ಬೆಳೆಯುವಾಗ ಅಡ್ಡಗಾಲು ಹಾಕ್ತಾರೆ: ಕಣ್ಣೀರಿಟ್ಟ ನಟ ವರುಣ್ ಆರಾಧ್ಯ

Varun Aradhya: ಧಾರಾವಾಹಿ ನಟ ವರುಣ್ ಆರಾಧ್ಯ ವಿರುದ್ಧ ಮಾಜಿ ಪ್ರೇಯಸಿ ಬೆದರಿಕೆ ದೂರು ನೀಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು, ಈ ಬಗ್ಗೆ ಸ್ಪಷ್ಟನೆ ನೀಡಿರುವ ವರುಣ್ ಆರಾಧ್ಯಾ ಆರೋಪಗಳು ಸುಳ್ಳು ಎಂದಿದ್ದಾರೆ. ಕಣ್ಣೀರು ಹಾಕುತ್ತಾ ಮನವಿ ಸಹ ಮಾಡಿದ್ದಾರೆ.

ಬೆಳೆಯುವಾಗ ಅಡ್ಡಗಾಲು ಹಾಕ್ತಾರೆ: ಕಣ್ಣೀರಿಟ್ಟ ನಟ ವರುಣ್ ಆರಾಧ್ಯ
ವರುಣ್ ಆರಾಧ್ಯ
Follow us
ಮಂಜುನಾಥ ಸಿ.
|

Updated on: Sep 13, 2024 | 10:35 AM

ನಟ ವರುಣ್ ಆರಾಧ್ಯ, ಮಾಜಿ ಪ್ರೇಯಸಿಯ ಖಾಸಗಿ ವಿಡಿಯೋಗಳನ್ನು ಲೀಕ್ ಮಾಡುವ ಬೆದರಿಕೆ ಒಡ್ಡಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿತ್ತು, ಆದರೆ ಬಳಿಕ ಆ ಯುವತಿಯೇ ಅದು ಸುಳ್ಳು ಸುದ್ದಿ ಎಂದಿದ್ದೂ ಆಯ್ತು. ಅದಾದ ಬಳಿಕ ನಿನ್ನೆ ವಿಡಿಯೋ ಮಾಡಿ ಅದನ್ನು ಯೂಟ್ಯೂಬ್​ನಲ್ಲಿ ಶರಣ್ ಆರಾಧ್ಯ, ಕಣ್ಣೀರು ಹಾಕುತ್ತಾ ತನ್ನ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. ‘ಬೆಳೆಯುವ ಸಮಯದಲ್ಲಿ ಅಡ್ಡಗಾಲು ಹಾಕುವ ಪ್ರಯತ್ನ ಮಾಡುತ್ತಲೇ ಇದ್ದಾರೆ, ಹಾಗೆ ಮಾಡಬೇಡಿ’ ಎಂದು ಮನವಿ ಮಾಡಿದ್ದಾರೆ.

ವರ್ಷಾ ಕಾವೇರಿ, ವರುಣ್ ಆರಾಧ್ಯ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು, ಖಾಸಗಿ ಫೊಟೊಗಳನ್ನು ಲೀಕ್ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಎಫ್​ಐಆರ್ ದಾಖಲಾಗಿದೆ ಎಂದು ವರದಿಯಾಗಿತ್ತು. ಆದರೆ ವರದಿಗಳು ಪ್ರಸಾರವಾದ ಬಳಿಕ, ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ವರ್ಷಾ, ಆರೋಪ ಸುಳ್ಳು, ತಾನು ಹಾಗೆ ದೂರು ನೀಡಿಲ್ಲ ಎಂದಿದ್ದರು.

ಇದನ್ನೂ ಓದಿ:‘ವರುಣ್ ಆರಾಧ್ಯ ಬ್ಲ್ಯಾಕ್​ಮೇಲೆ ಮಾಡಿಲ್ಲ’; ಉಲ್ಟಾ ಹೊಡೆದ್ರಾ ವರ್ಷಾ ಕಾವೇರಿ?

ಬಳಿಕ ವರುಣ್ ಆರಾಧ್ಯ ಮಾಡಿರುವ ವಿಡಿಯೋನಲ್ಲಿ, ಬಹಳ ವರ್ಷಗಳಿಂದ ನಾನು ಮತ್ತು ವರ್ಷಾ ಒಟ್ಟಿಗೆ ಇನ್​ಸ್ಟಾಗ್ರಾಂ ರೀಲ್ಸ್ ಮಾಡುತ್ತಿದ್ದೆವು, ಅವರ ಹಲವಾರು ಚಿತ್ರಗಳು, ಒಟ್ಟಿಗೆ ಮಾಡಿದ್ದ ರೀಲ್ಸ್ ವಿಡಿಯೋಗಳು ನನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿವೆ. ಈಗ ನಾವು ದೂರಾಗಿದ್ದೆವೆ, ಹಾಗಾಗಿ ಅವುಗಳನ್ನು ತೆಗೆಯುವಂತೆ ವರ್ಷಾ ಹೇಳಿದ್ದಳು, ಆದರೆ ನನಗೆ ಸಮಯ ಸಿಗದ ಕಾರಣ ನಾನು ಅವುಗಳನ್ನು ತೆಗೆದಿರಲಿಲ್ಲ, ಅದೇ ವಿಷಯವಾಗಿ ವರ್ಷಾ ವಕೀಲರ ಸಮ್ಮುಖದಲ್ಲಿ ಮಾತನಾಡಿ, ಚಿತ್ರಗಳನ್ನು ತೆಗೆಯುವಂತೆ ಸೂಚಿಸಲಾಯ್ತು. ವರ್ಷಾಗೆ ಮದುವೆ ನಿಶ್ಚಯವಾಗುತ್ತಿದ್ದು, ಅದಕ್ಕೆ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ಚಿತ್ರಗಳನ್ನು ತೆಗೆಯಲು ಹೇಳಿದ್ದರು ಅಷ್ಟೆ. ವಿನಃ ಯಾವುದೇ ಬೆದರಿಕೆ ಆಗಲಿ, ಖಾಸಗಿ ಫೊಟೊಗಳಾಗಲಿ ಇಲ್ಲ ಎಂದಿದ್ದಾರೆ ವರುಣ್ ಆರಾಧ್ಯ.

ವಿಡಿಯೋದಲ್ಲಿ ಕಣ್ಣೀರು ಹಾಕಿರುವ ವರುಣ್ ಆರಾಧ್ಯಾ, ‘ಜೀವನದಲ್ಲಿ ಬೆಳೆಯುತ್ತಿರುವ ಸಮಯದಲ್ಲಿ ಪದೇ ಪದೇ ಬಂದು ಅಡ್ಡಗಾಲು ಹಾಕುತ್ತಿದ್ದೀರಿ’ ಎಂದಿದ್ದಾರೆ. ‘ಬೃಂದಾವನ ಸೀರಿಯಲ್ ನಲ್ಲಿ ನಟಿಸುತ್ತಿರುವ ಖ್ಯಾತ ನಟ ವರುಣ್ ಆರಾಧ್ಯ, ಕೊಲೆ ಬೆದರಿಕೆ, ಬ್ಲ್ಯಾಕ್​ ಮೇಲ್ ಮಾಡಿದ್ದಾನೆ, ಆತನ ವಿರುದ್ಧ ದೂರು ದಾಖಲಾಗಿದೆ, ಅರೆಸ್ಟ್ ಮಾಡಲಾಗಿದೆ. ಎಫ್‌ಐಆರ್ ಹಾಕಿದ್ದಾರೆ, ಜೈಲಿಗೆ ಹಾಕಿದ್ದಾರೆ ಎಂದೆಲ್ಲ ಪ್ರಸಾರವಾಗುತ್ತಿದೆ. ಈ ಸುಳ್ಳು ಸುದ್ದಿಗಳನ್ನು ಯಾಕೆ ಹಾಕುತ್ತಿದ್ದೀರ ಎಂಬುದು ಅರ್ಥವಾಗುತ್ತಿಲ್ಲ. ನಾನು ಆರಾಮಾಗಿ ಮನೆಯಲ್ಲೇ ಇದ್ದೀನಿ. ಅವರ ಪಾಡಿಗೆ ಅವರು ಇದ್ದಾರೆ. ಸುದ್ದಿ ಹಾಕುವಾಗ ಏನಾಗಿದೆ ಅಂತ ನಮ್ಮನ್ನು ಕೇಳಿಕೊಂಡು ಹಾಕಿ. ನಾವೇನು ಮಾಡಿದ್ದೀವಿ ಅಂತ ನಮ್ಮನ್ನು ಕೇಳಿ, ನಾವೇ ಹೇಳುತ್ತೀವಿ’ ಎಂದು ಮನವಿ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ