‘ವರುಣ್ ಆರಾಧ್ಯ ಬ್ಲ್ಯಾಕ್​ಮೇಲೆ ಮಾಡಿಲ್ಲ’; ಉಲ್ಟಾ ಹೊಡೆದ್ರಾ ವರ್ಷಾ ಕಾವೇರಿ?

ಧಾರಾವಾಹಿ ನಟ ವರುಣ್​ ಆರಾಧ್ಯ ವಿರುದ್ಧ ಐಟಿ ಕಾಯ್ದೆ ಅನ್ವಯ ಕೇಸ್​ ದಾಖಲು ಮಾಡಿಕೊಳ್ಳಲಾಗಿದೆ. ಪೊಲೀಸರು ವಿಚಾರಣೆ ಕೂಡ ಆರಂಭಿಸಿದ್ದಾರೆ. ವರ್ಷಾ ಕಾವೇರಿ ಹುಡುಗಿಯ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್​ಮೇಲ್​ ಮಾಡಿದ ಆರೋಪ ವರುಣ್​ ಆರಾಧ್ಯ ಮೇಲಿದೆ. ಈ ಬಗ್ಗೆ ವರ್ಷಾ ಸ್ಪಷ್ಟನೆ ನೀಡಿದ್ದಾರೆ.

‘ವರುಣ್ ಆರಾಧ್ಯ ಬ್ಲ್ಯಾಕ್​ಮೇಲೆ ಮಾಡಿಲ್ಲ’; ಉಲ್ಟಾ ಹೊಡೆದ್ರಾ ವರ್ಷಾ ಕಾವೇರಿ?
ವರುಣ್-ವರ್ಷಾ
Follow us
|

Updated on: Sep 12, 2024 | 11:35 AM

ವರುಣ್ ಆರಾಧ್ಯ ಅವರು ಸದ್ಯ ಸುದ್ದಿಯಲ್ಲಿ ಇದ್ದಾರೆ. ರೀಲ್ಸ್ ಮೂಲಕ ಫೇಮಸ್ ಆಗಿದ್ದ ಇವರು ನಂತರ ಕಲರ್ಸ್ ಕನ್ನಡದ ‘ಬೃಂದಾವನ’ ಧಾರಾವಾಹಿಯಲ್ಲಿ ನಟಿಸಿದರು. ಈಗ ಅವರು ಮಾಜಿ ಗೆಳೆತಿ ವರ್ಷಾ ಕಾವೇರಿಗೆ ಬ್ಲ್ಯಾಕ್​ಮೇಲೆ ಮಾಡುತ್ತಿದ್ದಾರೆ ಎಂದು ವರದಿ ಆಗಿತ್ತು. ಆದರೆ, ಆ ರೀತಿ ಇಲ್ಲ ಎಂದು ವರ್ಷಾ ಕಾವೇರಿ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ. ತಾವು ದೂರು ನೀಡಿದ್ದು ಏಕೆ ಎಂಬ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ವರುಣ್ ಆರಾಧ್ಯ ರೀಲ್ಸ್ ಮೂಲಕ ಫೇಮಸ್ ಆದರು. ವರ್ಷಾ ಕಾವೇರಿ ಜೊತೆ ಪರಿಚಯ ಬೆಳೆದಿದ್ದು ಕೂಡ ಸೋಶಿಯಲ್ ಮೀಡಿಯಾದಿಂದಲೇ. ಇಬ್ಬರೂ ಹಲವು ವರ್ಷ ಪ್ರೀತಿಯಲ್ಲಿ ಇದ್ದರು. ಆ ಬಳಿಕ ಬ್ರೇಕಪ್ ಮಾಡಿಕೊಳ್ಳೋ ನಿರ್ಧಾರಕ್ಕೆ ಬಂದರು. ಹೀಗಿರುವಾಗಲೇ ವರುಣ್ ಆರಾಧ್ಯ ವಿರುದ್ಧ ವರ್ಷಾ ಕಾವೇರಿ ದೂರು ನೀಡಿದ್ದರು. ‘ಖಾಸಗಿ ಫೋಟೋ ಇಟ್ಟುಕೊಂಡು ವರುಣ್ ಬೆದರಿಸುತ್ತಿದ್ದಾನೆ’ ಎಂಬುದಾಗಿ ವರ್ಷಾ ದೂರು ನೀಡಿರುವುದಾಗಿ ವರದಿ ಆಗಿತ್ತು. ಆದರೆ, ಇದು ಸುಳ್ಳು ಎಂದು ವರ್ಷಾ ಹೇಳಿದ್ದಾರೆ.

‘ಎಲ್ಲಕಡೆ ವೈರಲ್ ಆಗಿರುವುದು ಸುಳ್ಳು ಮಾಹಿತಿ. ನಾನು ಇನ್​ಸ್ಟಾಗ್ರಾಮ್ ಪ್ರೊಫೈಲ್ ಮತ್ತು ಇತರ ಸಾಮಾಜಿಕ ಜಾಲತಾಣಗಳಿಂದ ರೀಲ್ಸ್​ಗಳನ್ನು ತೆಗೆಯುವುದರ ಕುರಿತಾಗಿದೆ. ನಕಲಿ ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸಿ. ಮೂರು ದಿನ ಕಾಯಿರಿ. ನಾನು ಕ್ಲ್ಯಾರಿಟಿಯೊಂದಿಗೆ ಬರುತ್ತೇನೆ’ ಎಂದಿದ್ದಾರೆ ವರ್ಷಾ.

ಇದನ್ನೂ ಓದಿ: ಯುವತಿಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್​ಮೇಲ್; ಕಿರುತೆರೆ ನಟ ವರುಣ್ ಆರಾಧ್ಯ ವಿರುದ್ಧ ಕೇಸ್

2019ರಲ್ಲಿ ಸಾಮಾಜಿಕ ‌ಜಾಲತಾಣದಲ್ಲಿ‌ ವರುಣ್ ಹಾಗೂ ವರ್ಷಾ ಕಾವೇರಿ ಮಧ್ಯೆ ಪರಿಚಯ ಬೆಳೆಯಿತು. ಸುಮಾರು ‌ನಾಲ್ಕು ವರ್ಷಗಳ ಕಾಲ ಪರಸ್ಪರ ‌ಪ್ರೀತಿ‌ಯಲ್ಲಿದ್ದ ಜೋಡಿಯ ನಡುವೆ ನಂತರ ಬಿರುಕು ಮೂಡಿತು. ಈಗ ಅದೇ ಹುಡುಗಿಯ ಫೋಟೋ ಇಟ್ಟುಕೊಂಡು ವರುಣ್ ಬ್ಲ್ಯಾಕ್​ಮೇಲ್ ಮಾಡುತ್ತಿದ್ದಾರೆ ಎಂದು ವರದಿ ಆಗಿತ್ತು. ಮುಂದಿನ ದಿನಗಳಲ್ಲಿ ಲೈವ್​​ನಲ್ಲಿ ಬಂದು ವರ್ಷಾ ಈ ಬಗ್ಗೆ ಸ್ಪಷ್ಟನೆ ಕೊಡುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದ ಪ್ರಸನ್ನಾನಂದಪುರಿ ಸ್ವಾಮೀಜಿ
ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದ ಪ್ರಸನ್ನಾನಂದಪುರಿ ಸ್ವಾಮೀಜಿ
ಟೋಲ್​ನಲ್ಲಿ ಲಾರಿ ನಿಲ್ಲಿಸಲು ಪ್ರಯತ್ನಿಸಿದ ಟೋಲ್ ಪ್ಲಾಜಾ ಸಿಬ್ಬಂದಿಯ ಹತ್ಯೆ
ಟೋಲ್​ನಲ್ಲಿ ಲಾರಿ ನಿಲ್ಲಿಸಲು ಪ್ರಯತ್ನಿಸಿದ ಟೋಲ್ ಪ್ಲಾಜಾ ಸಿಬ್ಬಂದಿಯ ಹತ್ಯೆ
ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್
ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್
ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?
ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?
ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್
ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್
ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ
ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ
ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ
ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಹಿಂದಿನ ಸತ್ಯಾಂಶ ಮುಚ್ಚಿಟ್ಟ ಶಿವಕುಮಾರ್
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಹಿಂದಿನ ಸತ್ಯಾಂಶ ಮುಚ್ಚಿಟ್ಟ ಶಿವಕುಮಾರ್
ದರ್ಶನ್-ಪವಿತ್ರಾ ಜಾಮೀನು ಅರ್ಜಿ ವಿಚಾರಣೆ LIVE
ದರ್ಶನ್-ಪವಿತ್ರಾ ಜಾಮೀನು ಅರ್ಜಿ ವಿಚಾರಣೆ LIVE