಇದ್ದವು. ಗಂಧದಗುಡಿ ತಂಡದಲ್ಲಿದ್ದ ಮೈಕೆಲ್ ಅವರು ಬಹುತೇಕ ಟಾಸ್ಕ್ನಲ್ಲಿ ಆಟ ಆಡದೆ ಉಸ್ತುವಾರಿ ವಹಿಸಿಕೊಂಡಿದ್ದರು. ಇದನ್ನೂ ಅವರು ಸರಿಯಾಗಿ ನಿರ್ವಹಿಸಿಲ್ಲ. ನೀರು ತುಂಬಿದ ಬಲೂನ್ ಒಡೆಯುವ ಟಾಸ್ಕ್ನಲ್ಲಂತೂ ಅವರು ಎದುರಾಳಿ ತಂಡಕ್ಕೆ ತಮ್ಮ ಸ್ಟ್ರೆಟಜಿಗಳನ್ನು ಹೇಳಿಕೊಟ್ಟರು. ಹಾಗೆ ಮಾಡಬೇಕು, ಹೀಗೆ ಮಾಡಬೇಕು ಎಂಬುದನ್ನು ವಿವರಿಸಿದರು. ಉಸ್ತುವಾರಿ ಮಾಡುವ ಸಂದರ್ಭದಲ್ಲಿ ಈಶಾನಿ ಪ್ರೇಮದ ಬಲೆಗೆ ಬಿದ್ದು ಮನ ಬಂದಂತೆ ನಿರ್ಧಾರ ತೆಗೆದುಕೊಂಡರು. ಇದರಿಂದ ಎರಡೂ ತಂಡಕ್ಕೆ ನಷ್ಟ ಉಂಟಾಯಿತು.
ಇದನ್ನೂ ಓದಿ: ಬಿಗ್ ಬಾಸ್ ಎಫೆಕ್ಟ್: ‘ಸೀತಾ ರಾಮ’ ಧಾರಾವಾಹಿ ಟಿಆರ್ಪಿಯಲ್ಲಿ ಇಳಿಕೆ; ಇಲ್ಲಿದೆ ವಿವರ
ಇನ್ನು, ಆರು ಮಂದಿಯ ಪೈಕಿ ಕ್ಯಾಪ್ಟನ್ಸಿ ಟಾಸ್ಕ್ಗೆ ಇಬ್ಬರನ್ನು ಆಯ್ಕೆ ಮಾಡಬೇಕಿತ್ತು. ಆ ಸಂದರ್ಭದಲ್ಲಿ ಅವರು ಒಳ್ಳೆಯ ರೀತಿಯಲ್ಲಿ ಪರ್ಫಾರ್ಮೆನ್ಸ್ ನೀಡಿ ಪ್ರಮುಖರನ್ನು ಹೊರಗಿಟ್ಟರು. ಈ ಮೂಲಕ ಕ್ಯಾಪ್ಟನ್ಸಿ ಟಾಸ್ಕ್ಗೆ ಅರ್ಹರಾದರು. ಎದುರಾಳಿಯಾಗಿ ಭಾಗ್ಯಶ್ರೀ ಅವರನ್ನು ಆಯ್ಕೆ ಮಾಡಿದರು. ಇದು ಡ್ರೋನ್ ಪ್ರತಾಪ್ ಅವರಿಗೆ ಬೇಸರ ಮೂಡಿಸಿತು. ‘ಅವಕಾಶ ನೀಡದೇ ಪ್ರೂವ್ ಮಾಡಿಕೊಳ್ಳಬೇಕು ಎಂದರೆ ಹೇಗೆ’ ಎಂದು ಪ್ರತಾಪ್ ಪ್ರಶ್ನೆ ಮಾಡಿದ್ದಾರೆ. ನಂತರ ಭಾಗ್ಯಶ್ರೀ ಅವರನ್ನು ಸೋಲಿಸಿ ಕ್ಯಾಪ್ಟನ್ ಆಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ-ಜಿಯೋ ಸಿನಿಮಾದಲ್ಲಿ ಎಪಿಸೋಡ್ ವಿಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:40 am, Fri, 10 November 23