‘ವೈದ್ಯರ ಸಲಹೆ ಮೇರೆಗೆ ವಿನಯ್ ಆಡುವಂತಿಲ್ಲ’; ಗಾಯಗೊಂಡಿತು ಆನೆ

|

Updated on: Dec 21, 2023 | 8:08 AM

ಟಾಸ್ಕ್​ನಲ್ಲಿ ವಿನಯ್ ಅವರು ಗಾಯಗೊಂಡಿದ್ದಾರೆ. ಅವರ ಬೆರಳಿಗೆ ತೀವ್ರವಾಗಿ ಗಾಯ ಆಗಿದೆ. ಕಾರ್ತಿಕ್ ಕೂಡ ಗಾಯಗೊಂಡಿದ್ದಾರೆ. ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಹೀಗಾಗಿ ಮಲಗಿ ಅವರು ರೆಸ್ಟ್ ಮಾಡುತ್ತಿದ್ದಾರೆ.

‘ವೈದ್ಯರ ಸಲಹೆ ಮೇರೆಗೆ ವಿನಯ್ ಆಡುವಂತಿಲ್ಲ’; ಗಾಯಗೊಂಡಿತು ಆನೆ
ವಿನಯ್
Follow us on

ಬಿಗ್​ ಬಾಸ್​ನಲ್ಲಿ (Bigg Boss) ಗಾಯಗಳು ಆಗೋದು ಸಾಮಾನ್ಯ. ಈ ಮೊದಲು ಗಾಯಗೊಂಡು ಮನೆಯಿಂದ ಸ್ಪರ್ಧಿಗಳು ಹೊರಗೆ ಹೋದ ಉದಾಹರಣೆಯೂ ಇದೆ. ಈ ಬಾರಿಯೂ ಹಾಗೆಯೇ ಆಗಿದೆ. ವಿನಯ್ ಗೌಡ (Vinay Gowda) ಬೆರಳಿಗೆ ಏಟಾಗಿದೆ. ಕಾರ್ತಿಕ್ ಗೌಡ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಇದರಿಂದ ಇಬ್ಬರೂ ಆಟ ಆಡುವ ಪರಿಸ್ಥಿತಿಯಲ್ಲಿ ಇಲ್ಲ. ಹೀಗಾಗಿ ವಿನಯ್, ಕಾರ್ತಿಕ್ ಅವರು ಒಂದು ಗೇಮ್​ನಿಂದಲೇ ಹೊರಗೆ ಇರೋ ಪರಿಸ್ಥಿತಿ ಬಂದೊದಗಿದೆ.

ವಿನಯ್ ಗೌಡ ಅವರು ಸದಾ ಅಗ್ರೆಸ್ಸಿವ್ ಆಗಿ ಆಡಲು ಆದ್ಯತೆ ನೀಡುತ್ತಾರೆ. ಈ ಬಾರಿಯೂ ಹಾಗೆಯೇ ಆಗಿದೆ. ‘ಕಲೆ ಒಳ್ಳೆಯದಲ್ಲ’ ಎನ್ನುವ ಟಾಸ್ಕ್ ನೀಡಲಾಗಿತ್ತು. ಒಂದಷ್ಟು ಬಟ್ಟೆ ನೀಡಲಾಗುತ್ತದೆ. ಜೊತೆಗೆ ಕಲರ್ ಕೂಡ ನೀಡಲಾಗುತ್ತದೆ. ಎದುರಾಳಿಗಳು ಬಟ್ಟೆಯನ್ನು ಕಲರ್ ಮಾಡದಂತೆ ನೋಡಿಕೊಳ್ಳಬೇಕು. ಈ ಟಾಸ್ಕ್​ನಲ್ಲಿ ವಿನಯ್ ಅವರು ಗಾಯಗೊಂಡಿದ್ದಾರೆ. ಅವರ ಬೆರಳಿಗೆ ತೀವ್ರವಾಗಿ ಗಾಯ ಆಗಿದೆ. ಈ ಕಾರಣದಿಂದ ಅವರು ಗೇಮ್​ನಿಂದ ಹೊರಗೆ ಇರುವ ಪರಿಸ್ಥಿತಿ ಬಂದೊದಗಿದೆ. ‘ವೈದ್ಯರ ಸಲಹೆಯಂತೆ ವಿನಯ್ ಗೇಮ್ ಆಡುವಂತಿಲ್ಲ’ ಎಂದು ಬಿಗ್ ಬಾಸ್ ಅನೌನ್ಸ್ ಮಾಡಿದ್ದಾರೆ.

ಕಾರ್ತಿಕ್ ಕೂಡ ಗಾಯಗೊಂಡಿದ್ದಾರೆ. ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಹೀಗಾಗಿ ಮಲಗಿ ಅವರು ರೆಸ್ಟ್ ಮಾಡುತ್ತಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಡಿಸೆಂಬರ್ 20ರಂದು ಈ ಎಪಿಸೋಡ್​ ಪ್ರಸಾರ ಕಂಡಿದೆ. ವಿನಯ್ ಹಾಗೂ ಕಾರ್ತಿಕ್ ಬೇಗ ಗುಣಮುಖರಾಗಲಿ ಎಂದು ಫ್ಯಾನ್ಸ್ ಕೋರಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ‘ಜಿಂಕೆ ರೊಚ್ಚಿಗೆದ್ದರೆ ಆಗೋದು ಸಿಂಹನೇ’; ವಿನಯ್, ಅವಿನಾಶ್​ನಿಂದ ರಣರಂಗವಾಯಿತು ಬಣ್ಣದಾಟ

ವಿನಯ್ ಅಗ್ರೆಸ್ ಆಗಿದ್ದರಿಂದ ಗೇಮ್ ರದ್ದಾದ ಉದಾಹರಣೆ ಇತ್ತು. ಹೀಗಾಗಿ ತುಕಾಲಿ ಸಂತೋಷ್ ಅವರು ವಿನಯ್​ಗೆ ಈ ವಿಚಾರದಲ್ಲಿ ಮೊದಲೇ ಎಚ್ಚರಿಕೆ ನೀಡಿದ್ದರು. ‘ದಯವಿಟ್ಟು ಅಗ್ರೆಸ್ ಆಗಿ ಆಡಿ ಗೇಮ್​ನ ಹಾಳು ಮಾಡಬೇಡಿ’ ಎಂದು ಮೊದಲೇ ಕೋರಿದ್ದರು. ಆದಾಗ್ಯೂ ವಿನಯ್ ಅಗ್ರೆಸ್ಸಿವ್ ಆಗಿ ನಡೆದುಕೊಂಡಿದ್ದಾರೆ. ಇದರಿಂದ ಗಾಯ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:07 am, Thu, 21 December 23