AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವತಿಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್​ಮೇಲ್; ಕಿರುತೆರೆ ನಟ ವರುಣ್ ಆರಾಧ್ಯ ವಿರುದ್ಧ ಕೇಸ್

ಧಾರಾವಾಹಿ ನಟ ವರುಣ್​ ಆರಾಧ್ಯ ವಿರುದ್ಧ ಐಟಿ ಕಾಯ್ದೆ ಅನ್ವಯ ಕೇಸ್​ ದಾಖಲು ಮಾಡಿಕೊಳ್ಳಲಾಗಿದ್ದು, ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಪ್ರೀತಿಸಿದ ಹುಡುಗಿಯ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್​ಮೇಲ್​ ಮಾಡಿದ ಆರೋಪ ವರುಣ್​ ಆರಾಧ್ಯ ಮೇಲಿದೆ. ನಟನ ಫೋನ್​ನಲ್ಲಿ ಇನ್ನೋರ್ವ ಯುವತಿಯ ಖಾಸಗಿ ಫೋಟೋಗಳು ಇವೆ ಎನ್ನಲಾಗಿದೆ.

ಯುವತಿಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್​ಮೇಲ್; ಕಿರುತೆರೆ ನಟ ವರುಣ್ ಆರಾಧ್ಯ ವಿರುದ್ಧ ಕೇಸ್
ವರುಣ್ ಆರಾಧ್ಯ
ಪ್ರಜ್ವಲ್​ ಕುಮಾರ್ ಎನ್​ ವೈ
| Updated By: ಮದನ್​ ಕುಮಾರ್​|

Updated on: Sep 11, 2024 | 5:37 PM

Share

ಕಿರುತೆರೆಯ ಸೀರಿಯಲ್​ಗಳಲ್ಲಿ ನಟಿಸಿರುವ ವರುಣ್​ ಆರಾಧ್ಯ ವಿರುದ್ಧ ಗಂಭೀರ ಆರೋಪ ಎದುರಾಗಿದೆ. ಪ್ರೀತಿಸಿದ ಯುವತಿಯ ಖಾಸಗಿ ಫೋಟೋ ಇಟ್ಟುಕೊಂಡು ಈತ ಬ್ಲ್ಯಾಕ್​ಮೇಲ್ ಮಾಡಿದ್ದಾನೆ ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪಶ್ಚಿಮ ವಿಭಾಗದ CEN​ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಐಟಿ ಕಾಯ್ದೆ ಅನ್ವಯ ವರುಣ್ ಆರಾಧ್ಯ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ. ಈ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ವರುಣ್ಯ ಆರಾಧ್ಯ ನಂತರ ಬ್ರೇಕಪ್ ಮಾಡಿಕೊಂಡಿದ್ದ. ಈಗ ಬೇರೊಬ್ಬ ಯುವತಿಯನ್ನು ಪ್ರೀತಿಸುತ್ತಿದ್ದಾನೆ ಎನ್ನಲಾಗಿದೆ. ಬ್ರೇಕಪ್​ ಆದರೂ ಫೋಟೋ ಇಟ್ಟುಕೊಂಡು ಬ್ಲ್ಯಾಕ್​ಮೇಲ್ ಮಾಡಿದ ಆರೋಪದಲ್ಲಿ ಕೇಸ್​ ದಾಖಲಾಗಿದೆ.

2019ರಲ್ಲಿ ಸಾಮಾಜಿಕ ‌ಜಾಲತಾಣದಲ್ಲಿ‌ ಪರಿಚಯವಾಗಿದ್ದ‌ ಯುವತಿಯ ಜತೆ ನಟ ವರುಣ್​ ಆರಾಧ್ಯ ಪ್ರೀತಿಯಲ್ಲಿ ಬಿದ್ದಿದ್ದ. ಜಾಲತಾಣದ ಮಾರ್ಕೆಟಿಂಗ್ ‌ಮಾಡ್ತಿದ್ದ ಯುವತಿಯನ್ನು ಪ್ರೀತಿಸಿ ವಂಚನೆ ಮಾಡಿದ್ದಾನೆ ಎಂಬ ಆರೋಪ ಎದುರಾಗಿದೆ. ಸುಮಾರು ‌ನಾಲ್ಕು ವರ್ಷಗಳ ಕಾಲ ಪರಸ್ಪರ ‌ಪ್ರೀತಿ‌ಯಲ್ಲಿದ್ದ ಜೋಡಿಯ ನಡುವೆ ನಂತರ ಬಿರುಕು ಮೂಡಿತು. ಖಾಸಗಿ ಫೋಟೋವನ್ನು ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್​ಮೇಲ್ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್​ಮೇಲ್ ಮಾಡಿದ್ದಕ್ಕೆ ಮಹಿಳೆ ಆತ್ಮಹತ್ಯೆ​; ‘ಪುಷ್ಪ’ ಚಿತ್ರದ ನಟ ಅರೆಸ್ಟ್​

2023ರಲ್ಲಿ ವರುಣ್ ಮೊಬೈಲ್​ ‌ನೋಡುವಾಗ ಯುವತಿಗೆ‌ ಆಘಾತ ಆಯಿತು. ಫೋನ್​ನಲ್ಲಿ‌ ಮತ್ತೊಬ್ಬ ‌ಯುವತಿಯ ಜೊತೆಗಿದ್ದ ಖಾಸಗಿ ‌ಫೋಟೋ ಪತ್ತೆ ಆದವು. ಈ‌ ಬಗ್ಗೆ ಪ್ರಶ್ನೆ ಮಾಡಿ ಬ್ರೇಕಪ್ ಮಾಡಿಕೊಳ್ಳಲು ಯುವತಿ ಮುಂದಾದಾಗ ಬೇರೆ ಹುಡುಗಿ ಜೊತೆಗಿನ ಸಂಪರ್ಕದ ಬಗ್ಗೆ ಮಾಹಿತಿ ಬಹಿರಂಗ ಮಾಡದಂತೆ ಬೆದರಿಕೆ ಹಾಕಿದ್ದಾನೆ. ಖಾಸಗಿ ಫೋಟೋ ಬಗ್ಗೆ ಬಾಯಿಬಿಡದಂತೆ ಮಾಜಿ‌ ಪ್ರಿಯತಮೆಗೆ ಧಮ್ಕಿ ಹಾಕಿದ್ದಾನೆ.

ಇದನ್ನೂ ಓದಿ: ‘ಆತಂಕ ಬೇಡ, ನಾನು ಆರೋಗ್ಯವಾಗಿದ್ದೇನೆ’; ಹೆಲ್ತ್​ ಬಗ್ಗೆ ಅಪ್​ಡೇಟ್ ಕೊಟ್ಟ ಕಿರಣ್ ರಾಜ್

ಪ್ರೀತಿಸಿದ ಯುವತಿಗೆ ತನ್ನ ಜೊತೆಯಲ್ಲಿರುವ ಖಾಸಗಿ ‌ಫೋಟೋ ಕಳುಹಿಸಿ‌ ಬ್ಲ್ಯಾಕ್​ಮೇಲ್ ಮಾಡಿದ್ದಾನೆ. ‘ನನ್ನ ಬಳಿ ನಿನ್ನ ಜೊತೆಗಿರುವ ಖಾಸಗಿ ‌ಫೋಟೋ‌, ವಿಡಿಯೋಗಳಿವೆ. ನೀ‌ನು‌ ನನ್ನ ವಿಚಾರ ಬಾಯಿಬಿಟ್ಟರೆ‌ ಖಾಸಗಿ ಪೋಟೋ ಹರಿಬಿಡ್ತೇನೆ. ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್​ ಮಾಡುತ್ತೇನೆ’ ಎಂದು ಬ್ಲ್ಯಾಕ್​ಮೇಲ್ ಮಾಡಿದ್ದಾನೆ. ಈ ದೂರಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!